ಪ್ರಾಚೀನ ಸಮಾಧಿಗಳಿರುವ 3,300 ವರ್ಷಗಳ ಕಾಲದ ಗುಹೆ ಪತ್ತೆ…
ಇಸ್ರೇಲ್‌ನ ಪುರಾತತ್ತ್ವಜ್ಞರು “ಅಸಾಧಾರಣ” ಗುಹೆಯೊಂದನ್ನ ಪತ್ತೆ ಹಚ್ಚಿದ್ದಾರೆ. ಪ್ರಾಚೀನ ಜನರು 3,300 ವರ್ಷಗಳ ಹಿಂದೆ ವಾಸಿಸಿದ್ದ ಗುಹೆ ಇದಾಗಿದ್ದು, ಗುಹೆಯಲ್ಲಿಸಮಾಧಿ ರೀತಿಯ ವಸ್ತುಗಳು, ಮತ್ತು ವಾಸದ ಪಳೆಯುಳಿಕೆಗಳು ಕಂಡು ಬಂದಿವೆ. ಇಸ್ರೆಲ್ ನ ಈ ಗುಹೆ ಟೆಲ್ ಅವೀವ್‌ನ ದಕ್ಷಿಣದ ಬೀಚ್‌ನಿಂದ ಕೇವಲ ಗಜಗಳಷ್ಟು ದೂರದಲ್ಲಿದೆ.
ಗುಹೆಯ ಬಳಕೆಯು ಪ್ರಾಚೀನ ಈಜಿಪ್ಟಿನವರ ಕಾಲದ್ದು ಎಂದು ಗುರುತಿಸಿಲಾಗಿದೆ. ರಾಮೆಸೆಸ್ II ನೇತೃತ್ವದಲ್ಲಿ ಸುಮಾರು 1279 BC ಯಿಂದ ಆಳಿದ್ದು, 1213 B.C.ರಲ್ಲಿ ಈಗಿನ ಇಸ್ರೇಲ್ ಅನ್ನ ಆಳಿದ್ದರು ಎಂದು ಇಸ್ರೇಲ್ ಆಂಟಿಕ್ವಿಟೀಸ್ ಅಥಾರಿಟಿ (IAA) ಹೇಳಿಕೆಯಲ್ಲಿ ತಿಳಿಸಿದೆ. ರಾಮೆಸ್ಸೆಸ್ II ಕಾಲಮಾನದಲ್ಲಿ ಈಜಿಪ್ಟ್ನ್ನ ಆಧುನಿಕ ಸುಡಾನ್‌ನಿಂದ ಸಿರಿಯಾದವರೆಗೆ ವಿಸ್ತರಿಸಲಾಗಿತ್ತು.
ಪಲ್ಮಹಿಮ್ ಬೀಚ್ ರಾಷ್ಟ್ರೀಯ ಉದ್ಯಾನವನದಲ್ಲಿ ನಿರ್ಮಾಣಕ್ಕಾಗಿ ಅಗೆಯುವ ಗುಹೆಯ ಮೇಲ್ಚಾವಣಿ ಸಿಕ್ಕಿದೆ. ನಂತರ IAA ಜೊತೆ ಪುರಾತತ್ವಶಾಸ್ತ್ರಜ್ಞರನ್ನ ಘಟನಾ ಸ್ಥಳಕ್ಕೆ ಕರೆಸಲಾಗಿದೆ. ಸೆರಾಮಿಕ್ ಮತ್ತು ಕಂಚಿನ ಸರಕುಗಳೊಂದಿಗೆ ಕಲಾಕೃತಿಗಳು ಸಿಕ್ಕಿವೆ. ಸಾಮಾನ್ಯವಾಗಿ ಇವು ಸಮಾಧಿ ಸಮಾರಂಭಗಳೊಂದಿಗೆ ಸಂಬಂಧಿಸಿವೆ ಎಂದು ಪುರಾತತ್ವಶಾಸ್ತ್ರಜ್ಞರು ತಿಳಿಸಿದ್ದಾರೆ