ನವೀನ್..
ಕೆಜಿಎಫ್ ಸ್ಮಾಷರ್ಶ್ ತಂಡದ ಸಾರಥಿ.

ಯಶಸ್ವಿ ವೃತ್ತಿಜೀವನದ ಜೊತೆಗೆ ಸಾಮಾಜಿಕ ಕಳಕಳಿ ಹಾಗೂ ಕ್ರೀಡಾ ಆಸಕ್ತಿಯನ್ನು ಸಮತೋಲನವಾಗಿ ಕಾಪಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಿಲ್ಲ. ಅದಕ್ಕೆ ಬದ್ಧತೆ, ಶಿಸ್ತು, ಪರಿಶ್ರಮ ಹಾಗೂ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಆಗ ಮಾತ್ರ ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯ. ಇಂತಹ ವ್ಯಕ್ತಿತ್ವವನ್ನು ಹೊಂದಿರುವ ಬೆಂಗಳೂರು ಮೂಲದ ಟೆಕ್ಕಿ ನವೀನ್ ಹಲವರಿಗೆ ಮಾದರಿಯಾಗಿದ್ದಾರೆ.
ವೃತ್ತಿಯಲ್ಲಿ ಟೆಕ್ಕಿಯಾಗಿರುವ ನವೀನ್, ಪ್ರತಿಷ್ಠಿತ ಎಂಎನ್‍ಸಿ ಕಂಪೆನಿಯಲ್ಲಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಹಾಗೂ ವ್ಯವಹಾರಗಳ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದಾರೆ. ಸದಾ ಹೊಸತನದ ಪ್ರಯೋಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸಿನತ್ತ ಹೆಜ್ಜೆಯನ್ನಿಡುತ್ತಿದ್ದಾರೆ.
ಬೆಂಗಳೂರು ಮೂಲದ ನವೀನ್ ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅಪಾರ ಸಂಖ್ಯೆಯ ಗೆಳೆಯರ ಬಳಗವನ್ನು ಹೊಂದಿರುವ ನವೀನ್ ಸ್ನೇಹ ಜೀವಿ. ಕಷ್ಟ ಅಂತ ಬಂದಾಗ ಹಿಂದೆ ಮುಂದೆ ಯೋಚನೆ ಮಾಡದೇ ನೆರವಿನ ಹಸ್ತ ನೀಡುವ ಹೃದಯವಂತ. ನೇರ ನಡೆ ನುಡಿಯ ವ್ಯಕ್ತಿತ್ವವನ್ನು ಹೊಂದಿರುವ ನವೀನ್ ಆಪ್ತಮಿತ್ರನೂ ಹೌದು.
ಅದರಲ್ಲೂ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ನವೀನ್, ಕ್ರಿಕೆಟ್, ಬ್ಯಾಡ್ಮಿಂಟನ್ ಆಟವನ್ನು ಮನಸಾರೆ ಪ್ರೀತಿಸ್ತಾರೆ. ಬಿಡುವಿನ ವೇಳೆಯಲ್ಲಿ ಸ್ನೇಹಿತರ ಬಳಗದೊಂದಿಗೆ ಆಡೋದು ರೂಢಿಯಾಗಿದೆ. ಹಾಗಂತ ಕ್ರೀಡೆ ಅನ್ನೋದು ನವೀನ್ ಅವರಿಗೆ ಕೇವಲ ಹವ್ಯಾಸ ಮಾತ್ರವಲ್ಲ. ಅದು ಜೀವನದ ಪ್ರೀತಿಯೂ ಆಗಿದೆ.
ನವೀನ್ ಅವರ ತಂದೆ ಚಾರ್ಟೆಡ್ ಅಕೌಂಟೆಂಟ್ (ಸಿಎ). ಅಪ್ಪನ ಹೆಸರು, ಯಶಸ್ಸಿನ ಹಿನ್ನಲೆ ಇದ್ರೂ ನವೀನ್ ಆಯ್ಕೆ ಮಾಡಿಕೊಂಡಿರುವುದು ಸ್ವಾವಲಂಬಿ ಬದುಕಿನ ಹಾದಿ. ಅಪ್ಪನ ನೆರಳಿನಲ್ಲಿ ಮುನ್ನಡೆದು ಇದೀಗ ಸ್ವತಂತ್ರ್ಯವಾಗಿ ಜೀವನ ನಡೆಸಿ ಸಮಾಜದ ವಿವಿಧ ರಂಗಗಳಲ್ಲಿ ತನ್ನದೇ ಆದ ಛಾಪು ಮೂಡಿಸಬೇಕು ಎಂಬ ಉದ್ದೇಶದಿಂದ ಕಾರ್ಯಪ್ರವೃತ್ತರಾಗಿದ್ದಾರೆ.
ಇದೀಗ 9 ಡ್ರೀಮ್ಸ್ ಸಂಸ್ಥೆಯ ಕನಸಿನ ಕೂಸು ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಗೂ ಕೈ ಜೋಡಿಸಿದ್ದಾರೆ. ತಾಂತ್ರಿಕ ನೈಪುಣ್ಯತೆ ಮತ್ತು ಕ್ರೀಡಾ ಮನೋಭಾವದ ಸಂಗಮವಾಗಿರುವ ನವೀನ್ ಅವರು ಕೆಜಿಎಪ್ ಸ್ಮಾಷರ್ಶ್ ತಂಡದ ಸಾರಥಿಯಾಗಿದ್ದಾರೆ. ಬಿಡುವಿಲ್ಲದ ಕೆಲಸ, ವೃತ್ತಿ ಬದುಕಿನ ಜವಾಬ್ದಾರಿಯ ಜೊತೆಗೆ ಸಮಾಜ ಸೇವೆ, ಕ್ರೀಡಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನವೀನ್ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.






