IPL 2022 | ಥರ್ಡ್ ಅಪೈರ್ ತಪ್ಪು ನಿರ್ಧಾರ.. ರೋಹಿತ್ ಔಟ್ ಮೇಲೆ ವಿವಾದ
ಐಪಿಎಲ್ 2022ರ ಸೀಸನ್‌ನಲ್ಲಿ ಥರ್ಡ್ ಅಂಪೈರ್‌ನ ತಪ್ಪು ನಿರ್ಧಾರ ಮತ್ತೊಮ್ಮೆ ಬ್ಯಾಟ್ಸ್‌ಮನ್‌ಗಳನ್ನು ಕಾಡಿದೆ.
ಈಗಾಗಲೇ ಈ ಋತುವಿನಲ್ಲಿ ಥರ್ಡ್ ಅಂಪೈರ್‌ನ ತಪ್ಪು ನಿರ್ಧಾರಗಳಿಗೆ ಆಟಗಾರರು ಬಲಿಯಾಗಿದ್ದಾರೆ.
ಕೊಹ್ಲಿ ಎಲ್ ಬಿ ವಿವಾದ ದೊಡ್ಡ ಕೋಲಾಹಲವಾಗಿ ಪರಿಣಮಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇದೀಗ ರೋಹಿತ್ ಶರ್ಮಾ ವಿಚಾರದಲ್ಲೂ ಥರ್ಡ್ ಅಂಪೈರ್ ಮತ್ತೆ ತಪ್ಪು ನಿರ್ಧಾರ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ಸೋಮವಾರ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಟಿಮ್ ಸೌಥಿ ಎಸೆದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ರೋಹಿತ್ ಶರ್ಮಾ ಲೆಗ್ ಸೈಡ್ ಆಡೋಕೆ ಪ್ರಯತ್ನಿಸಿದರು.
ಆದ್ರೆ ಚೆಂಡು ಬ್ಯಾಟ್ ನ ತುಂಬಾ ಹತ್ತಿರಕ್ಕೆ ಹೋಗಿ, ಕೆಕೆಆರ್ ವಿಕೆಟ್ ಕೀಪರ್ ಶೆಲ್ಡನ್ ಜಾಕ್ಸನ್ ಕೈ ಸೇರಿತು. ತಕ್ಷಣ ಕೆಕೆಆರ್ ಆಟಗಾರರು ಔಟ್ ಎಂದು ಅಂಪೈರ್ ಗೆ ಮನವಿ ಮಾಡಿಕೊಂಡರು.
https://twitter.com/i/status/1523711978316783616
ಫೀಲ್ಡ್ ಅಂಪೈರ್ ಕ್ರಿಸ್ ಗಫಾನಿ ನಾಟೌಟ್ ಎಂದು ಘೋಷಿಸಿದರು. ಹೀಗಾಗಿ ಶ್ರೇಯಸ್ ಅಯ್ಯರ್ ಡಿಆರ್ ಎಸ್ ಮೊರೆ ಹೋದರು.
ರಿವ್ಯೂನಲ್ಲಿ ಚೆಂಡು ರೋಹಿತ್ ಬ್ಯಾಟ್‌ನ ಸಮೀಪದಲ್ಲಿ ಹೋಗುತ್ತಿರೋದು ಗೊತ್ತಾಗುತ್ತಿತ್ತು.
ಅಲ್ಟ್ರಾ ಎಡ್ಜ್‌ನಲ್ಲಿ ನೋಡಿದಾಗ ಚೆಂಡು ಬ್ಯಾಟ್‌ನಿಂದ ದೂರದಲ್ಲಿರುವಾಗಲೂ ಸ್ಪೈಕ್ ಗೋಚರಿಸುತ್ತಿತ್ತು.
ಹೀಗಾಗಿ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಚೆಂಡು ಬ್ಯಾಟ್ ನಿಂದ ದೂರವಿದ್ದರೂ ಸ್ಪೈಕ್ ಬಂದಿದ್ದು ಹೇಗೆ ಎಂದು ರೋಹಿತ್ ಶರ್ಮಾ ಸೇರಿದಂತೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರು.
ಅಲ್ಲದೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 3rd-umpire-rohit-sharma-controversial-dismissal








