ವಿಶ್ವದ 50 ಶ್ರೇಷ್ಠ ನಟರ ಸಾಲಿನಲ್ಲಿ ಸ್ಥಾನ ಪಡೆದ ಶಾರುಖ್ ಖಾನ್…
ಯೂರೋಪಿಯನ್ ಪ್ರತಿಷ್ಟಿತ ಮ್ಯಾಗಜಿನ್ ಬಿಡುಗಡೆ ಮಾಡಿದ ವಿಶ್ವದ 50 ಶೇಷ್ಠ ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಎಂಬ ಖ್ಯಾತಿಗೆ ಶಾರುಖ್ ಖಾನ್ ಪಾತ್ರರಾಗಿದ್ದಾರೆ.
ಈ ಕುರಿತು ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಈ ಕುರಿತು ಸೋಶಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರಾಬರ್ಟ್ ಡಿ ನಿರೋ, ಟಾಮ್ ಕ್ರೂಸ್, ನಟಾಲಿ ಪೋರ್ಟ್‌ಮ್ಯಾನ್, ಬೆಟ್ಟೆ ಡೇವಿಸ್ ಮತ್ತು ಡೆಂಜೆಲ್ ಅವರಂತಹ ನಟರ ಹೆಸರುಗಳ ಜೊತೆಗೆ ಶಾರುಖ್ ಖಾನ್ ಹೆಸರು ಸಹ ಸೇರಿಸಲಾಗಿದೆ.
SRK ಮ್ಯಾನೇಜರ್ ಪೂಜಾ ದಾದ್ಲಾನಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ‘ಎಂಪೈರ್ ಮ್ಯಾಗಜೀನ್‌ನ 50 ಶ್ರೇಷ್ಠ ನಟರ ಪಟ್ಟಿಯಲ್ಲಿ ಶಾರುಖ್ ಹೆಸರನ್ನು ಸೇರಿಸಲಾಗಿದೆ. ಶಾರುಖ್ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯರಾಗಿದ್ದಾರೆ. ಅವರು ಯಾವಾಗಲೂ ನಮಗೆ ಹೆಮ್ಮೆ ಅನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ಫೆಬ್ರವರಿ ಆವೃತ್ತಿಯ ಮ್ಯಾಗಜಿನ್ ನಲ್ಲಿ ಇದು ಪ್ರಕಟವಾಗಲಿದೆ.
ಇನ್ನೂ ಶಾರುಖ್ ಖಾನ್ ಸುಮಾರು 4 ವರ್ಷಗಳ ನಂತರ ಪಠಾಣ್ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಆದರೇ ಪಠಾಣ್ ವಿವಾದಗಳಿಂದಲೇ ಸದ್ದು ಮಾಡುತ್ತಿದೆ. ಬೇಶಾರಂ ರಂಗ್ ಹಾಡು ವಿವಾದಕ್ಕೆ ಕಾರಣವಾಗಿದ್ದು, ಬಾಯ್ಕಟ್ ಟ್ರೆಂಡ್ ಗೆ ಈ ಚಿತ್ರ ಕೂಡ ಸಿಲುಕಿಕೊಂಡಿದೆ.
50 Great Actors: Shahrukh Khan, who is ranked among the 50 greatest actors in the world…