ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ದೂರ್ವಾಸ ಮುನಿಗಳ ಶಾಪ.. ದಶರಥ ಮಹಾರಾಜನ ವರ.. ಕೈಕೇಯಿ ಲೋಕ ನಿಂದನೆಗೆ ಗುರಿಯಾಗಿರುವುದರ ಹಿಂದಿನ ಕಥೆ ಏನು..?

admin by admin
February 24, 2026
in Astrology, Newsbeat, ಜ್ಯೋತಿಷ್ಯ
The curse of the sage Durvasa.. the boon of King Dasharatha.. What is the story behind Kaikeyi being the target of worldly slander..?

The curse of the sage Durvasa.. the boon of King Dasharatha.. What is the story behind Kaikeyi being the target of worldly slander..?

Share on FacebookShare on TwitterShare on WhatsappShare on Telegram

ದೇಶ ಸಂಚಾರ ಮಾಡುತ್ತಿದ್ದ ದೂರ್ವಾಸ ಮಹರ್ಷಿಗಳು, ಒಮ್ಮೆ ಕೇಕೇಯ ರಾಜ್ಯದ ಅರಮನೆಗೆ ಬಂದರು. ರಾಜ ಮಹರ್ಷಿಗಳನ್ನು ಸ್ವಾಗತಿಸಿ, ಅತಿಥಿ ಸತ್ಕಾರ ಮಾಡಿದನು. ಸಂತುಷ್ಟರಾದ ದೂರ್ವಾಸರು ರಾಜನ ಕ್ಷೇಮ ಸಮಾಚಾರವನ್ನು ವಿಚಾರಿಸಿ, ರಾಜ ನಾವು ಸ್ವಲ್ಪ ಕಾಲ ನಿನ್ನ ಅರಮನೆಯ ಅತಿಥಿಯಾಗಿ ಇರಲು ನಿರ್ಧರಿಸಿದ್ದೇವೆ ಎಂದಾಗ ಕೇಕೇಯ ರಾಜ ಸಂತೋಷದಿಂದ ಆಗಲಿ ಮಹರ್ಷಿಗಳೇ ತಾವು ಎಷ್ಟು ದಿನ ಬೇಕಾದರೂ ಇಲ್ಲಿ ಇರಬಹುದು ಎಂದು ಅವರಿಗೆ ಉಳಿದು ಕೊಳ್ಳುವ ವ್ಯವಸ್ಥೆ ಮಾಡಿ, ಅವರ ನಿತ್ಯಾನುಷ್ಠಾನಕ್ಕೆ ಸೇವೆ ಮಾಡಲು ಮಗಳು ಕೈಕೇಯಿಯನ್ನು ನೇಮಿಸುತ್ತಾನೆ. ರಾಜನ ಮಗಳು ಕೈಕೇಯಿ ಹಿರಿಯರಾದ ಋಷಿಮುನಿಗಳಿಗೆ, ನಿಶ್ಚಲ ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದಳು. ಎಷ್ಟು ಎಂದರೆ ಸ್ವಲ್ಪ ದಿನಗಳಲ್ಲೇ ಕೈಕೇಯಿ ಮತ್ತು ಮಹರ್ಷಿಗಳಲ್ಲಿ ಅಜ್ಜ ಮೊಮ್ಮ ಗಳಂತೆ ಒಳ್ಳೆಯ ಸಲುಗೆ ಬೆಳೆಯಿತು. ಯಾವಾಗಲೂ ಕೈಕೇಯಿ ಅವರ ಸೇವೆ ಮಾಡುತ್ತಾ
ಅವರು ಕೇಳುವ ಮೊದಲೇ ಎಲ್ಲವನ್ನು ಅವರಿಗೆ ಒದಗಿಸುತ್ತ ಅವರು ಹೇಳುವ ಪುರಾಣ ಕಥೆ, ದೇವರನಾಮಗಳನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದಳು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

