3rd T20I: ಹರ್ಷಲ್-ಚಹಲ್ ಕಮಾಲ್ | ಭಾರತಕ್ಕೆ ಜಯ
ದೆತ್ ಓವರ್ ಸ್ಪೆಷಲಿಸ್ಟ್ ಹರ್ಷಲ್ ಪಟೇಲ್ ಮತ್ತು ಸ್ಪಿನ್ ಚಾಣಾಕ್ಷ ಯುಜುವೇಂದ್ರ ಚಹಲ್ ಅವರ ಆಕ್ರಮಣಕಾರಿ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ 20 ಪಂದ್ದಲ್ಲಿ ಟೀಂ ಇಂಡಿಯಾ 48 ರನ್ ಗಳಿಂದ ಜಯ ಸಾಧಿಸಿದೆ.
ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬೊಂಬಾಟ್ ಪ್ರದರ್ಶನ ನೀಡಿತು.
ಪರಿಣಾಮ ನಿಗದಿತ 20 ಓವರ್ ಗಳಲ್ಲಿ ಟೀಂ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು.
ಈ ಸವಾಲು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ 19.1 ಓವರ್ ಗಳಲ್ಲಿ 131 ರನ್ ಗಳಿಗೆ ಆಲೌಟ್ ಆಯ್ತು.
ಇದರೊಂದಿಗೆ ಐದು ಪಂದ್ಯಗಳ ಟಿ 20 ಸರಣಿಯಲ್ಲಿ 1- 2 ಹಿನ್ನೆಡೆಯಲ್ಲಿದೆ.
ಅಂದಹಾಗೆ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ತಂಡಕ್ಕೆ ಭರ್ಜರಿ ಆರಂಭ ನೀಡಿದರು.
ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್ ಗೆ 97 ರನ್ ಗಳ ಜೊತೆಯಾಟವಾಡಿತು.
ರುತುರಾಜ್ ಗಾಯಕ್ವಾಡ್ 35 ಎಸೆತಗಳಲ್ಲಿ ಏಳು ಬೌಂಡರಿ, ಎರಡು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದ್ರು.
ಇಶಾನ್ ಕಿಶನ್ 35 ಎಸೆತಗಳಲ್ಲಿ ಐದು ಬೌಂಡರಿ, ಎರಡು ಸಿಕ್ಸರ್ ನೆರವಿನಿಂದ 54 ರನ್ ಗಳಿಸಿ ಔಟ್ ಆದರು.
ನಂತರ ಬಂದ ಶ್ರೇಯಸ್ ಅಯ್ಯರ್(14), ರಿಷಬ್ ಪಂತ್(6) ಹಾಗೂ ದಿನೇಶ್ ಕಾರ್ತಿಕ್(6) ರನ್ ಗಳಿಸಿದರು.
ಕೊನೆಯಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ 21 ಎಸೆತಗಳಲ್ಲಿ 31 ರನ್ ಗಳನ್ನ ಚಚ್ಚಿದರು.
ಪರಿಣಾಮ ಭಾರತ 20 ಓವರ್ಗಳಲ್ಲಿ 179 ರನ್ಗಳಿಸಿತು. ಸೌತ್ ಆಫ್ರಿಕಾ ಪರ ಪ್ರಿಟೋರಿಯಸ್ 2, ರಬಾಡ, ಶಮ್ಸಿ ಹಾಗೂ ಮಹಾರಾಜ್ ತಲಾ 1 ವಿಕೆಟ್ ಪಡೆದರು.
ಭಾರತ ನೀಡಿದ 180 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ, ಹರ್ಷಲ್ ಪಟೇಲ್ ಹಾಗೂ ಯುಜು಼ವೇಂದ್ರ ಚಹಲ್ ದಾಳಿಗೆ ತತ್ತರಿಸಿತು.
ಆಫ್ರಿಕಾ ಪರ ಆರಂಭಿಕರಾಗಿ ಬಂದ ತೆಂಬಾ ಬವುಮಾ (8) , ರೀಜಾ಼ ಹೆಂಡ್ರಿಕ್ಸ್(23) ಹಾಗೂ ಡ್ವೇನ್ ಪ್ರಿಟೋರಿಯಸ್(20) ಅಲ್ಪಮೊತ್ತಗಳಿಸಿ ಹೊರ ನಡೆದರು.
ನಂತರ ಬಂದ ವ್ಯಾನ್ ದರ್ ದುಸೇನ್(1) ಹಾಗೂ ಡೇವಿಡ್ ಮಿಲ್ಲರ್(3) ರನ್ ಗಳಿಸಿ ಬಹುಬೇಗನೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್(29) ಮತ್ತು ವೈನ್ ಪಾರ್ನೆಲ್(22*) ಗಳಿಸಿ ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಅಂತಿಮವಾಗಿ 19.1 ಓವರ್ಗಳಲ್ಲಿ 131 ರನ್ಗಳಿಗೆ ಆಲೌಟ್ ಆದ ಸೌತ್ ಆಫ್ರಿಕಾ, ಸರಣಿಯಲ್ಲಿ ಮೊದಲ ಸೋಲು ಅನುಭವಿಸಿತು.
ಭಾರತದ ಪರ ಹರ್ಷಲ್ ಪಟೇಲ್ 4 ವಿಕೆಟ್ ಹಾಗೂ ಯುಜು಼ವೇಂದ್ರ ಚಹಲ್ ಮೂರು ವಿಕೆಟ್ ಪಡೆದರು.
ಉಭಯ ತಂಡಗಳ ಮುಂದಿನ ಪಂದ್ಯ ಜೂ.17ರಂದು ರಾಜ್ಕೋಟ್ನಲ್ಲಿ ನಡೆಯಲಿದೆ.