ಸ್ಯಾಂಡಲ್ ವುಡ್ ನಲ್ಲಿಂದು 3 ಚಿತ್ರಗಳು ರಿಲೀಸ್ – ರಾಜಿ, ಮೇಲೊಬ್ಬ ಮಾಯಾವಿ, ಶೋಕಿವಾಲ
ಪ್ರೇಕ್ಷಕರ ಮುಂದೆ ಇಂದು 4 ಚಿತ್ರಗಳು ಬಿಡುಗಡೆಯಾಗಲಿವೆ, ಬೇಸಿಗೆ ರಜೆ ಶುರುವಾದಂತೆ ಮತ್ತು ಬಿಗ್ ಚಿತ್ರಗಳ ಬಿಡುಗಡೆಯ ನಂತರ ಗ್ಯಾಪ್ ತಗೆದುಕೊಂಡು ಹೊಸಬರ ಮತ್ತು ಸಣ್ಣ ಬಜೆಟ್ ಚಿತ್ರಗಳು ಬಿಡುಗಡೆಯಾಗುತ್ತಿವೆ.
ರಾಘವೇಂದ್ರ ರಾಜ್‌ಕುಮಾರ್ ನಟನೆಯ ‘ರಾಜಿ’, ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಪೋಷಕ ನಟಿ ಪ್ರೀತಿ ಎಸ್ ಬಾಬು ನಿರ್ದೇಶನದ ಸಿನಿಮಾ ಇದು. ಕೌಟುಂಬಿಕ ಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗುತ್ತದೆಂಬ ನಂಬಿಕೆ ಚಿತ್ರತಂಡದ್ದು.
2 ಮೇಲೊಬ್ಬ ಮಾಯಾವಿ: ಸಂಚಾರಿ ವಿಜಯ್ ನಟನೆಯ ಕೊನೆಯ ಚಿತ್ರವಿದು. ಪತ್ರಕರ್ತ ನವೀನ್ ಕೃಷ್ಣ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿರುವ ಹರಳು ಮಾಫಿಯಾ ಸುತ್ತ ಕತೆ ಹೇಳಿರುವ ಸಿನಿಮಾ ಇದು.
ಶೋಕಿವಾಲ: ಅಜಯ್ ರಾವ್ ನಾಯಕನಾಗಿರುವ ಈ ಚಿತ್ರವನ್ನು ಜಾಕಿ ನಿರ್ದೇಶನ ಮಾಡಿದ್ದಾರೆ. ಸಂಜನಾ ಆನಂದ್ ಚಿತ್ರದ ನಾಯಕಿ. ಮನರಂಜನೆಯ ಪ್ರಧಾನ ಸಿನಿಮಾ ಇದಾಗಿದೆ. ಚಿತ್ರದ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ








