ADVERTISEMENT
Sunday, July 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

fifa wolrd cup 2026- ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ… 🐍⚽🔥..!

admin by admin
July 14, 2026
in Sports, Newsbeat, ಕ್ರೀಡೆ
Cristiano Ronaldo

Cristiano Ronaldo

Share on FacebookShare on TwitterShare on WhatsappShare on Telegram

ಫಿಫಾ ವಿಶ್ವಕಪ್‍ನ ಮುಕುಟವಿಲ್ಲದ ಫುಟ್‍ಬಾಲ್ ಜಗತ್ತಿನ ಚಕ್ರವರ್ತಿಕ್ರಿಸ್ಟಿಯಾನೊ ರೊನಾಲ್ಡೊ..!

ಆ ಒಂದು ಸೋಲು..! ಆ ಒಂದು ಪಂದ್ಯ..! ತನ್ನ ಪಾಲಿನ ಫಿಫಾ ವಿಶ್ವಕಪ್‍ನ ಕೊನೆಯ ಪಂದ್ಯವಾಗಿರಲಿಲ್ಲ. ಅದು ಫುಟ್‍ಬಾಲ್ ಜಗತ್ತಿನ ಅಧಿಪತಿಯ ಸಾಮ್ರಾಜ್ಯಕ್ಕೆ ಕಾರ್ಮೋಡ ಕವಿದ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಐತಿಹಾಸಿಕ ಸೋಲಿನ ಪಂದ್ಯವಾಗಿತ್ತು.

Related posts

Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

July 19, 2026
ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

July 19, 2026

ಹೌದು, ಆತನ ವೃತ್ತಿಪರ ಬದುಕಿನಲ್ಲಿ ಎಂದೂ ಕಾಣದ ಕತ್ತಲು ಆ ಕ್ಷಣ ಆವರಿಸಿಕೊಂಡಿತ್ತು. ತಂಗಾಳಿ ಬೀಸುತ್ತಿದ್ದ ಇಳಿ ಸÀಂಜೆಯ ವೇಳೆ ಆತ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಗ್ಯಾಲರಿಯಲ್ಲಿದ್ದ ಅಭಿಮಾನಿಗಳ ವೇದನೆ – ರೋಧನೆಗೆ ಆತನ ಹೃದಯ ಮತ್ತಷ್ಟು ಘಾಸಿಗೊಂಡಿತ್ತು. ಸೋಲಿನ ಬರೆ, ಅಭಿಮಾನಿಗಳ ನಂಬಿಕೆಯನ್ನು ಹುಸಿಗೊಳಿಸಿದ್ದ ನೋವನ್ನು ಸಹಿಸಲಾಗದೇ ಕಣ್ಣಲ್ಲಿ ಕಣ್ಣೀರು ಸುರಿಯುತ್ತಿತ್ತು. ಕನಸನ್ನು ನನಸು ಮಾಡುವ ಹಾದಿಯಲ್ಲಿ ಕೈ ಜಾರಿದ ಆ ಕ್ಷಣ ಆತನ ಜೀವನದಲ್ಲಿ ಮರೆಯಲಾಗದ ಗಾಯವಾಗಿ ಉಳಿಯಿತು. ಒಂದಲ್ಲ..ಎರಡಲ್ಲ.. ಆರು ಬಾರಿ ಗಿರಿ ವಜ್ರದಂತೆ ಹೊಳೆಯುತ್ತಿರುವ ಫಿಫಾ ವಿಶ್ವಕಪ್ ಟ್ರೋಫಿಗೆ ಮುತ್ತಿಡುವ ಆಸೆ ಕಣ್ಣೆದುರೇ ಭಗ್ನಗೊಂಡಿತ್ತು.

ಆಗ ನೆನಪಾಗಿದ್ದೇ ಈ ಹಾಡಿನ ಸಾಲುಗಳು.. “ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ…”

ಹೌದು, ಆತನ ಆಟದ ಅದ್ಭುತ ವೈಖರಿ ನೂರಾರು ನೆನಪುಗಳನ್ನು ಮೂಡುವಂತೆ ಮಾಡುತ್ತವೆ. ಮೈದಾನದಲ್ಲಿ ಜಾದು ಮಾಡಿರುವ ಬೈಸಿಕಲ್ ಕಿಕ್‍ಗಳು, ಮೂರು ಹೆಜ್ಜೆ ಹಿಂದೆ ಬಂದು ಎರಡು ಕಾಲುಗಳನ್ನು ಅಗಲಿಸಿ ನಿಲ್ಲುವ ಆತನ ಪೆನಾಲ್ಟಿ ಕಿಕ್‍ನ ಭಂಗಿ. ಎದೆಯನ್ನು ಉಬ್ಬಿಸಿ, ದೀರ್ಘವಾದ ಉಸಿರನ್ನು ತೆಗೆದುಕೊಂಡು, ತನ್ನ ತೀಕ್ಷ್ಣವಾದ ಕಣ್ಣುಗಳಿಂದ ಗೋಲು ಕೀಪರ್‍ನನ್ನು ನೋಡುವ ನೋಟ. ಪ್ರಖರ ಸೂರ್ಯನಂತೆ ಪ್ರಜ್ವಲಿಸುತ್ತಿರುವ ಆ ಮುಖದ ತೇಜಸ್ಸು.
ರಾಜ ಗಾಂಭೀರ್ಯದ ನಡೆ. ಚೆಂಡನ್ನು ರಾಕೆಟ್ ವೇಗದಲ್ಲಿ ಒದೆಯುವ ಕಾಲಿನ ತಾಕತ್ತು. ಸೂಪರ್ ಮ್ಯಾನ್ ಹೆಡ್ಡರ್‍ಗಳು, ಸೀಯೂ….ಸಿಗ್ನಚರ್ ಸ್ಟೈಲ್‍ನ ಸೆಲೆಬ್ರೆಷನ್ ಸೇರಿದಂತೆ ಆತನ ಜ್ವಾಲಮುಖಿಯಂತಹ ಆಟದ ಹೈಲೈಟ್ಸ್‍ಗಳು ಒಂದು ಕ್ಷಣ ಕಣ್ಣ ಮುಂದೆ ಹಾದು ಹೋಗುತ್ತವೆ.

ನಿಜ, ಆ ಸೋಲಿನ ರಾತ್ರಿಯಲ್ಲಿ ಒಂಟಿಯಾಗಿ ಆತ ಎಷ್ಟು ಸಂಕಟಪಟ್ಟಿರಬಹುದು ಎಂಬುದು ಆತನಿಗೆ ಮಾತ್ರ ಗೊತ್ತು. ಆದ್ರೆ, ಸೂರ್ಯೋದಯದ ಮೊದಲ ಕಿರಣಗಳು ಭೂವಿಯನ್ನು ಸ್ಪರ್ಶಿಸಿದಾಗ ಆತನ ನಾಮ ಸ್ಮರಣೆಯನ್ನು ಜಗವೆಲ್ಲಾ ಪಠಿಸುತ್ತಿತ್ತು. ಆತನ ಬಗ್ಗೆ ಏನೇ ಟೀಕೆ, ಟಿಪ್ಪಣಿಗಳು ಇರಲಿ.. ಆತನ ಬದುಕು, ಸಾಧನೆ, ಯಶಸು,್ಸ ಫುಟ್‍ಬಾಲ್ ಜಗತ್ತಿನ ಒಂದು ಅದ್ಭುತ ಮಹಾಕಾವ್ಯ..!

ಶಿಸ್ತು, ಬದ್ಧತೆ, ಹೋರಾಟ, ಪರಿಶ್ರಮ, ಛಲ, ಆತ್ಮವಿಶ್ವಾಸಕ್ಕೆ ಬರೀ ಫುಟ್‍ಬಾಲ್ ಮಾತ್ರವಲ್ಲ. ಇಡೀ ಕ್ರೀಡಾಜಗತ್ತಿನಲ್ಲಿ ಮೊದಲು ಕೇಳಿ ಬರುವ ಒಂದೇ ಒಂದು ಹೆಸರು ಅಂದ್ರೆ ಅದು…
ಕ್ರಿಸ್ಟಿಯಾನೊ ರೊನಾಲ್ಡೊ..!

ಅಂದ ಹಾಗೇ, ಸೋಲುಗಳು ಕ್ರಿಸ್ಟಿಯಾನೊಗೆ ಹೊಸತಲ್ಲ. ಯಾಕೆಂದ್ರೆ ಗೆಲುವಿನ ಸಂಭ್ರಮಗಿಂತÀ ಸೋಲುಗಳೇ ಆತನನ್ನು ಬದುಕಿನಲ್ಲಿ ಮತ್ತಷ್ಟು ಗಟ್ಟಿಗೊಳಿಸಿದೆ. ಪ್ರತಿ ಕಣ್ಣೀರು, ಆನಂದಬಾಷ್ಪದ ಹಿಂದೆ ಸಾವಿರಾರು ಗಂಟೆಗಳ ಕಾಲ ಸುರಿಸಿದ ಬೆವರಿನ ಹನಿಗಳ ಪರಿಶ್ರಮವಿದೆ. ದಾಖಲೆ ಸರದಾರನ ಪ್ರತಿ ಗೋಲುಗಳ ಹಿಂದೆ ಬಡತನದ ನೋವಿದೆ. ಚೆಂಡಿನ ಮೇಲೆ ಹಿಡಿತ ಸಾಧಿಸಿಕೊಂಡು ಮನಬಂದಂತೆ ಒದೆಯುವ ನಾಜೂಕಿನಲ್ಲಿ ಕೋಟ್ಯಂತರ ಅಭಿಮಾನಿಗಳ ನಂಬಿಕೆ ಇದೆ. ತನ್ನ ಕನಸುಗಳು ಭಗ್ನವಾದ್ರೂ ಕನಸು ಕಾಣುವ ಪ್ರತಿಯೊಬ್ಬ ಯುವ ಆಟಗಾರರಿಗೂ ಸ್ಪೂರ್ತಿಯ ಚಿಲುಮೆ ಇದೆÉ. ಎರಡು ದಶಕಗಳಿಂದ ಫುಟ್‍ಬಾಲ್ ಸಾಮ್ರಾಜ್ಯದ ಒಡೆಯನಾಗಿದ್ರೂ ಹಮ್ಮು ಬಿಮ್ಮು ಇಲ್ಲದೆ ಒಬ್ಬ ಸಾಮಾನ್ಯ ಆಟಗಾರನಂತೆ ಆಡುವ ಆಟಗಾರನ ಗುಣವಿದೆ.

ಇನ್ನೂ ಕುಗ್ಗಿಲ್ಲ ಸಿಆರ್ 7 ಬ್ರ್ಯಾಂಡ್ ಮೌಲ್ಯ..!

ಮೇಲ್ನೋಟಕ್ಕೆ ಹದಿಹರೆಯದ ಯುವಕರನ್ನು ನಾಚಿಸುವಂತಹ ಫಿಟ್‍ನೆಸ್ ಕಾಯ್ದುಕೊಂಡಿರಬಹುದು. ವಯಸ್ಸು ಕ್ರಿಸ್ಟಿಯ ದೇಹವನ್ನು ಕಾಡಿರಬಹುದು ದೇಹ ಸ್ವಲ್ಪ ಮಟ್ಟಿಗೆ ದಣಿದಿರಬಹುದು. ಆದ್ರೆ ಗೆಲುವಿನ ಹಸಿವು ಒಂಚೂರು ಕಡಿಮೆಯಾಗಿಲ್ಲ. ಸೋಲನ್ನು ಕಡೆಯ ತನಕ ಒಪ್ಪಿಕೊಳ್ಳಲು ಸಿದ್ಧನಿಲ್ಲ. ಗೆಲುವಿಗಾಗಿ ಮನಪೂರ್ವಕವಾಗಿ ಆಡುವ ಇವನಂತÀಹ ಆಟಗಾರ ಮತ್ತೊಬ್ಬನಿಲ್ಲ. ಪಡೆದಿರುವ, ಗೆದ್ದಿರುವ ಟ್ರೋಫಿಗಳು ಸಾಧನೆಯ ಮಂಟಪದಲ್ಲಿ ಧೂಳು ಹಿಡಿಯಬಹುದು. ಆದ್ರೆ ಸಿಆರ್ -7 ಬ್ರ್ಯಾಂಡ್‍ಗೆ ಮಾತ್ರ ಧೂಳು ಅಂಟಿಕೊಳ್ಳಲು ಸಾಧ್ಯನೇ ಇಲ್ಲ.

ಫುಟ್‍ಬಾಲ್ ಮೈದಾನದ ಕಾಳಿಂಗ ಸರ್ಪ..!

ಯಾಕಂದ್ರೆ ಕ್ರಿಸ್ಟಿ, ದಾಖಲಿಸಿರುವ ಪ್ರತಿ ಗೋಲುಗಳು, ಪ್ರತಿ ಪಾಸ್‍ಗಳು, ಆಕ್ರಮಣಕಾರಿ ಆಟದ ವೈಖರಿಗಳು.. ಪ್ರತಿ ಪಂದ್ಯದಲ್ಲೂ ವಿಭಿನ್ನ ಶೈಲಿಯ ತಂತ್ರಗಳು..ಎದುರಾಳಿ ಆಟಗಾರರನ್ನು ತಬ್ಬಿಬ್ಬುಗೊಳಿಸುವ ಕೌಶಲ್ಯಗಳು. ಮೈದಾನದಲ್ಲಿ ಕಾಳಿಂಗ ಸರ್ಪದಂತೆ ಬುಸುಗುಟ್ಟುವ ಆಕ್ರಮಕಾರಿ ಪ್ರವೃತ್ತಿಗಳು. ಯಾವುದು ಅಸಾಧ್ಯವೋ ಅದು ಸಾಧ್ಯ ಎನ್ನುವುದನ್ನು ವಿಶ್ವ ಫುಟ್‍ಬಾಲ್‍ಗೆ ಪರಿಚಯಿಸಿದ್ದ ರಣಬೇಟೆಗಾರ ಕ್ರಿಸ್ಟಿಯಾನೊ ರೊನಾಲ್ಡೊ.

ಟೀಕೆ- ಟಿಪ್ಪಣಿ, ಆರೋಪಗಳಿಗೆ ತಲೆಕೆಡಿಸಿಕೊಳ್ಳದ ಕ್ರಿಸ್ಟಿಯಾನೊ..!