Related posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

August 9, 2026
ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

August 9, 2026

ಒಂದು ದಿನ ಮಧ್ಯಾಹ್ನ ಋಷಿಗಳು ಭೋಜನ ಸ್ವೀಕರಿಸಿ ವಿಶ್ರಾಂತಿಯಲ್ಲಿ ನಿದ್ರೆಗೆ ಜಾರಿದರು. ಆಗ ಅಲ್ಲಿಗೆ ಬಂದ ಕೈಕೇಯಿ ಕಥೆ ಕೇಳಬೇಕೆಂದು ಅವರನ್ನು ಎಬ್ಬಿಸಲು ಪ್ರಯತ್ನಿಸಿದಳು. ಆದರೆ ಋಷಿಗಳು ಮೈ ಮರೆತ ನಿದ್ರೆಯಲ್ಲಿದ್ದು ಎಷ್ಟು ಕೂಗಿದರು ಎಚ್ಚರವಾಗಲಿಲ್ಲ. ಆಗ ಕೈಕೇಯಿಗೆ ತುಂಟ ಆಲೋಚನೆ ಬಂದು. ಅಜ್ಜ ಹೇಗಿದ್ದರೂ ಗಾಡ ನಿದ್ರೆಯಲ್ಲಿದ್ದಾರೆ. ಅವರಿಗೆ ಸ್ವಲ್ಪ ಕೀಟಲೆ ಮಾಡಬೇಕೆನಿಸಿ,ತನ್ನ ಕೋಣೆಗೆ ಹೋಗಿ ತನ್ನ ಅಲಂಕಾರದ ಸಾಮಗ್ರಿಗಳನ್ನು ತಂದು ಋಷಿಮುನಿಗಳಿಗೆ
ಅದರಲ್ಲಿದ್ದ ಸೌಂದರ್ಯ ಸಾಮಾಗ್ರಿ ಚೂರ್ಣವನ್ನು ಮಹರ್ಷಿಗಳ ಮುಖಕ್ಕೆ ಬಳಿದಳು. ಹಣೆಗೆ ದೊಡ್ಡದಾಗಿ ಕುಂಕುಮ ಇಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿ, ತುಟಿಗೆ
ತುಟಿ ರಂಗು, ಕೆನ್ನೆಗೆ ಮಿಂಚು ಹಾಕಿ ಮೇಲೆ ದೃಷ್ಟಿ ಬೊಟ್ಟು ಇಟ್ಟಳು. ಇಷ್ಟೇ ಅಲ್ಲದೆ ಅವರು ಎದ್ದ ಕೂಡಲೇ ಅವರ ಅಲಂಕಾರವನ್ನು ನೋಡಿಕೊಳ್ಳಲಿ ಎಂದು ಅವರ ಮುಂದೆ ಒಂದು ಕನ್ನಡಿಯನ್ನು ತಂದಿಟ್ಟು ತಾನು ಬಾಗಿಲು ಮರೆಯಲಿ ನಿಂತು ಮಹರ್ಷಿಗಳು ಏಳುವುದನ್ನು ನೋಡುತ್ತಾ ಕಾಯುತ್ತಿದ್ದಳು. ಸ್ವಲ್ಪ ಸಮಯಕ್ಕೆ
ಋಷಿಗಳು ಎದ್ದು ಎದುರಿಗಿದ್ದ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಂಡ ಅವರಿಗೆ ಆಶ್ಚರ್ಯವಾಯಿತು ಇದೇನಿದು ನನ್ನ ಮುಖ ಹೀಗೇಕಾಗಿದೆ ಎಂದು
ಯೋಚಿಸುತ್ತಿದ್ದ ಅವರನ್ನು ನೋಡಿ ಬಾಗಿಲ ಮರೆಯಲ್ಲಿ ಅಡಗಿದ್ದ, ಕೈಕೇಯಿ ಜೋರಾಗಿ ನಗಲು ಶುರು ಮಾಡಿದಳು.

ಮೊದಲೇ ಕೋಪಿಷ್ಟರು ಎಂದು ಹೆಸರು ಪಡೆದ ದೂರ್ವಾಸರು,‌ ಕೈಕೇಯಿ ಪುಟ್ಟ ಬಾಲಕಿ ಎಂಬುದನ್ನು ಮರೆತು, ಹಿಂದೂ ಮುಂದು ಯೋಚಿಸದೆ ಕೋಪಗೊಂಡು ಅವಳಿಗೆ ಶಾಪ ಕೊಟ್ಟರು.‌ ನನ್ನ ಮುಖಕ್ಕೆ ಹೀಗೆ ಮಸಿ ಬಳಿದ ನಿನಗೆ ಮುಂದೆ ಒಂದು ದಿನ ನಿನ್ನ ಮುಖಕ್ಕೂ ಹೀಗೆ ಮಸಿ ಬಳಿಯುವಂತಾಗಲಿ, ಅದು ಎಂದೆಂದೂ ಅಳಿಸುವಂಥ ಮಸಿಯಾಗಿರದೇ ನಿನ್ನನ್ನು ನೋಡಿದ ಜನರು ಅಸಹ್ಯ ಪಡುವಂತಾ ಗಬೇಕು ಅಂತ ಮಸಿ ನಿನ್ನ ಮುಖಕ್ಕೆ ಬಳಿಯಲಿ ಎಂದು ಶಾಪ ನೀಡಿ, ಇನ್ನು ನಿನ್ನ ಮನೆಯಲ್ಲಿ ಉಳಿಯುವುದಿಲ್ಲ ಎಂದು ಅಲ್ಲಿಂದ ಸರಸರನೆ ಹೊರಟೇಬಿಟ್ಟರು.

ಕೋಪದಿಂದ ಹೊರಟ ಭರದಲ್ಲಿ ದೂರ್ವಾಸರು ತಮ್ಮ ನಿತ್ಯ ಪೂಜೆಯ ಸಾಲಿಗ್ರಾಮ ಪೆಟ್ಟಿಗೆಯನ್ನು ಅಲ್ಲೇ ಬಿಟ್ಟು ಹೊರಟಿದ್ದರು. ಅದನ್ನು ಕಂಡ ಕೈಕೀಯಿ ಆ ಪೆಟ್ಟಿಗೆಯನ್ನು ಹಿಡಿದು, ಅವರ ಹಿಂದೆಯೇ ಓಡಿ ಬಂದು, ಅಜ್ಜಾ ನಿಮ್ಮ ಪೆಟ್ಟಿಗೆ ಯನ್ನು ಬಿಟ್ಟು ಬಂದಿದ್ದೀರಿ ತೆಗೆದುಕೊಳ್ಳಿ ಎಂದು ಅವರ ಕೈಗೆ ಕೊಟ್ಟಳು. ದೂರ್ವಾಸರಿಗೆ ಆ ಹುಡುಗಿಯನ್ನು ನೋಡಿ ಅಯ್ಯೋ ಅನ್ನಿಸಿತು. ಛೆ ಪಾಪದ ಮಗು, ನಾನು ಶಾಪ ಕೊಟ್ಟರೂ, ಅರಿವಿಲ್ಲದೆ ಬಂದು ಗೌರವದಿಂದ ನನ್ನ ಪೆಟ್ಟಿಗೆ ಯನ್ನು ಹಿಂತಿರುಗಿಸಿದ್ದಾಳೆ ಎಂದು ಅಭಿಮಾನ ಮೂಡಿ, ಆಕೆ ತಲೆ ಮೇಲೆ ಕೈ ಇಟ್ಟು ಮತ್ತೆ ಹೇಳಿದರು, ಮಗು ಯಾವ ಕೈಯಿಂದ ನೀನು ನನ್ನ ಪೆಟ್ಟಿಗೆಯನ್ನು ತಂದು ಕೊಟ್ಟೆಯೋ ಈ ನಿನ್ನ ಕೈ “ವಜ್ರಕಾಯದಂತೆ” ಕಠಿಣವಾಗಲಿ (ಅಭೇದ್ಯವಾಗಲಿ) ಎಂದು ವರವನ್ನು ಕೊಟ್ಟರು.

