ಕೊರೊನಾ ವೈರಸ್ ಹೊಡೆತಕ್ಕೆ ವಿಶ್ವವೇ ತತ್ತರಿಸಿದೆ. ಭಾರತ ದೇಶಕ್ಕೆ ಆರ್ಥಿಕವಾಗಿ ದೊಡ್ಡ ಪ್ರಮಾಣ ಹೊಡೆತ ಬಿದ್ದಿದೆ. ಹಾಗಾಗಿ ಕೊರೊನಾ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಅನೇಕ ಜನ ದಾನಿಗಳು, ಸ್ಟಾರ್ ನಟರು, ಬಿಸಿನೆಸ್ ಮ್ಯಾನ್ಸ್ ಸಾಕಷ್ಟು ಆರ್ಥಿಕ ನೆರವು ನೀಡಿದ್ದಾರೆ. ಇದೀಗ ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಒಟ್ಟಾಗಿ 430.13 ಕೋಟಿಯಷ್ಟು ಹಣವನ್ನು ಪಿಎಂ ಕೇರ್ ನೀಡಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬ್ಬಂದಿ 15 ಕೋಟಿ, ಎಸ್ ಬಿಐ ಸಿಬ್ಬಂದಿ 100 ಕೋಟಿ, ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ನಿಂದ 105 ಕೋಟಿ, ಇಂಡಿಯಾ ಇನ್ ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ 25 ಕೋಟಿ ನೀಡಿದ್ದಾರೆ. ಅಲ್ಲದೆ ಬ್ಯಾಂಕ್ ನೌಕರರು ಮತ್ತು ವಿತ್ತೀಯ ವಲಯದ ಸಂಸ್ಥೆಗಳ ನೌಕರರು ತಮ್ಮ ಒಂದು ದಿನ ಸಂಬಳವನ್ನು ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ವಿಮಾನ ಕಂಪನಿ ಎಲ್ ಐಸಿ 105 ಕೋಟಿ, ಎಸ್ ಬಿಐ ನೌಕರರು 100 ಕೋಟಿ ರೂ ದೇಣಿಗೆ ನೀಡಿದ್ದಾರೆ. ಇಂಡಿಯಾ ಇನ್ಫ್ರಾಸ್ಟ್ರಕ್ಚರ್ ಫೈನಾನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯ ಉದ್ಯೋಗಿಗಳಿಂದ 25 ಕೋಟಿ ರೂ., ಸಿಬಿಐಸಿ ಮತ್ತು ಸಿಬಿಡಿಟಿಯ ನೌಕರರಿಂದ 23 ಕೋಟಿ ರೂ., ಜನರಲ್ ಇನ್ಶುರೆನ್ಸ್ ಕಂಪನಿಯಿಂದ 23.81 ರೂ., ಸಿಡಿ ಬಿಐ, ಕೆನರಾ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಲಾ 15 ಕೋಟಿ ರೂ. ಆರ್ಥಿಕ ವ್ಯವಹಾರಗಳ ಇಲಾಖೆ, ಖರ್ಚು ಇಲಾಖೆ, ಸೆಬಿ, ಮತ್ತು ಕಂದಾಯ ಇಲಾಖೆಯ ನೌಕರರ ಕೊಡುಗೆ ಕ್ರಮವಾಗಿ 15 ಲಕ್ಷ, 9 ಲಕ್ಷ, 50 ಲಕ್ಷ, ಮತ್ತು 2 ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ವಿರುದ್ದ ಹೋರಾಡಲು ಪ್ರಧಾನ ಮಂತ್ರಿಗಳ ನಾಗರಿಕ ನೆರವು ಮತ್ತು ಪರಿಹಾರದ ನಿಧಿಯನ್ನು ಮಾರ್ಚ್ 28 ರಂದು ರಚನೆ ಮಾಡಲಾಗಿತ್ತು. ಇದರಲ್ಲಿ ಜಮಾ ಆಗಿರುವ ಹಣವನ್ನು ದೇಶದ ತುರ್ತು ಹಾಗೂ ಆಘಾತಕಾರಿ ಪರಿಸ್ಥಿತಿಯಲ್ಲಿ ಪೀಡಿತ ಜನರ ನೆರವಿಗೆ ಬಳಸಿಕೊಳ್ಳಲಾಗುತ್ತದೆ. ಅಲ್ಲದೆ ಇದೀಗ ಕೊರೊನಾ ವಿರುದ್ದದ ಹೋರಾಟದಲ್ಲಿ ಹಣ ಬಳಕೆ ಆಗುತ್ತದೆ.








