ಬೆಂಗಳೂರು: ವಿದೇಶದಿಂದ ಬೆಂಗಳೂರಿಗೆ ವಿಮಾನದ ಮೂಲಕ ಸಾಗಿಸುತ್ತಿದ್ದ ನಿಷೇಧಿತ ಡ್ರಗ್ಸ್‍ನ್ನು ದೇವನಹಳ್ಳಿ ವಿಮಾನ ನಿಲ್ದಣದಲ್ಲಿ ಜಪ್ತಿ ಮಾಡಲಾಗಿದೆ.
20 ಲಕ್ಷ ಮೌಲ್ಯದ 400 ಗ್ರಾಂ ಮೆಥಕುಲೋನ್ ಡ್ರಗ್ಸ್‍ನ್ನು ನೈಜಿರಿಯಾ ಮೂಲದ ಮಹಿಳೆಗೆ ಸೇರಿದ ಬ್ಯಾಗ್‍ನ ಮೂಲಕ ಬೆಂಗಳೂರಿಗೆ ಸಪ್ಲೈ ಮಾಡಲಾಗುತ್ತಿತ್ತು.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕಾರ್ಗೋ ವಿಮಾನದ ಮೂಲಕ ಈ ಡ್ರಗ್ಸ್‍ನ್ನ ಸಾಗಿಸಲಾಗುತ್ತಿತ್ತು. ಕಸ್ಟಮ್ಸ್ ಅಧಿಕಾರಿಗಳು ಈ ಬ್ಯಾಗನ್ನು ಜಪ್ತಿ ಮಾಡಿ ತನಿಖೆ ಮಾಡಿದಾಗ ನೈಜೀರಿಯಾ ಮೂಲದ ಮಹಿಳೆಗೆ ಸೇರಿದ್ದು ಎಂದು ಗೊತ್ತಾಗಿದೆ.
ಸೆಪ್ಟೆಂಬರ್ 10ರಂದು ಬೆಂಗಳೂರಿನಲ್ಲಿ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಲಾಗಿತ್ತು. ಆಕೆಯಿಂದ 1 ಕೋಟಿ ಮೌಲ್ಯದ ಡ್ರಗ್ಸ್‍ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದರು.
ಬೆಲ್ಜಿಯಿಂದನಿಂದ ಡಿಹೆಚ್‍ಎಲ್ ಏರ್ ಕೊರಿಯರ್ ಮೂಲಕ ಪಾದದ ಮಸಾಜ್ ಯಂತ್ರದ ಡ್ರಗ್ಸ್ ಇಟ್ಟು ತರಿಸಿಕೊಂಡಿದ್ದಳು. ಬೆಂಗಳೂರಿಗೆ ಕೊರೊಯರ್ ಮೂಲಕ ಪ್ರತಿದಿನ ಡ್ರಗ್ಸ್ ಸರಬರಾಜು ಆಗುತ್ತಿರುವುದು ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದೆ.
ಶಿಕ್ಷಣ ಕ್ಷೇತ್ರದ ಸೇವೆಗೆ ಸನ್ಮಾನದ ಸಂಭ್ರಮ..! ನಾಳೆ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅಭಿನಂದನಾ ಸಮಾರಂಭ
ಬೆಂಗಳೂರು: ರಾಜಾಜಿನಗರ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಕೆಟಿಎಸ್‌ವಿ ಪ್ರಾಂಶುಪಾಲರಾದ ಪ್ರಾಚಾರ್ಯ ರತ್ನ ಪ್ರೊ. ಶ್ರೀಕಂಠಯ್ಯ ಅವರ ಅಭಿನಂದನಾ ಸಮಾರಂಭ ಅಕ್ಟೋಬರ್ 4ರಂದು ಬೆಂಗಳೂರಿನ ಶ್ರೀ...








