36th national game | 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಸ್ಕೇಟರ್ ಗಳ ಕಮಾಲ್
ಗುಜರಾತ್ ನಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಸ್ಕೇಟರ್ ಗಳು ಕಮಾಲ್ ಮಾಡಿದ್ದಾರೆ.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಕೇಟಿಂಗ್ ಕ್ರೀಡೆಯನ್ನು ಸೇರಿಸಲಾಗಿದ್ದು, ಚೊಚ್ಚಲ ಬಾರಿಯ ಸ್ಪರ್ಧೆಯದಲ್ಲಿ ಕರ್ನಾಟಕದ ಮೂವರು ಸ್ಲೇಟರ್ ಗಳು ಪದಕ ಗೆದ್ದುಕೊಂಡಿದ್ದಾರೆ.

ಆರ್ಟಿಸ್ಟಿಕ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕದ ಮಹಿನ್ ಟಂಡನ್ ಅವರು ಚಿನ್ನಕ್ಕೆ ಮುತ್ತಿಟ್ಟಿದ್ದರೇ, ಕಿರಣ್ ಕುಮಾರ್, ಸುವರ್ನಿಕ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಆ ಮೂಲಕ ರಾಜ್ಯದ ಜನತೆ ಹೆಮ್ಮಪಡುವಂತೆ ಮಾಡಿದ್ದಾರೆ.