ಸಹಜವಾಗಿ ಕ್ರಿಸ್ಟಿಯ ಆಟದ ಬಗ್ಗೆ ಗುಣಗಾನಗಳನ್ನು ಮಾಡುವುದು ಕೆಲವರಿಗೆ ಇಷ್ಟವಾಗದೇ ಇರಬಹುದು. ಕೆಲವರು ಸ್ವಾರ್ಥಿ ಅನ್ನಬಹುದು. ಅಹಂಕಾರಿ ಅಂತ ದೂಷಣೆ ಮಾಡಬಹುದು. ಇನ್ನು ಕೆಲವರು ದುಡ್ಡಿಗಾಗಿ ಆಡ್ತಾನೆ ಅಂತ ಕುಹಕವಾಡಬಹುದು. ಮತ್ತೆ ಕೆಲವರು ದಾಖಲೆ, ಯಶಸ್ಸಿಗಾಗಿ ಇನ್ನೂ ಆಡ್ತಾನೆ ಅಂತ ಟೀಕಿಸಬಹುದು. ಹಾಗೇ, 41ರ ಮುದುಕ ಅಂತ ವ್ಯಂಗ್ಯ ಕೂಡ ಮಾಡಬಹುದು. ನೇಮ್, ಫೇಮ್‍ಗಾಗಿ ಫಿಫಾ ವಿಶ್ವಕಪ್‍ನಲ್ಲಿ ಆಡ್ತಾ ಇದ್ದಾನೆ ಅಂತ ಹೀಯಾಳಿಸಬಹುದು. ಸ್ಟಾರ್ ವಾರ್‍ನಿಂದಾಗಿ ಚುಚ್ಚು ಮಾತುಗಳನ್ನು ಕೇಳಿಸಿಕೊಂಡಿರಬಹುದು. ಮಾಧ್ಯಮಗಳÀ ಕೆಂಗಣ್ಣಿಗೂ ಗುರಿಯಾಗಿರಬಹುದು. ಟೀಕೆ ಮಾಡಿದ್ದ ಮಾಧ್ಯಮ ಮಿತ್ರರರ ಜೊತೆ ಸಿಟ್ಟು ಮಾಡಿಕೊಂಡಿರಬಹುದು. ಆದ್ರೆ ಕ್ರಿಸ್ಟಿಯಾನೊ ಮಾತ್ರ ತಲೆಕೆಡಿಸಿಕೊಂಡಿಲ್ಲ. ಅಂದುಕೊಂಡ ಹಾದಿಯಲ್ಲಿ ಮುನ್ನಡೆದ ಅಪ್ರತಿಮ ಆಟಗಾರ.

ಸಾವಿರಾರು ಕೋಟಿಗಳ ಒಡೆಯ.. ಅಭಿಮಾನಿಗಳ ಪ್ರೀತಿಯ ಸಂಗಾತಿ..!

ನೆನಪಿಡಿ, ಕ್ರಿಸ್ಟಿಯಾನೊ ರೊನಾಲ್ಡೊಗೆ ಈ ಟೀಕೆ, ಆರೋಪಗಳು ಯಾವುದು ಕೂಡ ಹೊಸತೇನಲ್ಲ. ಕಳೆದ ಎರಡು ದಶಕಗಳಿಂದ ಎಲ್ಲವನ್ನೂ ಕೇಳಿಸಿಕೊಂಡು, ಅಷ್ಟೇ ತಾಳ್ಮೆಯಿಂದ ಸಹಿಸಿಕೊಂಡು ತನ್ನ ಆಟದಿಂದಲೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾನೆ. ಅಪರೂದ, ಮಹೋನ್ನತ ದಾಖಲೆಗಳನ್ನು ಬರೆದಿದ್ದಾನೆ. ಕಾಲ್ಚೆಂಡು ಲೋಕದ ಕಣ್ಮನಿಯಾಗಿದ್ದಾನೆ. ಸಿಆರ್-7 ಎಂಬ ಬ್ರ್ಯಾಂಡ್ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದಾನೆ. ಕೇವಲ ಆಟದಿಂದಲೇ ಸಾವಿರಾರು ಕೋಟಿಗಳ ಒಡೆಯನಾಗಿದ್ದಾನೆ. ಕೋಟಿ ಕೋಟಿ ಅಭಿಮಾನಿಗಳ ಅತ್ಯಂತ ಪ್ರೀತಿಯ ಸಂಗಾತಿಯಾಗಿದ್ದಾನೆ.

ಕೃತಜ್ಞತೆಯ ಅಪರಂಜಿ ಕ್ರಿಸ್ಟಿಯಾನೊ ರೊನಾಲ್ಡೊ..!

