World Snake Day: ಇವುಗಳ ವಿಷಕ್ಕೆ ಪವರ್ ಹೆಚ್ಚು.. Most Dangerous ಹಾವುಗಳ ಡಿಟೈಲ್ಸ್

1 min read
world-snake

World Snake Day: ಇವುಗಳ ವಿಷಕ್ಕೆ ಪವರ್ ಹೆಚ್ಚು.. ಮೋಸ್ಟ್ ಡೇಂಜರಸ್ ಹಾವುಗಳ ಡಿಟೈಲ್ಸ್

ಈ ಭೂಮಿಯಲ್ಲಿ ಸುಮಾರು 4,000 ಜಾತಿಯ ಹಾವುಗಳಿವೆ. ಇವುಗಳಲ್ಲಿ, 650 (25 ಪ್ರತಿಶತ) ಕ್ಕೂ ಹೆಚ್ಚು ಪ್ರಭೇದಗಳ ಹಾವುಗಳು ಮಾತ್ರವೇ ಹೆಚ್ಚು ವಿಷಪೂರಿ ಎಂದು ಸೈಂಟಿಸ್ಟ್ಸ್ ಹೇಳಿದ್ದಾರೆ. ಅದರಲ್ಲೂ 200 ಜಾತಿಗಳ ಹಾವುಗಳಿಂದ ಮಾತ್ರ ಮನುಷ್ಯರಿಗೆ ಹೆಚ್ಚು ಅಪಾಯ ಎಂದು ತಿಳಿಸಿದ್ದಾರೆ. ಆದ್ರೆ ಇದನ್ನು ತಿಳಿಯದೇ ಹಾವು ಕಾಣಿಸಿದ್ರೆ ಸಾಕು ಅದನ್ನು ಸಾಯೋಕೆ ಮುಂದಾಗುತ್ತೇವೆ. ಈ ಕಾರಣಕ್ಕಾಗಿ ಅವುಗಳ ರಕ್ಷಣೆ ಮತ್ತು ಅವುಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಜುಲೂ 16 ರಂದು ವಲ್ರ್ಡ್ ಸ್ನೇಕ್ ಡೇ ಆಚರಿಸಲಾಗುತ್ತಿದೆ.

ಇನ್ನು ನಮಗೆ ಅಪಾಯನ್ನುಟ್ಟು ಮಾಡುವ ಅತ್ಯಂತ ವಿಷಪೂರಿತ ಹಾವುಗಳು ಯಾವುವು ಅಂತ ನೋಡುವುದಾದ್ರೆ..

ಈಸ್ಟ್ರಾನ್ ಬ್ರೌನ್ ಸ್ನೇಕ್

world-snake

ಇದು ಆಸ್ಟ್ರೇಲಿಯಾದಲ್ಲಿ ಕಂಡುಬರುವ ಅತ್ಯಂತ ಅಪಾಯಕಾರಿ ಹಾವು ಪ್ರಭೇದ. ಇದು ನಮ್ಮನ್ನುನ ಕಚ್ಚಿದ ಕೆಲವೇ ನಿಮಿಷಗಳಲ್ಲಿ ನಮ್ಮ ದೇಹದಲ್ಲಿ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಏಕಾಏಕಿ ಮೆದುಳಿಗೆ ಸೇರಿ ಪಾಶ್ರ್ವವಾಯು ಉಂಟಾಗುತ್ತದೆ. ಅಂತಿಮವಾಗಿ ರಕ್ತ ಹೆಪ್ಪುಗಟ್ಟಿ ಪ್ರಾಣ ಹೋಗುತ್ತದೆ

ಟೈಗರ್ ಸ್ನೇಕ್

world-snake

ಎಲಾಪಿಡ್ ಕುಲದ ಈ ಟೈಗರ್ ಹಾವುಗಳು ಆಸ್ಟ್ರೇಲಿಯಾದ ನೆಲದಲ್ಲಿ ಕಂಡುಬರುತ್ತವೆ. ಅದರ ಮೇಲಿರುವ ಮಚ್ಚೆಗಳ ಕಾರಣದಿಂದಾಗಿ ಇವುಗಳನ್ನು ಟೈಗರ್ ಸ್ನೇಕ್ ಎಂದು ಕರೆಯುತ್ತಾರೆ. ಹೆಚ್ಚಾಗಿ ವಸತಿ ಪ್ರದೇಶಗಳಲ್ಲಿ ಕಾಣಿಸಿರುವ ಈ ಹಾವುಗಳು ಅರ್ಧ ಘಂಟೆಯಲ್ಲಿ ಮನುಷ್ಯನ ಸಾವಿಗೆ ಕಾರಣವಾಗುತ್ತವೆ. ಟೈಗರ್ ಸ್ನ್ಯಾಕ್ಸ್ ವಿಷವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಸ್ನಾಯುಗಳಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ. ಕೋಬ್ರಾ ಶೈಲಿಯಲ್ಲಿ ಎಡೆಬಿಚ್ಚಿತ್ತದೆ.

