25ರ ಯುವತಿಯನನ್ನ ಮದುವೆಯಾಗಿದ್ದ 45ರ ವರ ಆತ್ಮಹತ್ಯೆ
ಕಳೆದ ವರ್ಷ 45 ವರ್ಷದ ವ್ಯಕ್ತಿ ಜೊತೆಗೆ 25ರ ಯುವತಿ ಮದುವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಮದುವೆಯಾಗಿದ್ದ 45 ವರ್ಷದ ಶಂಕರಣ್ಣ(45) ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಕಳೆದ ವರ್ಷ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯಲ್ಲಿ ನಡೆದಿತ್ತು. ಆದರೆ ಮದುವೆಯಾದ ಐದು ತಿಂಗಳಿನಲ್ಲಿಯೇ ಶಂಕರಣ್ಣ ನೇಣಿಗೆ ಕೊರೊಳೊಡ್ಡಿದ್ದಾರೆ.
ಮೂರ್ನಾಲ್ಕು ದಿನಗಳಿಂದ ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಕೋಪ ಮಾಡಿಕೊಂಡು ಸೋಮವಾರ ಮನೆ ಬಿಟ್ಟು ಹೋಗಿದ್ದ ಶಂಕರಣ್ಣ ಅಕ್ಕಿಮರಿಪಾಳ್ಯದ ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
2021ರಲ್ಲಿ ಮದುವೆಯಾಗಿದ್ದ ಈ ದಂಪತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾಗೆ ಈ ಮುನ್ನ ಬೇರೆಯವರೊಂದಿಗೆ ಮದುವೆಯಾಗಿತ್ತು. ಆದರೆ ಪತಿ ಎರಡು ವರ್ಷಗಳಿಂದ ಕಾಣೆಯಾಗಿದ್ದರಿಂದ ಮೇಘನಾಳೇ ಹೋಗಿ ಶಂಕರಣ್ಣ ಅವರನ್ನ ಮದುವೆಯಾಗಿ ಅಂತಾ ಕೇಳಿಕೊಂಡಿದ್ದಳು. ಆದರೆ ಮೊದಲಿಗೆ ಮದುವೆಯಾಗಲು ನಿರಾಕರಿಸಿದ್ದ ಶಂಕರಣ್ಣ ಕೊನೆಗೂ ಒಪ್ಪಿಕೊಂಡು ಮೇಘನಾಳನ್ನು ಊರಿನ ಸಮೀಪದ ದೇವಾಲಯದಲ್ಲಿ ಮದುವೆಯಾಗಿದ್ದರು.