ಅಂದ ಹಾಗೇ, ವೈಯಕ್ತಿಕ ಬದುಕು, ವೃತ್ತಿಪರ ಬದುಕು ಏನು ಎಂಬುದನ್ನು ಕ್ರಿಸ್ಟಿಯಾನೊ ರೋನಾಲ್ಡೊ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ. ತಾನು ಬೆಳೆದು ಬಂದ ಹಾದಿಯಲ್ಲಿ ತನಗೆ ಸಹಾಯ ಮಾಡಿದವರನ್ನು ಕ್ರಿಸ್ಟಿ ಇಂದಿಗೂ ಮರೆತಿಲ್ಲ. ತಂದೆ, ತಾಯಿ, ಅಣ್ಣ, ಸಹೋದರಿಯರ ತ್ಯಾಗ. ಬಾಲ್ಯದ ತರಬೇತುದಾರನ ಮಾರ್ಗದರ್ಶನ. ಬಾಲ್ಯ ಸ್ನೇಹಿತರ ಪ್ರೀತಿ. ಫುಟ್‍ಬಾಲ್ ಆಡಲು ಅವಕಾಶ ಕೊಟ್ಟ ಮೊದಲ ಕ್ಲಬ್. ತನ್ನ ಪ್ರತಿಭೆ, ಸಾಮಥ್ರ್ಯವನ್ನು ಫುಟ್‍ಬಾಲ್ ಜಗತ್ತಿನಲ್ಲಿ ಅನಾವರಣಗೊಳಿಸಿದ್ದ ಪ್ರತಿಷ್ಠಿತ ಕ್ಲಬ್‍ಗಳು. ಸೂಪರ್ ಸ್ಟಾರ್ ಆಟಗಾರನಾಗಲು ಸಹಕರಿಸಿದ್ದ ಪೋರ್ಚ್‍ಗಲ್ ದೇಶ. ಅಭ್ಯಾಸ ಮಾಡಿಕೊಂಡು ಹಸಿವಿನಿಂದ ಒದ್ದಾಡುತ್ತಿದ್ದಾಗ ಬ್ರೆಡ್ ಕೊಟ್ಟಿರುವ ಮೆಕ್‍ಡೊನಾಲ್ಡ್‍ನ ಸಿಬ್ಬಂದಿಗಳು. ತÀನ್ನ ಬದುಕಿಗೆ ಅರ್ಥಕಲ್ಪಿಸಿದ್ದ ಜೀವದ ಗೆಳತಿ. ಪ್ರತಿ ಗೋಲು ದಾಖಲಿಸಲು ಸಹಕರಿಸಿದ್ದ ಸಹ ಆಟಗಾರರು. ಲೆಕ್ಕವಿಲ್ಲದಷ್ಟು ಪ್ರೀತಿ ಕೊಟ್ಟಿರುವ ಅಭಿಮಾನಿಗಳು. ಸಂಕಷ್ಟ ಕಾಲದಲ್ಲಿ ನೆರವಿನ ಹಸ್ತ ನೀಡಿದ ನಂತರ ಜನÀ ತೋರಿಸಿರುವ ವಾತ್ಸಲ್ಯ, ಸಂಪಾದನೆಯ ಒಂದು ಭಾಗವನ್ನು ಬಡವರಿಗೆ ದಾನ ಮಾಡುವಾಗ ಸಿಗುವ ಸಂತೃಪ್ತಿ. ಸಿರಿತನವಿದ್ರೂ ತನ್ನ ಮಕ್ಕಳಿಗೆ ಶಿಸ್ತಿನ ಪಾಠದೊಂದಿಗೆ ಕಾಲ ಕಳೆಯುವ ಖುಷಿ. ಹೀಗೆ ತನ್ನ ಬದುಕನ್ನು ಬಂಗಾರವನ್ನಾಗಿಸಿದ್ದ, ಪ್ರತಿಯೊಬ್ಬರÀ ಋಣವನ್ನು ನೆನಪಿನಲ್ಲಿಟ್ಟುಕೊಂಡಿರುವ ಅಪರಂಜಿ ಕ್ರಿಸ್ಟಿಯಾನೊ ರೋನಾಲ್ಡೊ.

ಫಿಫಾ ವಿಶ್ವಕಪ್ ಕೈ ತಪ್ಪಿದ್ರೂ ಸಾರ್ಥಕತೆಯ ಬದುಕು..!

ಅಷ್ಟಕ್ಕೂ ಕ್ರಿಸ್ಟಿಯ ಯಶಸ್ಸಿನ ಕಿರೀಟದಲ್ಲಿ ಫಿಫಾ ವಿಶ್ವಕಪ್ ಟ್ರೋಫಿ ಎಂಬ ಪ್ರತಿಷ್ಠಿತ ಗರಿ ಸೇರಿಕೊಂಡಿಲ್ಲ. ಈ ಕೊರಗು ಕಾಡುತ್ತಲೇ ಇರುತ್ತೆ ಬಿಡಿ. ಆದ್ರೂ ಕ್ರಿಸ್ಟಿಯಾನೊ ರೊನಾಲ್ಡೊನದ್ದು ಸಾರ್ಥಕ ಬದುಕು. ಪೋರ್ಚ್‍ಗಲ್ ದೇಶದ ಮುಕುಟಕ್ಕೆ ಪ್ರತಿಷ್ಠಿತ ಮೂರು ಟ್ರೋಫಿಗಳನ್ನು ತೊಡಿಸಿ ಮಣ್ಣಿನ ಋಣ ತೀರಿಸಿದ್ದ ನಿರಾಳತೆ. ತನ್ನ ಮೇಲೆ ನೀರಿನಂತೆ ಹಣ ಸುರಿದಿದ್ದ ಕ್ಲಬ್‍ಗಳ ನಂಬಿಕೆ ಉಳಿಸಿಕೊಂಡ ಸಾರ್ಥಕತೆ. ಪ್ರತಿಷ್ಠಿತ ಕ್ಲಬ್‍ಗಳಿಗೆ ಪ್ರಶಸ್ತಿ ಗೆದ್ದು ಕೊಟ್ಟ ತೃಪ್ತಿ. ಐದು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ಪಡೆದ ಹೆಮ್ಮೆ. ಅತೀ ಹೆಚ್ಚು ಗೋಲು ಗಳಿಸಿದ್ದ ಹಿರಿಮೆ. ಹಲವಾರು ಅಪರೂಪದ ದಾಖಲೆಗಳನ್ನ ಬರೆದ ಖ್ಯಾತಿ. ಫುಟ್‍ಬಾಲ್ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದ ಗರಿಮೆ. ಬಡತನದಿಂದ ಬೆಂದು ಹೋಗಿದ್ದ ತಾಯಿ ಹಾಗೂ ಸಹೋದರ, ಸಹೋದರಿಯರು ಇಂದು ಐಷಾರಾಮಿ ಜೀವನ ನಡೆಸುತ್ತಿರುವ ನೆಮ್ಮದಿ..! ಫುಟ್‍ಬಾಲ್ ಆಟ ಇಷ್ಟೆಲ್ಲಾ ನೀಡಿದ ಮೇಲೂ ಫಿಫಾ ವಿಶ್ವಕಪ್ ಟ್ರೋಫಿ ಕೈಗೆ ಸಿಗಲಿಲ್ಲ. ಅದನ್ನು ಮರೆತುಬಿಡು ಎಂದು ಹೇಳಲು ಕೂಡ ಮನಸ್ಸು ಬರುತ್ತಿಲ್ಲ.

ಕ್ರಿಸ್ಟಿಯ ಬದುಕಲ್ಲಿ ನಡೆದ ಆ ಎರಡು ಪವಾಡಗಳು..!

ಅಷ್ಟಕ್ಕೂ ಕ್ರಿಸ್ಟಿಯ ಬದುಕಿನಲ್ಲಿ ಆ ಎರಡು ಪವಾಡಗಳು ನಡೆಯದೇ ಇರುತ್ತಿದೆ,್ರ ಇಂದು ಆತನ ಆಟವನ್ನು ಕೊಂಡಾಟದಿಂದ ಬರೆಯಲು ಆಗುತ್ತಿರಲಿಲ್ಲ. ತೀರಾ ಬಡತನದಿಂದ ನೊಂದಿದ್ದ ತಾಯಿ ಮರಿಯಾ ಡೊಲೊರೆಸ್ ತನ್ನ ನಾಲ್ಕನೇ ಮಗುವನ್ನು ಹತಾಶೆಯಿಂದ ಗರ್ಭಪಾತ ಮಾಡಿಸಲು ಮುಂದಾಗಿದ್ದಳು. ವೈದ್ಯರು ನಿರಾಕರಿಸಿದ್ದಾಗ ಸ್ವತಃ ತಾನೇ ಗರ್ಭದಲ್ಲಿದ್ದ ಮಗುವನ್ನು ಇಲ್ಲವಾಗಿಸಲು ಪ್ರಯತ್ನಿಸಿದ್ದಳು. ಅಂದು ಯಮನನ್ನೇ ಗೆದ್ದು ಬಂದ ಈ ಮಗು ಇಂದು ಫುಟ್‍ಬಾಲ್ ಜಗತ್ತಿನ ಜೀವಂತ ದಂತಕತೆಯಾದ. ಹಾಗೇ ತನ್ನ 15ರ ಹರೆಯದಲ್ಲಿ ಹೃದಯದ ಕಾಯಿಲೆಯಿಂದ ಬಳಲುತ್ತಿದ್ದ. ಇನ್ನೇನೂ ಆಟವಾಡಲು, ಓಡಾಡಲು ಸಾಧ್ಯವಿಲ್ಲ ಅಂದಾಗ ಲೇಸರ್ ಚಿಕಿತ್ಸೆ ಮಾಡಿಕೊಂಡಿದ್ದ ಈ ಜೀವ, ಇಂದಿಗೂ ಮೈದಾನದಲ್ಲಿ ಲೇಸರ್ ಕಿರಣಗಳಂತೆ ನರ್ತನ ಮಾಡುತ್ತಿದೆ.

ನೋ ಟ್ಯಾಟ್.. ನೋ ಡ್ರಿಂಕ್ಸ್.. ಕ್ರಿಸ್ಟಿಯ ಶಿಸ್ತು ಬದ್ಧ ಜೀವನ…!

ಒಂದಂತೂ ಸತ್ಯ. ಕ್ರಿಸ್ಟಿಯಾನೊ ರೊನಾಲ್ಡೊಗೆ ಪ್ರತಿ ದಿನ ತನ್ನ ತಂದೆಯ ನೆನಪು ಕಾಡುತ್ತಿದೆ. ಬಡತನ, ತೀರಾ ಸಾಲದಿಂದಾಗಿ ಕ್ರಿಸ್ಟಿಯ ತಂದೆ ಜೋಸ್ ಡಿನಿಸ್ ಆವೈರೊ ಮದ್ಯ ವ್ಯಸನಿಯಾಗಿದ್ದ. ಆದ್ರೂ ಮಗನ ಫುಟ್‍ಬಾಲ್ ಬದುಕಿಗೆ ಪ್ರೇರಣೆಯಾಗಿ ನಿಂತಿದ್ದ. ಆದ್ರೂ ತಂದೆಯ ದುಶ್ಚಟಗಳಿಂದ ನೊಂದಿದ್ದ ಕ್ರಿಸ್ಟಿ ತನ್ನ ಬದುಕಿನಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡಿದ್ದ. ದುಶ್ಚಟಗಳಿಂದ ದೂರವೇ ಉಳಿದಿದ್ದಾನೆ. ದೇಹದಲ್ಲಿ ಟ್ಯಾಟ್ ಇಲ್ಲ. ದಿನ ಕಟ್ಟು ನಿಟ್ಟಿನ ಡಯಟ್ ಫುಡ್. ಹೀಗಾಗಿಯೇ 41 ಹರೆಯದಲ್ಲೂ ಸಿಆರ್-7 ಬ್ರ್ಯಾಂಡೆಡ್ ಇಂಜಿನ್ ಆಗಿಯೇ ವರ್ಕ್ ಆಗುತ್ತಿದೆ.

ತಂದೆ ಮತ್ತು ಆಪ್ತ ಮಿತ್ರನ ನೆನಪಲ್ಲಿ ಕ್ರಿಸ್ಟಿ..!

ಈ ನಡುವೆ, ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವ ಸಮಯದಲ್ಲೇ ತಂದೆ ಜೋಸ್ ಇಹಲೋಕದ ದಾರಿ ಹಿಡಿದಿದ್ದರು. ಅಭಿಮಾನಿಗಳ ಅತಿರೇಕದಿಂದ ಕ್ರಿಸ್ಟಿಗೆ ತನ್ನ ತಂದೆಯ ಅಂತ್ಯ ಸಂಸ್ಕಾರವನ್ನು ಮಾಡಲು ಕೂಡ ಸಾಧ್ಯವಾಗಲಿಲ್ಲ. ಈ ನೋವು ಕ್ರಿಸ್ಟಿಯನ್ನು ಇಂದಿಗೂ ಕಾಡುತ್ತಲೇ ಇದೆ. ಹೀಗಾಗಿ ಇಂದಿಗೂ ಕ್ರಿಸ್ಟಿಯಾನೊ ಯಾರ ಸಾವಿನ ಮನೆಗೂ ಹೋಗುವುದಿಲ್ಲ. ಹೀಗಾಗಿಯೇ ತನ್ನ ಆಪ್ತ ಗೆಳೆಯ ಡಿಯಾಗೊ ಜೋಟಾನ ಅಂತ್ಯಕ್ರೀಯೆಗೂ ಹೋಗಿರಲಿಲ್ಲ. ಬಹುಶಃ ಡಿಯಾಗೊ ಇಂದು ತಂಡದಲ್ಲಿ ಇರುತ್ತಿದ್ರೆ ರೊನಾಲ್ಡೊನ ಆರ್ಭಟ ಮತ್ತಷ್ಟು ಜೋರಾಗಿರುತ್ತಿತ್ತೋ ಏನೋ..! ಗೊತ್ತಿಲ್ಲ. ಆದ್ರೆ ಈ ಬಾರಿಯ ಪೋರ್ಚ್‍ಗಲ್ ತಂಡ ಮತ್ತು ಕ್ರಿಸ್ಟಿಯ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬುದು ಕೂಡ ಅಷ್ಟೇ ಕಹಿ ಸತ್ಯ.

ಅದು ಏನೇ ಇರಲಿ, ಕ್ರಿಸ್ಟಿಯಾನೊ ರೊನಾಲ್ಡೊ ಬದುಕಿನ ಚಿತ್ರಣವನ್ನು ನೋಡಿದಾಗ, ಮತ್ತೊಂದು ಹಾಡಿನ ಸಾಲುಗಳು ನೆನಪಾಗುತ್ತೆ…

“ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ.. ಮಳೆ ಸುರಿಸಿ ಹಗುರಾದ ಮುಗಿಲಿನಂತೆ”..!

ಬದುಕಿನಲ್ಲಿ ನೂರಾರು ಚಿಂತೆಗಳ ನಡುವೆಯೂ ಫಿಫಾ ಮೈದಾನದಲ್ಲಿ ಸುಂಟರಗಾಳಿಯಂತೆ ಓಡಾಡಿದ್ದ ರಣ ಬೇಟೆಗಾರ ಈಗ ಕೊಂಚ ತಣ್ಣಾಗಾಗಿದ್ದಾನೆ ಅಷ್ಟೇ. ಸೋಲಿನ ಕಣ್ಣೀರು ಹರಿಸಿ ಮನಸ್ಸನ್ನು ಹಗುರ ಮಾಡಿಕೊಂಡಿದ್ದಾನೆ. ಹಾಗಂತ ಈ ಜ್ವಾಲಮುಖಿಯ ಆಟ ಇನ್ನು ಮುಗಿದಿಲ್ಲ. ಫಿಫಾ ವಿಶ್ವಕಪ್ ಗೆಲ್ಲುವ ಆಸೆಯನ್ನು ಇನ್ನೂ ಕೈಬಿಟ್ಟಿಲ್ಲ. ಅದಕ್ಕಾಗಿ ಮತ್ತೊಂದು ಅಸ್ತ್ರವನ್ನು ರೆಡಿ ಮಾಡುತ್ತಿದ್ದಾನೆ. ಅದು ಆಗಲೇ ಸದ್ದಿಲ್ಲದೆ ಮೈದಾನದಲ್ಲಿ ಸಂಚಲನ ಮೂಡಿಸುತ್ತಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಆಟದ ಲಹರಿಯನ್ನು 2030ರ ಫಿಫಾ ವಿಶ್ವಕಪ್‍ನಲ್ಲಿ ಜ್ಯೂನಿಯರ್ ಕ್ರಿಸ್ಟಿಯಾನೊ ರೊನಾಲ್ಡೊ ಆಟದಲ್ಲಿ ಕಣ್ತುಂಬಿಕೊಳ್ಳಬಹುದು..!