ಕಾಲ ಕಳೆಯಿತು ಕೈಕೇಯಿ ಯುವತಿಯಾಗಿ, ಅಯೋಧ್ಯಾಪತಿ ದಶರಥನನ್ನು ವಿವಾಹವಾದಳು. ಹೀಗೆ ಒಮ್ಮೆ ದಶರಥ ಹೊರ ರಾಜ್ಯದ ಮೇಲೆ ಯುದ್ಧಕ್ಕೆಂದು ಹೊರಟಾಗ ಯುದ್ಧ ತೋರಿಸಲು ಮುದ್ದಿನ ರಾಣಿ ಕೈಕೇಯಿಯನ್ನು ಜೊತೆಯಲ್ಲಿ ಕರೆದೊಯ್ದನು. ಯುದ್ಧ ನಡೆಯುತ್ತಿದ್ದಾಗ ಮಧ್ಯದಲ್ಲಿ ದಶರಥನ ಚಕ್ರದ ಕಡಾಣಿ ಆಚೆ ಬಂದು ಇನ್ನೇನು ಸ್ವಲ್ಪ ಹೊತ್ತಿಗೆ ರಥದ ಚಕ್ರ ಹೊರಗೆ ಬರುತ್ತಿತ್ತು. ಚಕ್ರ ಆಚೆ ಬರುತ್ತಿರುವುದನ್ನು ಕಂಡ ಕೈಕೀಯಿ ನೋಡಿದಳು, ಎಲ್ಲಿ ಚಕ್ರ ಆಚೆ ಬಂದರೆ ದಶರಥ ಕೆಳಗೆ ಬೀಳುತ್ತಾನೋ ಎಂದು ಯೋಚಿಸಿ, ಕಡಾಣೀಯ ಜಾಗದಲ್ಲಿ ತನ್ನ ಕೈಯನ್ನು ಇಟ್ಟುಬಿಟ್ಟಳು. ರಥ ವೇಗವಾಗಿ ಓಡುತ್ತಿದೆ. ಮುನಿಗಳು ಕೊಟ್ಟ ಶಾಪದಿಂದ ಕೇಯಿಯ ಕೈಗೆ ಯಾವು ಹಾನಿಯೂ ಆಗಲಿಲ್ಲ. ಯುದ್ಧವೆಲ್ಲ ಮುಗಿದ ಮೇಲೆ ಕೈಕೇಯಿ ಚಕ್ರದ ಕಡಾಣಿ ಇದ್ದ ರಂದ್ರದಲ್ಲಿ ಕೈ ಇಟ್ಟಿದ್ದನ್ನು ಕಂಡು ದಶರಥ ದಂಗಾಗಿ ಹೋದ. ಕೈಕೆಯಿ ಏಕೆ ಅಲ್ಲಿ ಕೈ ಇಟ್ಟಿರುವೆ? ಎಂದು ಕೇಳಿದಾಗ, ಇಲ್ಲಿದ್ದ ಕಡಾಣಿ ಆಚೆ ಬಂದು ಚಕ್ರ ಹೊರಗೆ ಬರುತ್ತಿತ್ತು ಹಾಗೆ ಹೊರಗೆ ಬಂದರೆ, ರಥ ಬೀಳುತ್ತಿತ್ತು ಅದಕ್ಕೆ ಅಲ್ಲಿ ನನ್ನ ಕೈ ಇಟ್ಟು ಚಕ್ರ ಆಚೆ ಬರದಂತೆ ತಡೆದೆ ಎಂದಳು.

ಇದರಿಂದ ಸಂತಸಗೊಂಡ ದಶರಥ ಕೈಕೀಯಿ ನಿನ್ನ ಧೈರ್ಯ ಹಾಗೂ ಸಾಹಸದಿಂದ ಇಂದು ನನ್ನ ಪ್ರಾಣ ರಕ್ಷಣೆ ಮಾಡಿರುವೆ ಅದಕ್ಕಾಗಿ ನಿನಗೆ ಎರಡು ವರಗಳನ್ನು ಕೊಡುತ್ತೇನೆ ನೀನು ಯಾವಾಗ ಬೇಕಾದರೂ ಈ ವರಗಳನ್ನು ಕೇಳಬಹುದು ಎಂದನು.

ಕೈಕೆಯಿಯ ಕೃಪೆ ಇಲ್ಲದಿದ್ದರೆ:- ಮುಂದೆ ದಶರಥ ತನ್ನ ಉತ್ತರಾಧಿಕಾರಿಯಾಗಿ ರಾಮನಿಗೆ ಪಟ್ಟಾಭಿಷೇಕ ಮಾಡಲು ತೀರ್ಮಾನಿಸಿ ತಯಾರಿ ನಡೆಸಿದ. ಈ ವಿಷಯ
ಕೈ ಕೆಯದಾಸಿ ಮಂಥರೆಗೆ ತಿಳಿದು, ಕೈಕೆಯಿಗೆ ಇನ್ನು ಮುಂದೆ ನೀನು ರಾಜಮಾತೆ ಕೌಸಲ್ಯೆ ಹೇಳಿದಂತೆ ಕೇಳಬೇಕಾಗುತ್ತದೆ. ಈಗಲೇ ಎಚ್ಚೆತ್ತು ಕೊಂಡು ನಿನ್ನ ಮಗ
ಭರತನಿಗೆ ಪಟ್ಟಾಭಿಷೇಕ ಕಟ್ಟಿಸಿ ರಾಮನನ್ನು 14 ವರ್ಷ ಕಾಡಿಗೆ ಕಳಿಸು. ಹೀಗೆ ಮಾಡಲು ನೀನು ದಶರಥನಲ್ಲಿ ಅವರೇ ಕೊಟ್ಟ ಎರಡು ವರಗಳನ್ನು ಈಗ ಬಳಸು
ಇಲ್ಲದಿದ್ದರೆ ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂದಾಗುತ್ತದೆ. ಬೇಗ ಮಾಡು ಎಂದು ಸಾಕಷ್ಟು ಸಮಯ ಪುಸಲಾಯಿಸಿ ಕೈಕೆಯಿ ಮನಸ್ಸನ್ನು ಕೆಡಿಸಿದ್ದಳು. ಅದರಂತೆ ಎಲ್ಲಾ ನಡೆದು ಪಿತೃವಾಕ್ಯ ಪರಿಪಾಲನೆಗಾಗಿ, ತಂದೆಯನ್ನು ಧರ್ಮ ಮಾರ್ಗದಲ್ಲಿ ನಡೆಸಲು, ರಾಮ ಪತ್ನಿ ಸೀತೆ ಹಾಗೂ ಸಹೋದರ ಲಕ್ಷ್ಮಣನೊಂದಿಗೆ ನಾರು ಮಡಿ ಉಟ್ಟು, 14 ವರ್ಷ ವನವಾಸಕ್ಕೆ ಹೊರಟನು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಒಂದಷ್ಟು ಕಾಲ ಕಳೆಯಿತು.  ಅನೇಕ ಕಷ್ಟಗಳನ್ನು ಅನುಭವಿಸಿದ ರು. ಲಕ್ಷ್ಮಣನು ಒಮ್ಮೆ ಬೇಸರದಿಂದ, ರಾಮನಲ್ಲಿ ಹೇಳಿದ ಭ್ರಾತ ಇದೆಲ್ಲ ಕೈಕೇಯಿ ಯಿಂದಲೇ ಆಗಿದ್ದು, ಇದಕ್ಕೆಲ್ಲ ಮೂಲ ಕಾರಣ ಆ ದುಷ್ಟ ಕೈಕೆಯಿ ಎಂದು ಮಾತು ಮುಗಿಸುವ ಮುನ್ನವೇ, ರಾಮ ಅವನ ಮಾತನ್ನು ಅರ್ಥಕ್ಕೆ ತಡೆದು ಲಕ್ಷ್ಮಣ ನೀನು ಭರತನನ್ನು ನಿಂದಿಸಿದರೂ ನಾನು ಸುಮ್ಮನಿದ್ದೆ. ಆದರೆ ಕೈಕೆಯಿ ನಿಂದನೆ ಮಾತ್ರ ನನಗೆ ಸಹಿಸಲು ಆಗದು ಎಂದನು. ಇಂದು ನನ್ನ ಹೆಸರು ಜಗದ್ವಿಖ್ಯಾತವಾಗಿದೆ
ಎಂದರೆ ಅದಕ್ಕೆ ಕೈಕೇಯಿ ಕಾರಣಳಾಗಿದ್ದಾಳೆ. ಒಂದೊಮ್ಮೆ ಕೈಕೀಯಿ ಹೀಗೆ ಮಾಡದಿದ್ದರೆ, ನನ್ನ ಸಾಮರ್ಥ್ಯ- ಸಾಹಸ ಯಾರಿಗೂ ತಿಳಿಯುತ್ತಿರಲಿಲ್ಲ. ಕೇವಲ ರಾಜನಾಗಷ್ಟೇ ಇರುತ್ತಿದ್ದೆ. ಋಷಿ ಮುನಿಗಳ ಸಂಪರ್ಕ, ರಾಕ್ಷಸರ ಸಂಹಾರ ಯಾವುದು ಆಗುತ್ತಿರಲಿಲ್ಲ. ಮುಖ್ಯವಾಗಿ ಲೋಕ ಜ್ಞಾನ ತಿಳಿಯುತ್ತಿರಲಿಲ್ಲ, ರಾಜ್ಯ ವಿಸ್ತಾರವೂ ಆಗುತ್ತಿರಲಿಲ್ಲ. ನನ್ನ ಜೀವನದಲ್ಲಿ ಇಷ್ಟೆಲ್ಲ ಸಂಗತಿಗಳು ಘಟಿಸಲು ಆ ಮಹಾತಾಯಿಯೇ ಕಾರಣಳಾಗಿದ್ದಾಳೆ. ಇಲ್ಲವಾದರೆ ಕೆಳಗಿನ ಕಾಡು ರಾಕ್ಷಸರದು, ಕಿಷ್ಕಿಂದೆ ರಾಜಧಾನಿ ಇನ್ನೊಂದು ಕಡೆಗೆ, ವಿರಾದ ಮತ್ತೊಂದು ಕಡೆ ಖರದೂಷಣರು ರಾವಣನ ಲಂಕೆ, ಹೀಗೆ ಎಲ್ಲವನ್ನು ಜಯಸಿದೆವು. ಈಗ ಸುಗ್ರೀವ- ವಿಭೀಷಣ ನನ್ನವರು. ಇಷ್ಟೇ ಅಲ್ಲ ನಾನು ಅಯೋಧ್ಯೆಗೆ ಮರಳುವ ತನಕ, ಅದರ ರಕ್ಷಣೆಯ ಜವಾಬ್ದಾರಿಯನ್ನು ಕೈಕೇಯಿ ಮಗ ಭರತ ಹೊತ್ತಿದ್ದಾನೆ. ಮೇಲ್ನೋಟಕ್ಕೆ ಕೈಕೇಯಿ ಈ ಕಷ್ಟವನ್ನೇ ಕೊಟ್ಟಿದ್ದಾಳೆ, ಎನಿಸಿದರೂ ಆಕೆಯಿಂದ ನನಗೆ ಸಾಕಷ್ಟು ಉಪಕಾರ ವಾಗಿದೆ. ಇದರಿಂದ ಲೋಕ ಕಲ್ಯಾಣವಾಯಿತು ಇದಕ್ಕಿಂತ ಇನ್ನೇನು ಬೇಕು ಲಕ್ಷ್ಮಣ ಎಂದು ರಾಮ ಹೇಳಿದ. ಯಾರಿಗೂ ಬೇಡದ ವಸ್ತುಗಳನ್ನು ಶಿವನು ಆಪ್ತತೆಯಿಂದ ತನ್ನ ಹತ್ತಿರ ಸೇರಿಸಿಕೊಳ್ಳುವಂತೆ, ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸುವ ಗುಣ ರಾಮನದು.

“ಲೋಕಾಭಿರಾಮಂ ರಣರಂಗಧೀರಂ!
ರಾಜೀವನೇತ್ರಂ ರಘುವಂಶನಾಥಂ!!
ಕಾರುಣ್ಯರೂಪಂ ಕರುಣಾಕರಂ ತಂ!
ಶ್ರೀರಾಮಚಂದ್ರ ಶರಣಂ ಪ್ರಪದ್ಯೇ!!

Tags: #astrology#dailyastrology#kannadaastrology#saakshatvbengalurukannadanewskarnatakamangaluru
ShareTweetSendShare
Join us on:

Related Posts

weekly-horoscope-august-9-to-15-2026-kannada

ಈ ವಾರದ ರಾಶಿ ಭವಿಷ್ಯ (ಆಗಸ್ಟ್ 09 – 15, 2026): ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ ಗ್ರಹಗತಿ? ಸಂಪೂರ್ಣ ಜ್ಯೋತಿಷ್ಯ ಫಲಗಳು!

by admin
August 9, 2026
0

ಈ ವಾರ ಭವಿಷ್ಯ - 09.08.2026 - 15.08.2026 ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ...

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

ನನ್ನ ಮಂತ್ರಿಗಿರಿ ತಪ್ಪಿಸಲು ಸಿಎಂ ಮನೆಗೆ ಹೋಗಿದ್ರಾ? ಈಗ ಮಂತ್ರಿಯಾಗಿದ್ದೇನೆ ಜಗದ್ಗುರುಗಳೇ ಈಗೇನು ಮಾಡ್ತೀರಿ:ಹಾಕಿರೋ ಕಾವಿ ಬಟ್ಟೆಗೆ ವಿಧೇಯರಾಗಿರಿ- ಬಸವಜಯಮೃತ್ಯುಂಜಯ ಶ್ರೀಗಳ ವಿರುದ್ಧ ಕಾಶಪ್ಪನವರ ವಾಗ್ದಾಳಿ

by Shwetha
August 9, 2026
0

ಬಾಗಲಕೋಟೆ: ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ ನಡುವಿನ ಶೀತಲ ಸಮರ ಈಗ ಬೀದಿಗೆ ಬಂದಿದೆ. ತಮ್ಮ ಸಚಿವ ಸ್ಥಾನ ತಪ್ಪಿಸಲು ಸ್ವಾಮೀಜಿಗಳು...

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

ವಿದ್ಯಾರ್ಥಿಗಳ ಹೆಸರಲ್ಲಿ ಕಾಂಗ್ರೆಸ್ ಬೂಟಾಟಿಕೆ: ದೆಹಲಿಯಲ್ಲಿ ಬೆಂಬಲ ಜಾರ್ಖಂಡ್ ನಲ್ಲಿ ರಾಹುಲ್ ಗಾಂಧಿ‌ ಮೌನವೇಕೆ ಎಂದು ಬಿಜೆಪಿ ಪ್ರಶ್ನೆ

by Shwetha
August 9, 2026
0

ನವದೆಹಲಿ: ವಿದ್ಯಾರ್ಥಿಗಳ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟವು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿವೆ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ದೆಹಲಿಯಲ್ಲಿ ನಡೆಯುವ ಪ್ರತಿಭಟನೆಗಳಿಗೆ ಓಡೋಡಿ...

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

ಕ್ಯೂ ಲೈನ್‌ನಲ್ಲಿ 24 ಗಂಟೆ ಕಾಯುವ ಭಕ್ತರ ಕಷ್ಟಕ್ಕೆ ಟಿಟಿಡಿ ಚೆಕ್‌ಮೇಟ್: ಟಿಟಿಡಿಯಿಂದ ಮೂವಿಂಗ್ ಟೇಬಲ್ ಮ್ಯಾಜಿಕ್-ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಟೆಕ್ನಾಲಜಿ ಹವಾ ಶುರು

by Shwetha
August 9, 2026
0

ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಪ್ರತಿ ದಿನವೂ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವಾಗಿ ಯಾವುದೇ ಟೋಕನ್ ಇಲ್ಲದೆ ಧರ್ಮ ದರ್ಶನಕ್ಕೆ ಬರುವ ಸಾಮಾನ್ಯ ಭಕ್ತರ ಸಂಖ್ಯೆ ಗಣನೀಯವಾಗಿ...

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲಿ ಇಲ್ಲದಿದ್ದರೆ ಕೋಮಾಗೆ ಹೋಗುವುದು ಗ್ಯಾರಂಟಿ: ಸವದಿ ವ್ಯಂಗ್ಯದ ಏಟು

by Shwetha
August 9, 2026
0

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಸಚಿವ ಲಕ್ಷ್ಮಣ ಸವದಿ ಅವರು ಪ್ರತಿಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram