ಬಾಲಕಿಯನ್ನು ಬಲಿ ಪಡೆದ ಐದು ರೂಪಾಯಿ mysore saaksha tv
ಮೈಸೂರು : ಐದು ರೂಪಾಯಿ ನಾಣ್ಯ ನುಂಗಿ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಎಂಟು ವರ್ಷದ ಖುಷಿ ಮೃತ ಬಾಲಕಿಯಾಗಿದ್ದು, ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಆಟವಾಡುತ್ತಿದ್ದ ವೇಳೆ ಖುಷಿ ತನ್ನ ಕೈಯಲ್ಲಿದ್ದ ನಾಣ್ಯವನ್ನು ನುಂಗಿದ್ದು, ಮನೆಯವರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆಯಲ್ಲಿ ಅಲ್ಲಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ಖುಷಿಯನ್ನು ದಾಖಲಿಸಲಾಗಿದೆ.
ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಖುಷಿ ಕೊನೆಯುಸಿರೆಳೆದಿದ್ದಾಳೆ.