ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ವಿವಿಧ ಸುಲಭ ಹಾಗೂ ರುಚಿಕರ ಇಡ್ಲಿಗಳ ರೆಸಿಪಿಗಳು ನಿಮಗಾಗಿ..!

Namratha Rao by Namratha Rao
September 17, 2021
in Cooking, Newsbeat, ಅಡುಗೆ
Saakshatv cooking recipe how to prepare masala podi idli
Share on FacebookShare on TwitterShare on WhatsappShare on Telegram

5 ವಿವಿಧ ಸುಲಭ ಹಾಗೂ ರುಚಿಕರ ಇಡ್ಲಿಗಳ ರೆಸಿಪಿಗಳು ನಿಮಗಾಗಿ..!

1. ಇನ್’ಸ್ಟಂಟ್ (instant) ಸಬ್ಬಕ್ಕಿ /ಸಾಬುದಾನ /ಸಾಗು ಇಡ್ಲಿ

Related posts

If you cut your nail and place it here, it will bring you money and also ward off the evil eye.

ಉಗುರನ್ನು ಕತ್ತರಿಸಿ ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

February 16, 2026
ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

February 16, 2026

ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ/ಸಾಗು/ಸಾಬುದಾನ – 1 ಕಪ್
ಮೊಸರು – 1 ಕಪ್
ಇಡ್ಲಿ ರವೆ ಅಥವಾ ಅಕ್ಕಿ ರವೆ – 1/2 ಕಪ್
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ
ಸಬ್ಬಕ್ಕಿ/ಸಾಗು/ಸಾಬುದಾನವನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಮೂರು ಗಂಟೆ ಕಾಲ ಹಾಗೆಯೇ ಬಿಡಿ. ಇಡ್ಲಿ ರವೆ/ಅಕ್ಕಿ ರವೆಯನ್ನು ನೀರಿನಲ್ಲಿ ತೊಳೆದು ನೀರು ಸೋಸಿ ಅರ್ಧ ಗಂಟೆ ಹಾಗೆಯೇ ಬಿಡಿ..
Saakshatv cooking recipe sabbakki idli

ನಂತರ ದೊಡ್ಡ ಮಿಕ್ಸಿಂಗ್ ಬೌಲ್‌ನಲ್ಲಿ ನೆನೆಸಿದ ಸಬ್ಬಕ್ಕಿ,  ರವೆಯನ್ನು ಸೇರಿಸಿ, ಮೊಸರನ್ನು ಹಾಕಿ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣಕ್ಕೆ ಉಪ್ಪು ಹಾಕಿ, ಅಗತ್ಯವಿದ್ದರೆ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಅರ್ಧ ಗಂಟೆ ಕಳೆದ ಬಳಿಕ ಇಡ್ಲಿ ತಟ್ಟೆಗೆ ಎಣ್ಣೆ ಹಚ್ಚಿ ಹಿಟ್ಟನ್ನು ಹಾಕಿ ಹಬೆಯಲ್ಲಿ ಸುಮಾರು ಇಪ್ಪತ್ತು ನಿಮಿಷ ಬೇಯಿಸಿ. ತುಂಬಾ ರುಚಿಕರವಾದ ಆರೋಗ್ಯಕರ ಇಡ್ಲಿ ಚಟ್ನಿಯೊಂದಿಗೆ ಸವಿಯಲು ಸಿದ್ಧ.

2. ಪುದಿನಾ ಮಸಾಲಾ ರವಾ ಇನ್-ಸ್ಟಂಟ್(instant) ಇಡ್ಲಿ

ಬೇಕಾಗುವ ಸಾಮಾಗ್ರಿಗಳು
ರವೆ – 1 ಕಪ್
ಮೊಸರು – 1/2 ಲೀಟರ್
ಕಡ್ಲೆಬೇಳೆ – 2 ಚಮಚ
ಉದ್ದಿನ ಬೇಳೆ – 2 ಚಮಚ
ಸಾಸಿವೆ – 1 ಚಮಚ
ಎಣ್ಣೆ – 1ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕರಿಬೇವು – ಸ್ವಲ್ಪ
ಪುದಿನಾ ಸೊಪ್ಪು – ಸ್ವಲ್ಪ
ಹಸಿ ಮೆಣಸಿನಕಾಯಿ – 8
ತೆಂಗಿನಕಾಯಿ ತುರಿ – 1/2 ಕಪ್
ಶುಂಠಿ – 1 ಇಂಚು
ರುಚಿಗೆ ತಕ್ಕಷ್ಟು ‌ಉಪ್ಪು
Saakshatv cooking recipe pudina rava idli

ಮಾಡುವ ವಿಧಾನ

ಮೊದಲು ರವೆಯನ್ನು ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುರಿದ ರವೆಗೆ ಮೊಸರನ್ನು ಸೇರಿಸಿ ಚೆನ್ನಾಗಿ ಬೆರೆಸಬೇಕು.
ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ಸಾಸಿವೆ ಸಿಡಿದ ನಂತರ ಉದ್ದಿನ ಬೇಳೆ, ಕಡ್ಲೆಬೇಳೆ, ಒಂದು ಚಿಟಿಕೆ ಅರಿಶಿನ ಹಾಕಿ ಒಗ್ಗರಣೆ ಕೊಡಿ. ಮೊಸರಿನಲ್ಲಿ ಮಿಶ್ರವಾಗಿರುವ ರವೆಗೆ ಈ ಒಗ್ಗರಣೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.