ಇನ್ ಲ್ಯಾಂಡ್ ಟೈಪಾನ್

world-snake

ಇದು (ಅನಧಿಕೃತವಾಗಿ) ಭೂಮಿಯ ಮೇಲಿನ ಅತ್ಯಂತ ವಿಷಪೂರಿತ ಹಾವು. ಇದು ನೂರು ಗ್ರಾಂ ವಿಷದಿಂದ ನೂರು ಜನರನ್ನು ಕೊಲ್ಲುವ ಸಾಮಥ್ರ್ಯವಿರುವ ಹಾವು. ಇದು ಒಂದೇ ಬಾರಿ ನೂರು ಗ್ರಾಂ ವಿಷವನ್ನು ಹೊರಹಾಕುತ್ತದೆ. ಇದರ ವಿಷ ಒಂದು ಗಂಟೆಯೊಳಗೆ ವ್ಯಕ್ತಿ ಪ್ರಾಣ ತೆಗೆಯುತ್ತದೆ. ಇವು ಜನರಿಂದ ದೂರ.. ಏಕಾಂತವಾಗಿ ಬದುಕುತ್ತವೆ. ಈ ಹಾವಿಗೆ ನಾಚಿಕೆ ಹೆಚ್ಚು ಎಂದು ಸಹ ಹೇಳುತ್ತಾರೆ. ಮನುಷ್ಯರನ್ನು ನೋಡಿದರೆ.. ಅವು ವೇಗವಾಗಿ ಹೋಗಿ ಒಂದು ಮೂಲೆಯಲ್ಲಿ ಅಡಗಿಕೊಳ್ಳುತ್ತವೆ. ಇದೇ ಕಾರಣಕ್ಕೆ ಈ ಡೇಂಜರಸ್ ಹಾವುಗೆ ‘ಶೈ ಸ್ನೇಕ್’ ಎಂದು ಕೂಡ ಕರೆಯುತ್ತಾರೆ.

ರಸ್ಸೆಲ್ಸ್ ವೈಪರ್

world-snake

ರಸ್ಸೆಲ್ ವೈಪರ್ ಏಷ್ಯಾದ ಅತ್ಯಂತ ಅಪಾಯಕಾರಿ ಹಾವು ಜಾತಿಯಾಗಿದೆ. ಇದು ಹೆಚ್ಚಿನ ಸಾವುಗಳಿಗೆ ಕಾರಣವಾಗುವ ಹಾವು ಕೂಡ ಹೌದು..! ಇದನ್ನು ಗುರುತಿಸುವುದು ತುಂಬಾ ಸುಲಭ. ಅದು ಭಯಪಡುವಾಗ ದೊಡ್ಡ ಶಬ್ದ ಮಾಡುತ್ತದೆ. ಕಚ್ಚಿದ ಕ್ಷಣದಿಂದಲೇ ವಿಷವು ದೇಹದೊಳಗೆ ನುಗ್ಗುತ್ತದೆ.

ಬ್ಲೂ ಕ್ರೊಯಟ್

world-snake
ಏಷ್ಯಾದ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಇದು ಕೂಡ ಒಂದಾಗಿದೆ. ಇದರ ವಿಷವು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಚಿಕಿತ್ಸೆ ಸಿಕ್ಕರೂ ಶೇಕಡಾ 50 ರಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ.
ವಿಚಿತ್ರವೆಂದರೆ ಈ ಹಾವುಗಳು ವಿಷಪೂರಿತ ಹಾವುಗಳನ್ನೇ ಆಹಾರವನ್ನಾಗಿ ಸೇವಿಸುತ್ತವೆ.

ಬೂಮ್ ಸ್ಲಾಂಗ್

world-snake

ಕ್ಲೋಬ್ರಿಡ್ಜ್ ಕುಟುಂಬದಲ್ಲಿ ಇದು ಅತ್ಯಂತ ವಿಷಪೂರಿತ ಹಾವು ಪ್ರಭೇದ ಇದಾಗಿದೆ. ಇವು ಬಣ್ಣ ಬಣ್ಣವಾಗಿರುತ್ತವೆ. ಇದರ ವಿಷವು ಅಷ್ಟೊಂದು ವಿಷಪೂರಿತ ಅಲ್ಲದಿದ್ದರೂ ರಕ್ತಸ್ರಾವದಿಂದಾಗಿ ಪ್ರಾಣ ಹೋಗುತ್ತದೆ. ಅದಕ್ಕಾಗಿಯೇ ಇದನ್ನು ಅಪಾಯಕಾರಿ ಹಾವುಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಈ ಹಾವುಗಳು ಜನರನ್ನು ನೋಡಿದರೆ ಅವರಿಂದ ದೂರ ಹೋಗುತ್ತದೆ. ಇವು ದಾಳಿ ಮಾಡುವುದು ತುಂಬಾ ತೀರ.

ಮೊಜಾವೆ ರಾಟಲ್ಸ್ನೇಕ್

world-snake
ಅಮೆರಿಕದ ಅತ್ಯಂತ ವಿಷಪೂರಿತ ಹಾವುಗಳ ಪಟ್ಟಿ ಇದಕ್ಕೆ ಮೊದಲ ಸ್ಥಾನ. ಇದರ ವಿಷ ರಕ್ತ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಈ ಹಾವುಗಳಿಂದಲೇ ನೈರುತ್ಯ ಅಮೆರಿಕಾ ಪ್ರಾಂತ್ಯದಲ್ಲಿ ಹೆಚ್ಚು ಸಾವುಗಳು ಸಂಭಸುತ್ತವೆ.

ಸ್ಟಿಲೆಟ್ಟೊ ಹಾವು

world-snake

ಅತ್ಯಂತ ಸಣ್ಣದಾಗಿದ್ದು, ಪೊದೆಗಳಲ್ಲಿ ಅಡಗಿಕೊಳ್ಳುವ ಹಾವಿದು. ಆದರೆ, ವಿಷಪೂರಿತವಾದದ್ದು. ಅದೃಷ್ಟವಶಾತ್, ಇದು ಹೆಚ್ಚು ವಿಷವನ್ನು ಕಕ್ಕುವುದಿಲ್ಲ. ಆದರೆ, ಇದರ ವಿಷವು ಎಷ್ಟು ಅಪಾಯಕಾರಿ ಅಂದ್ರೆ ನಮ್ಮ ಅಂಗಾಂಶಗಳನ್ನು ಹಾನಿಗೊಳಿಸುವುದರ ಜೊತೆಗೆ ಹೃದಯದ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ. ಇದಲ್ಲದೆ, ಇವುಗಳನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಇದರ ಕೋರೆಹಲ್ಲುಗಳು ಸಹ ವಿಚಿತ್ರವಾಗಿ ಬಾಗಿ ಇರುತ್ತವೆ.

ಸಾ ಸ್ಕೇಲ್ಡ್ ವೈಪರ್

world-snake
ಅದು ಅಂತಹ ವಿಷಪೂರಿತ ಹಾವು ಅಲ್ಲ. ಆದರೆ, ಅತ್ಯಂತ ಅಪಾಯಕಾರಿ ಜಾತಿಗಳಲ್ಲಿ ಒಂದಾಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇವು ಕಂಡುಬರುತ್ತವೆ. ಗಾತ್ರದಲ್ಲಿ ಸಣ್ಣದಿದ್ದರೂ ತುಂಬಾ ಆಕ್ರಮಣಕಾರಿಯಾಗಿ ಇವು ದಾಳಿ ಮಾಡುತ್ತವೆ. ವೈಪರ್ ಜಾತಿಯ ಹಾವುಗಳಂತೆ ಇವು ಕಚ್ಚಿದರೇ ರಕ್ತ ಹೆಪ್ಪುಗಟ್ಟಿ ಸಾಯುತ್ತೇವೆ.

ಕಿಂಗ್ ಕೋಬ್ರಾ

world-snake

ಈ ಜಾತಿಯ ಹಾವುಗಳು ವಿಷದ ಬ್ರಾಂಡ್ ಅಂಬಾಸಿಡರ್ ಗಳು. ಕಿಂಗ್ ಕೋಬ್ರಾ ಅತ್ಯಂತ ಉದ್ದವಾದ ವಿಷಪೂರಿತ ಹಾವು. ಇದರಲ್ಲಿ ಹೆಚ್ಚು ವಿಷ ಇಲ್ಲದಿದ್ದರೂ ಹೆಚ್ಚು ಪ್ರಮಾಣದಲ್ಲಿ ವಿಷವನ್ನು ಕಕ್ಕುತ್ತದೆ. ಭಯಂಕರವಾಗಿ ಕಚ್ಚುತ್ತದೆ. ಈ ಜಾತಿಯ ಹೆಣ್ಣು ಹಾವು ಗೂಡು ಕಟ್ಟಿ ಮೊಟ್ಟೆ ಹಾಕಿದಾಗ, ಗಂಡು ಹಾವಿನೊಂದಿಗೆ ಸೇರಿ ಕಾವಲು ಕಾಯುತ್ತವೆ.

ಇವುವಲ್ಲದೆ ಕೋಸ್ಟಲ್ ಟೈಫೂನ್, ಬಾಂಡೆಡ್ ಕ್ರೊಯ್ಡಾನ್, ಕಾಮನ್ ಡೆತ್ ಆರ್ಡರ್, ಸೀ ಬೀಚ್ ಸೀ ಸ್ನೇಕ್, ಆಫ್ರಿಕನ್ ಡೇಂಜರಸ್ ಸ್ನೇಕ್ ಬ್ಲ್ಯಾಕ್ ಮಾಂಬಾ, ಚೈನೀಸ್ ಕಾಪರ್ಹೆಡ್, ದಕ್ಷಿಣ ಅಮೆರಿಕಾದ ಬುಷ್ ಮಾಸ್ಟರ್, ಸ್ನೇಕ್ ಬಾಲ್, ಸ್ನೇಕ್, ಹಾವುಗಳು ಅತ್ಯಂತ ವಿಷಪೂರಿತ ಅಪಾಯಕಾರಿ ಹಾವುಗಳ ಪಟ್ಟಿನಲ್ಲಿ ನಂತರದ ಸ್ಥಾನದಲ್ಲಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd