ಬಾಲಕಿಯ ರಕ್ಷಿಸುವುದನ್ನು ನೋಡಲು ಹೋಗಿ ಅದೇ ಬಾವಿಗೆ ಬಿದ್ದ 30 ಮಂದಿ..!
ಮಧ್ಯಪ್ರದೇಶ : ಬಾಲಕಿಯೊಬ್ಬಳು ಆಟವಾಡುತ್ತಾ ಇದ್ದ ವೇಳೆ ಬಾವಿಗೆ ಬಿದ್ದಿದ್ದಳು.. ಆ ಬಾಲಕಿಯ ರಕ್ಷಣೆ ಮಾಡುವುದನ್ನು ನೋಡಲು ಅಲ್ಲಿಗೆ ಹೋಗಿದ್ದ 30 ಮಂದಿ ಅದೇ ಬಾವಿಗೆ ಬಿದ್ದಿದ್ದಾರೆ.. ಆ 30 ಜನರ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ.. ಈ ಆಘಾತಕಾರಿ ಘಟನೆ ನಡೆದಿರೋದು ಮಧ್ಯಪ್ರದೇಶದಲ್ಲಿ.
ಗುರುವಾರ ಸಂಜೆ ವಿದಿಶಾ ಜಿಲ್ಲೆಯಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಗಂಜ್ ಬಸೋಡಾದಲ್ಲಿ ಈ ಘಟನೆ ನಡೆದಿದೆ. 50 ಅಡಿ ಆಳವಿರುವ ಬಾವಿಯಲ್ಲಿ 20 ಅಡಿಯಷ್ಟು ನೀರು ತುಂಬಿತ್ತು.
World Snake Day: ಇವುಗಳ ವಿಷಕ್ಕೆ ಪವರ್ ಹೆಚ್ಚು.. Most Dangerous ಹಾವುಗಳ ಡಿಟೈಲ್ಸ್
ಘಟನೆಯಲ್ಲಿ ಬಾವಿಗೆ ಬಿದ್ದ 30 ಮಂದಿಯಲ್ಲಿ ಒಟ್ಟು 19 ಮಂದಿಯನ್ನು ಸುರಕ್ಷಿತವಾಗಿ ಮೇಲೆತ್ತಲಾಗಿದೆ. ಹಾಗೆಯೇ 7 ಮಂದಿಯ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಇನ್ನೂ ಉಳಿದವರು ನಾಪತ್ತೆಯಾಗಿದ್ದಾರೆ.. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಇತ್ತ ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ಕೂಡ ಸ್ಥಳದಲ್ಲಿ ಬೀಡುಬಿಟ್ಟಿವೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಬಾಲಕಿ ಬಾವಿಗೆ ಬಿದ್ದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಇತ್ತ ಬಾವಿ ಹತ್ತಿರ ಸ್ಥಳೀಯರು ನೋಡುತ್ತಾ ನಿಂತಿದ್ದರು. ಇದೇ ವೇಳೆ ಮಣ್ಣು ಕುಸಿದು ನಿಂತಿದ್ದವರು ಕೂಡ ಬಾವಿಗೆ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಶಿವರಾಜ್ ದಿಂಗ್ ಚೌಹಾಣ್ ತಿಳಿಸಿದ್ದಾರೆ.