ಸನತ್ ರೈ

saakshatv,com

ShareTweetSendShare
Join us on:

Related Posts

Why newly married couple separate in Ashadha

Astro- ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? 

by admin
July 19, 2026
0

ಹೊಸದಾಗಿ ಮದುವೆಯಾದವರು ಆಷಾಢಮಾಸದಲ್ಲಿ ಗಂಡ-ಹೆಂಡತಿ ಜೊತೆಗಿರಬಾರದೆಂದು ಏಕೆ ಹಿರಿಯರು ಹೇಳುತ್ತಾರೆ..? ಆಷಾಡ ಮಾಸ ಬಂದರೇ ಸಾಕು ಮನೆಯಲ್ಲಿ ಯಾವುದೇ ರೀತಿಯ ಶುಭಕಾರ್ಯಗಳನ್ನು ಮಾಡುವುದಿಲ್ಲ. ಆದರೆ ಒಬ್ಬರಿಗೆ ಮಾತ್ರ...

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

ದೆಹಲಿಯಲ್ಲಿ ದಂಗೆ ಎದ್ದ ಕಾಕ್ರೋಚ್ ಪಡೆ: ಪ್ರಧಾನ್ ಆಯ್ತು ಈಗ ಪ್ರಧಾನಿ ಮೋದಿ ರಾಜೀನಾಮೆಗೆ ಆಗ್ರಹ ಶುರು

by Shwetha
July 19, 2026
0

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಸರಣಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಈಗ ಕೇಂದ್ರ ಸರ್ಕಾರದ ಬುಡಕ್ಕೆ ಬಂದು ತಲುಪಿವೆ. ಕಳೆದ 21 ದಿನಗಳಿಂದ ದೆಹಲಿಯ...

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

ಕುಡಿಯುವ ನೀರು ಕೃಷಿಗೆ ಬಳಸಬೇಡಿ: ರೈತರಿಗೆ ಸಿಎಂ ಡಿ ಕೆ ಶಿವಕುಮಾರ್ ಖಡಕ್ ವಾರ್ನಿಂಗ್

by Shwetha
July 19, 2026
0

ರಾಜ್ಯದಲ್ಲಿ ಮಳೆಯ ಅಭಾವ ತಲೆದೂರಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರೈತರಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ಜಲಾಶಯಗಳಿಂದ ಹರಿಸಲಾಗುತ್ತಿರುವ ನೀರನ್ನು ಕೇವಲ ಕುಡಿಯುವ...

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

ಕರಾವಳಿ ವಿವಾದಕ್ಕೆ ಅಂತ್ಯ ಹಾಡಿದ ರಾಜ್ ಬಿ ಶೆಟ್ಟಿ: ವಿವಾದ ಮಾಡೋದು ನಮಗೂ ನೋವು ತರುತ್ತೆ ಎಂದು ಕ್ಷಮೆಯಾಚಿಸಿದ ನಟ -ಕಂಟೆಂಟ್ ಇಲ್ಲ ಅಂತ ಟೀಕಿಸಿದವರಿಗೆ ಪ್ರೀಮಿಯರ್ ಶೋ ಮೂಲಕವೇ ಉತ್ತರ

by Shwetha
July 19, 2026
0

ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗ ನಡುವಿನ ಸಂಭಾವನೆ ಹಾಗೂ ಡಬ್ಬಿಂಗ್ ವಿವಾದದಿಂದ ಸದ್ದು ಮಾಡುತ್ತಿದ್ದ ಕರಾವಳಿ ಚಿತ್ರದ ಕುರಿತು ನಟ ರಾಜ್ ಬಿ...

ಕರ್ನಾಟಕದಲ್ಲಿ ಮತ್ತೆ 62 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿ ಮತ್ತೆ 62 ಹೊಸ ಕೊರೊನಾ ಪ್ರಕರಣಗಳು ಪತ್ತೆ

by Shwetha
July 19, 2026
0

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಲಕ್ಷಣಗಳು ಕಂಡುಬಂದಿವೆ. ಕಳೆದ 15 ದಿನಗಳ ಅವಧಿಯಲ್ಲಿ 62 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram