ನವದೆಹಲಿ : ಟ್ರಾಫಿಕ್ ಪೊಲೀಸರಂತೆ (Police) ನಟಿಸಿದ ಖದೀಮರು 50 ಲಕ್ಷ ರೂ. ಎಗರಿಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಇಂದ್ರಪ್ರಸ್ಥದಲ್ಲಿ ನಡೆದಿದೆ. ಪಾನ್ ಮಸಾಲಾ ಕಂಪನಿಯ ಉದ್ಯೋಗಿಯೊಬ್ಬರ ಕಾರು ಪರಿಶೀಲನೆ ಮಾಡುವಂತೆ ನಟಿಸಿ 50 ಲಕ್ಷ ರೂ. ಹಣ ದೋಚಿದ್ದಾರೆ. ಚಾಂದಿನಿ ಚೌಕ್ ಪ್ರದೇಶದ ಕುಚಾ ಘಾಸಿರಾಮ್ ಪ್ರದೇಶದಿಂದ ಕಂಪನಿಗೆ ಸೇರಬೇಕಾಗಿದ್ದ ಹಣ ತೆಗೆದುಕೊಂಡು ಹಿಂದಿರುಗಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಲೀಂ ಗಡ್ ಮೇಲ್ಸೇತುವೆ ಹತ್ತಿರ ಆತನನ್ನು ಟ್ರಾಫಿಕ್ ಪೊಲೀಸರಂತೆ ಇಬ್ಬರು ಅಡ್ಡಗಟ್ಟಿದ್ದಾರೆ. ಆ ನಂತರ ಕಾರಿನಲ್ಲಿದ್ದ ಹಣದ ಬ್ಯಾಗ್ನ್ನು ಹೊತ್ತು ಬೈಕ್ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲಿಸರು ಹೇಳಿದ್ದಾರೆ.
ಸಿಸಿಟಿವಿ ಪರಿಶೀಲನೆಯಲ್ಲಿ ಹಾಗೂ ಪ್ರಾಥಮಿಕ ತನಿಖೆಯಲ್ಲಿ ಸಂಚಾರಿ ಪೊಲೀಸರಂತೆ ಆರೋಪಿಗಳು ನಟಿಸಿರುವುದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದು, ಸದ್ಯ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.