ರಾಜ್ಯದಲ್ಲಿ ಕೊರೊನಾ ಸುನಾಮಿ : 44,438 ಜನಕ್ಕೆ ಸೋಂಕು

1 min read
karnataka

ರಾಜ್ಯದಲ್ಲಿ ಕೊರೊನಾ ಸುನಾಮಿ : 44,438 ಜನಕ್ಕೆ ಸೋಂಕು

ಬೆಂಗಳೂರು : ರಾಜ್ಯಕ್ಕೆ ಇಂದು ಕೊರೊನಾ ಸುನಾಮಿ ಅಪ್ಪಳಿಸಿದ್ದು, 44,438 ಜನಕ್ಕೆ ಸೋಂಕಿರುವುದು ದೃಢಪಟ್ಟಿದೆ. ಜೊತೆಗೆ 239 ಸೋಂಕಿತರು ಸಾವನ್ನಪ್ಪಿದ್ದಾರೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಇಂದು 44,438 ಮಂದಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 16,46,303ಕ್ಕೇರಿಕೆ ಕಂಡಿದೆ. ಮೃತರ ಸಂಖ್ಯೆ 16,250ಕ್ಕೆ ಏರಿಕೆ ಕಂಡಿದೆ. ಇಂದು 20,901 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿನ್ನೂ 4,44,734 ಸಕ್ರಿಯ ಪ್ರಕರಣಗಳಿವೆ.

ಇನ್ನು ಇವತ್ತು ಬೆಂಗಳೂರು ನಗರದಲ್ಲಿಯೇ 22,112 ಜನರ ದೇಹವನ್ನ ಕೊರೊನಾ ಹೊಕ್ಕಿದ್ದು, 115 ಜನರ ಉಸಿರನ್ನ ಕಿತ್ತುಕೊಂಡಿದೆ. ಸದ್ಯ ಬೆಂಗಳೂರಿನಲ್ಲಿ 2,94,917 ಸಕ್ರಿಯ ಪ್ರಕರಣಗಳಿವೆ.

karnataka

ಉಳಿದಂತೆ ಬಾಗಲಕೋಟೆ 569, ಬಳ್ಳಾರಿ 990, ಬೆಳಗಾವಿ 559, ಬೆಂಗಳೂರು ಗ್ರಾಮಾಂತರ 815, ಬೆಂಗಳೂರು ನಗರ 22,112, ಬೀದರ್ 396, ಚಾಮರಾಜನಗರ 724, ಚಿಕ್ಕಬಳ್ಳಾಪುರ 886, ಚಿಕ್ಕಮಗಳೂರು 206, ಚಿತ್ರದುರ್ಗ 151, ದಕ್ಷಿಣ ಕನ್ನಡ 793, ದಾವಣಗೆರೆ 104, ಧಾರವಾಡ 1,021, ಗದಗ 191, ಹಾಸನ 1,673, ಹಾವೇರಿ 330, ಕಲಬುರಗಿ 1,083, ಕೊಡಗು 628, ಕೋಲಾರ 656, ಕೊಪ್ಪಳ 617, ಮಂಡ್ಯ 1,367, ಮೈಸೂರು 2,685, ರಾಯಚೂರು 529, ರಾಮನಗರ 492, ಶಿವಮೊಗ್ಗ 584, ತುಮಕೂರು 2,361, ಉಡುಪಿ 529, ಉತ್ತರ ಕನ್ನಡ 776, ವಿಜಯಪುರ 274 ಮತ್ತು ಯಾದಗಿರಿಯಲ್ಲಿ 337 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd