ಪ್ರಭಲ ಭೂಕಂಪಕ್ಕೆ ಸಾವಿನ ಸಂಖ್ಯೆ 5ಕ್ಕೆ ಏರಿಕೆ..
ಪಪುವಾ ನ್ಯೂಗಿನಿಯಾ ದೇಶದಲ್ಲಿ ಸೆಪ್ಟಂಬರ 11 ಅಂದರೆ ಕಳೆದ ದಿನ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ ಐವರು ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.6 ರಷ್ಟ ಭೂಕಂಪದ ತೀವ್ರತೆ ದಾಖಲಾಗಿದೆ.
ಭೂಕಂಪದಿಂದಾಗಿ ಹಲವು ಕಟ್ಟಡಗಳು ನೆಲಸಮವಾಗಿವೆ. ಗುಡ್ಡಗಾಡು ಗ್ರಾಮಗಳಲ್ಲಿ ಭೂಕಂಪನದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಸಂಸದ ಕೆಸ್ಸಿ ಸವಾಂಗ್ ತಿಳಿಸಿದ್ದಾರೆ. ಕೊರಂಗ ಮೆಕ್ಕಲು ಗಣಿಗಾರಿಕೆ ಪ್ರದೇಶದಲ್ಲಿದ್ದ ಮೂವರು ಕಾರ್ಮಿಕರು ಭೂಕಂಪನದ ವೇಳೆ ಗಣಿಯಲ್ಲಿಯೇ ಸಾವನ್ನಪ್ಪಿದ್ದಾರೆ.
ಪಪುವಾ ನ್ಯೂಗಿನಿಯಾ ದೇಶದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಭೂಕುಸಿತದಿಂದ ಐವರು ಸಾವನ್ನಪ್ಪಿದ್ದು, ಹಲವು ಮನೆಗಳು ಭೂಮಿಯಲ್ಲಿ ನೆಲಸಮವಾಗಿವೆ. ಜನರು ಎಚ್ಚೆತ್ತುಕೊಂಡಿದ್ದರಿಂದ ಪ್ರಾಣಹಾನಿ ಕಡಿಮೆಯಾಗಿದೆ ಎಂದು ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪಿ ಹೇಳಿದ್ದಾರೆ.
2018ರಲ್ಲಿ ಭೂಕಂಪದಿಂದಾಗಿ 150 ಮಂದಿ ಸಾವನ್ನಪ್ಪಿದ್ದರು. ಭೂಕಂಪದಿಂದಾಗಿ ಮನೆಗಳ ಜತೆಗೆ ರಸ್ತೆಗಳೂ ಹಾಳಾಗಿವೆ.








