ಮೂವರು ಹೈಬ್ರಿಡ್ ಉಗ್ರರನ್ನು ಬಂಧಿಸಿದ ಕಾಶ್ಮೀರ್ ಪೊಲೀಸರು
ಜಮ್ಮು ಕಾಶ್ಮೀರ: ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಮೂವರು ಹೈಬ್ರಿಡ್ ಉಗ್ರರರನ್ನು ಜಮ್ಮು & ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಹೈಬ್ರಿಡ್ ಉಗ್ರರರನ್ನು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ನ ಹೈಗಾಮ್ ಪ್ರದೇಶದಲ್ಲಿ ಬಂಧಿಸಿರುವುದಾಗಿ ಜಮ್ಮು & ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಇತ್ತೀಚಿಗೆ ಸ್ಥಳೀಯರಲ್ಲದ ಜನರ ಹತ್ಯೆಗಳು ಮತ್ತು ವಿವಿಧೆಡೆ ನಡೆದ ಗ್ರೆನೇಡ್ ದಾಳಿಗಳ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದರು.
On a specific input, Srinagar Police & Army (50 RR) arrested a hybrid terrorist namely Sheikh Sahid Gulzar of Muchhwa, Badgam from Nowgam, Srinagar. Incriminating material including Pistol & live ammunition was recovered from him. Case has been registered under relevant sections. pic.twitter.com/F5nUxBOEi9
— Srinagar Police (@SrinagarPolice) May 1, 2022
ಈ ಹಿನ್ನೆಲೆಯಲ್ಲಿ ವಿವಿಧ ಸ್ಥಳಗಳಿಂದ ಶಂಕಿತರನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ಚೀನಾ ನಿರ್ಮಿತ ಪಿಸ್ತೂಲ್ಗಳು, ಮದ್ದುಗುಂಡುಗಳು ಹಾಗೂ ಇತರ ಅಪರಾಧ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹೈಬ್ರಿಡ್ ಉಗ್ರರೆಂದರೆ ಯಾರು?: ಭಯೋತ್ಪಾದನಾ ಸಂಘಟನೆಗಳೊಂದಿಗೆ ಸೇರಿಕೊಂಡು ದಾಳಿ ನಡೆಸುವ, ಒಂದು ಅಥವಾ ಎರಡು ಬಾರಿ ದಾಳಿ ನಡೆಸಿ ಮರೆಯಾಗುವ ಹಾಗೂ ಭದ್ರತಾ ಪಡೆಗಳ ಬಳಿಯಿರುವ ಉಗ್ರರ ಪಟ್ಟಿಯಲ್ಲಿರದ ಉಗ್ರರನ್ನು ಹೈಬ್ರಿಡ್ ಉಗ್ರರು ಎಂದು ಕರೆಯಲಾಗುತ್ತದೆ.