3-year child complained against mother-ತನ್ನ ಕ್ಯಾಂಡಿ ಕದ್ದ ತಾಯಿ ವಿರುದ್ಧ ದೂರು ನೀಡಲು ಪೊಲೀಸರ ಬಳಿ ತೆರಳಿದ 3 ವರ್ಷದ ಮಗು
ಹೈದರಾಬಾದ್: ಈಗತಾನೆ ಪ್ರಪಂಚದ ಆಗು ಹೊಗುಗಳನ್ನು ಕಲಿಯುತ್ತಿರುವ ಪುಟ್ಟ ಮಗು ಒಂದು ತನ್ನ ತಾಯಿಯ ವಿರುದ್ದ ಬೇಸರಗೊಂಡು ತನ್ನ ಪುಟ್ಟ ಪ್ರಪಂಚದ ದೋಡ್ಡ ಸಮಸ್ಯೆಯನ್ನು ಪೊಲೀಸರಿಗೆ ತಿಳಿಸಲೆಂದು ಠಾಣೆಯ ಮೆಟ್ಟಿಲು ಏರಿದೆ.
ಹೌದು, ನೀವು ಸರಿಯಾಗಿ ಓದಿದ್ದೀರಿ ಪುಟ್ಟ ಮಗುವೊಂದು ತನ್ನ ತಾಯಿ ತನ್ನ ಕ್ಯಾಂಡಿ ಚಾಕಲೇಟ್ ಗಳನ್ನು ಕದಿಯುತ್ತಿದ್ದಾಳೆ ಎಂದು 3 ವರ್ಷದ ಮಗು, ಕ್ಯಾಂಡಿ ಚಾಕಲೇಟ್ ಕದ್ದ ತಾಯಿಯ ವಿರುದ್ಧ ದೂರು ದಾಖಲಿಸಲು ತನ್ನ ತಂದೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಒತ್ತಾಯಿಸಿದ್ದಾನೆ.
ಘಟನೆಯನ್ನು ಪೊಲೀಸರಿಗೆ ವಿವರಿಸಿದ ಮಗುವಿನ ತಂದೆ ಮಗುವಿಗೆ ಕಾಡಿಗೆಯನ್ನು ಹಚ್ಚುತ್ತಿರುವಾಗ ಮಗು ಕೊಪಗೊಂಡು ತನ್ನ ಕೈಯಲ್ಲಿರುವ ಕ್ಯಾಂಡಿಯನ್ನು ಬಿಸಾಡಿದ್ದಕ್ಕೆ ತಾಯಿ ಮೆತ್ತಗೆ ಕೆನ್ನೆಗೆ ತಟ್ಟಿದ್ದಾರೆ ಆ ಗ ಕೊಪ ಗೊಂಡ ಮಗು ತಾಯಿಯೊಂದಿಗೆ ಮುನಿಸಿಕೊಂಡಿತ್ತು . ಈ ಘಟನೆಯು ಮಧ್ಯಪ್ರದೇಶದ ಬುರ್ಹಾನ್ಪುರದ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿದ್ದು
ಈ ವಿಡಿಯೋ ಸಾಮಾಜಿಕ ಜಾಲತಾಣಗಲಲ್ಲಿ ವೈರಲ್ ಆಗುತ್ತಿದ್ದೆ, ಈ ವಿಡಿಯೋದಲ್ಲಿ ಪುಟ್ಟ ಹುಡುಗನು ಒಂದು ಕಾಗದದ ಮೇಲೆ “ಸಹಿ” ಮಾಡುವುದನ್ನು ನೋಡಬಹುದಾಗಿದೆ. ತನ್ನ ದೂರನ್ನು ದಾಖಲಿಸಿಕೊಂಡಿದ್ದರೆ ಎಂದು ತಿಳಿಸಲು ನಟಿಸಿದ ಮಹಿಳಾ ಅಧಿಕಾರಿಯನ್ನು ನೋಡಬಹುದಾಗಿದೆ.
ಈ ಘಟನೆಯು ಮಧ್ಯಪ್ರದೇಶದ ಬುರ್ಹಾನ್ಪುರದ ಪೊಲೀಸ್ರು ಸಾಮಾಜೀಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರೆ .
3 ವರ್ಷದ ಮಗುವಿನ ದೂರನ್ನು ಸ್ವೀಕರಿಸಲು ನಟಿಸಿದ ಮಹಿಳಾ ಅಧಿಕಾರಿ ಸೇರಿದಂತೆ ಅಲ್ಲಿದ್ದವರೆಲ್ಲರೂ ಅವನ ದೈರ್ಯಕ್ಕೆ ಸಂತಸ ಪಟ್ಟರು , ಈ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ಪೊಲೀಸರನ್ನ ಕಂಡರೆ ಹೆದರುತ್ತಾರೆ ಆದರೆ ಈ ಹುಡುಗನ ದೈರ್ಯವನ್ನು ಕಂಡು ಮೆಚ್ಚಿದ್ದಾರೆ.
ತಾಯಿಯನ್ನು ಬಂಧಿಸುವುದಾಗಿ ಹೇಳಿ ಮನೆಗೆ ಹಿಂತಿರುಗುವಂತೆ ಮಗುವನ್ನು ಮನವೊಲಿಸುವ ಮೊದಲು ಅಲ್ಲಿದ್ದ ಎಲ್ಲರೂ ಹೊಟ್ಟೆಹುಣ್ಣಾಗುವ ಹಾಗೆ ನಕ್ಕು ಸಂತೈಸಿ ಕಳುಹಿಸಿದ್ದಾರೆ.
A 3-year child complained against mother was present