ನಂತರ ಪುದಿನಾ, ಕೊತ್ತಂಬರಿಸೊಪ್ಪು, ತೆಂಗಿನತುರಿ, ಹಸಿ ಮೆಣಸಿನಕಾಯಿ, ಶುಂಠಿಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ನೀರು ಹಾಕದೆ ಚೆನ್ನಾಗಿ ರುಬ್ಬಿ. ನಂತರ ಮೊಸರಿನಲ್ಲಿ ಮಿಶ್ರವಾಗಿರುವ ರವೆಗೆ ಸೇರಿಸಿ ಚೆನ್ನಾಗಿ ಬೆರೆಸಿ. ಉಪ್ಪನ್ನು ಸೇರಿಸಿ ಮತ್ತೊಮ್ಮೆ ಕಲಸಿ.
ಬಳಿಕ 1.30 ಯಿಂದ 2 ಗಂಟೆ ತನಕ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಇಡ್ಲಿ ಹದಕ್ಕೆ ಹಿಟ್ಟನ್ನು ತಯಾರಿಸಿ 15 ನಿಮಿಷ ಇಡ್ಲಿ ಪಾತ್ರೆಯಲ್ಲಿ ಬೇಯಿಸಿ. ಈಗ ಮಸಾಲಾ ರವಾ ಇಂಸ್ಟೆಂಟ್ ಇಡ್ಲಿ ಚಟ್ನಿಯೊಂದಿಗೆ ಸವಿಯಲು ಸಿದ್ಧವಾಗಿದೆ.

ಇದನ್ನೂ ಓದಿ… 5 ವಿವಿಧ ಬಗೆಯ ರುಚಿಕರ ದೋಸೆಗಳ ರೆಸಿಪಿಗಳು ನಿಮಗಾಗಿ..!

3. ಮಸಾಲೆ ಪೋಡಿ ಇಡ್ಲಿ

ಬೇಕಾಗುವ ಸಾಮಗ್ರಿಗಳು

ಉಳಿದ ಇಡ್ಲಿಗಳು
ಕೆಂಪು ಮೆಣಸು -5
ಕಡ್ಲೆಬೇಳೆ – 1/4 ಕಪ್
ಉದ್ದಿನಬೇಳೆ -1/4 ಕಪ್
ಅಕ್ಕಿ -1 ಚಮಚ
ಎಳ್ಳು -1 ಚಮಚ
ರುಚಿಗೆ ‌ತಕ್ಕಷ್ಟು ಉಪ್ಪು

Saakshatv cooking recipe how to prepare masala podi idli

4. ಸಬ್ಬಕ್ಕಿ ರವಾ ಇಡ್ಲಿ

ಬೇಕಾಗುವ ಸಾಮಾಗ್ರಿಗಳು

ಸಬ್ಬಕ್ಕಿ – 1ಕಪ್
ರವೆ – 1ಕಪ್
ಸಾಸಿವೆ -1/2 ಚಮಚ
ಕಡಲೆಬೇಳೆ – 1/2 ಚಮಚ
ಕರಿಬೇವು – ಸ್ವಲ್ಪ
ಹಸಿಮೆಣಸಿನಕಾಯಿ – 2
ಶುಂಠಿ ತುರಿ – 1/2ಚಮಚ
ಕೊತ್ತಂಬರಿಸೊಪ್ಪು – ಸ್ವಲ್ಪ
ಮೊಸರು – 1/2 ಕಪ್
ಅಡುಗೆ ಸೋಡಾ – ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು

Saakshatv cooking recipe prepare sabbakki rava idli

ಮಾಡುವ ವಿಧಾನ

ಮೊದಲಿಗೆ ಸಬ್ಬಕ್ಕಿಗೆ ಮುಳುಗುವಷ್ಟು ನೀರು ಹಾಕಿ 1 ಗಂಟೆಗಳ ಕಾಲ ‌ನೆನೆ ಹಾಕಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಸೇರಿಸಿ. ‌ಸಾಸಿವೆ ಸಿಡಿದ ಬಳಿಕ ಕಡಲೆಬೇಳೆ ಸೇರಿಸಿ ಹುರಿಯಿರಿ. ಬಳಿಕ ‌ಚಿಕ್ಕದಾಗಿ ಕತ್ತರಿಸಿದ ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ ತುರಿ ಸೇರಿಸಿ ಬಾಡಿಸಿಕೊಳ್ಳಿ. ನಂತರ ರವೆಯನ್ನು ಸೇರಿಸಿ ಮಂದ ಉರಿಯಲ್ಲಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಒಲೆಯಿಂದ ಕೆಳಗಿಳಿಸಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿಸೊಪ್ಪು, ನೆನೆಸಿದ ಸಬ್ಬಕ್ಕಿ, ಮೊಸರು, ಉಪ್ಪು, ಅಡುಗೆ ಸೋಡಾ, ಅಗತ್ಯವಿರುವಷ್ಟು ‌ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. 1 ಗಂಟೆಗಳ ‌ಕಾಲ‌ ಹಾಗೆಯೇ ಬಿಡಿ. ನಂತರ ಎಣ್ಣೆ ಸವರಿದ ಇಡ್ಲಿ ಪ್ಲೇಟ್ಗಳಲ್ಲಿ ಹಿಟ್ಟನ್ನು ತುಂಬಿ 10 -15 ನಿಮಿಷ ಹಬೆಯಲ್ಲಿ ಬೇಯಿಸಿದರೆ ರುಚಿಯಾದ ಬಿಸಿ ಬಿಸಿ ಸಬ್ಬಕ್ಕಿ ರವಾ ಇಡ್ಲಿ ಸವಿಯಲು ‌ಸಿದ್ಧ.

5. ರುಚಿಯಾದ ಬಟಾಣಿ ರವೆ ಇಡ್ಲಿ

ಬೇಕಾಗುವ ಸಾಮಗ್ರಿಗಳು

ಬಟಾಣಿ – 1ಕಪ್
ಸಾಸಿವೆ – 1 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಈರುಳ್ಳಿ – 2
ಹಸಿಮೆಣಸಿನಕಾಯಿ – 6
ಚಿರೋಟಿ ರವೆ – 1 ಕಪ್
ಗಟ್ಟಿ ಮೊಸರು – 1 ಕಪ್
ತುರಿದ ಕ್ಯಾರೆಟ್ – 1/2ಕಪ್
ಶುಂಠಿ – 1 ಇಂಚು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು

Saakshatv cooking recipes Rava idli

ಮಾಡುವ ‌ವಿಧಾನ

ಮೊದಲಿಗೆ ಬಟಾಣಿಯನ್ನು ಬೇಯಿಸಿ ಇಟ್ಟುಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಳಿಕ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಚಿರೋಟಿ ರವೆ ಸೇರಿಸಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿಯಿರಿ. ಈಗ ಅದಕ್ಕೆ ಕ್ಯಾರೆಟ್, ಸಣ್ಣಗೆ ತುರಿದ ಶುಂಠಿ, ಬೇಯಿಸಿದ ಬಟಾಣಿ, ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. 20 ನಿಮಿಷ ಹಾಗೆಯೇ ಬಿಡಿ. ಬಳಿಕ ಇಡ್ಲಿ ಪಾತ್ರೆಯಲ್ಲಿ 20 ನಿಮಿಷ ಬೇಯಿಸಿ. ಈಗ ರುಚಿಕರವಾದ ಬಟಾಣಿ ರವೆ ಇಡ್ಲಿ ಸವಿಯಲು ಸಿದ್ಧವಾಗಿದೆ

Tags: #saakshatvcookingFood
ShareTweetSendShare
Join us on:

Related Posts

If you cut your nail and place it here, it will bring you money and also ward off the evil eye.

ಉಗುರನ್ನು ಕತ್ತರಿಸಿ ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

by admin
February 16, 2026
0

ಇದರಲ್ಲಿ ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಹಾಕಿ ಪವಾಡ ನೋಡಿ ಇದರ ಬಗ್ಗೆ ಕನಸಿನಲ್ಲೂ ಕಲ್ಪನೆ ಮಾಡಲು ಸಾಧ್ಯವಿಲ್ಲ ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ,...

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

by admin
February 16, 2026
0

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..! ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ...

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

by Shwetha
February 16, 2026
0

ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ...

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

by Shwetha
February 16, 2026
0

ಬೆಂಗಳೂರು: ರಾಜ್ಯದ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ತಾಣವಾಗಿರುವ ಕರಾವಳಿ ಕರ್ನಾಟಕದಲ್ಲಿ (ದಕ್ಷಿಣ ಕನ್ನಡ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕೋಮುವಾದ ಮತ್ತು ಅಸಹಿಷ್ಣುತೆಯ ವಾತಾವರಣವು ಆ ಭಾಗದ...

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

by Shwetha
February 16, 2026
0

ಶಿವಮೊಗ್ಗ: ರಾಜ್ಯ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಬರೋಬ್ಬರಿ 37,000 ಕೋಟಿ ರೂ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಮಾರ್ಚ್ 5 ರಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram