ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು : ಉಮೇಶ್ ಕತ್ತಿ Umesh katthi saaksha tv
ಚಾಮರಾಜನಗರ : ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು. ಆದ್ರೆ ರಾಜಕೀಯ ಕಾರಣದಿಂದ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಉಮೇಶ್ ಕತ್ತಿ ಕಿಡಿಕಾರಿದ್ದಾರೆ.
ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮನುಷ್ಯನಿಗೆ 5 ಕೆಜಿ ಅಕ್ಕಿ ಸಾಕು, ಅದನ್ನು ನಾವು ಆಹಾರ ಭದ್ರತೆಯಡಿ 4.1 ಕೋಟಿ ಫಲಾನುಭವಿಗಳಿಗೆ ವಿತರಿಸುತ್ತಿದ್ದೇವೆ. ಆದರೆ, ರಾಜಕೀಯ ಕಾರಣದಿಂದ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಸ್ಥಾನದ ಕುರಿತು ಮಾತನಾಡಿ, ನನಗೀಗ 60 ವರ್ಷ ವಯಸ್ಸು, ಆದ್ದರಿಂದ ಇನ್ನೂ 15 ವರ್ಷವಿದ್ದು, ನಾನು ಪರ್ಮನೆಂಟ್ ಸಿಎಂ ಆಕಾಂಕ್ಷಿ. ಮುಂದೆ ನೋಡೋಣ ಎಂದು ಸಿಎಂ ಆಗುವ ಬಯಕೆಯನ್ನು ಮತ್ತೊಮ್ಮೆ ಹೊರಹಾಕಿದರು.









