52ನೇ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವ : 15 ಸಿನಿಮಾಗಳು ಎಂಟ್ರಿ..! ಅದ್ರಲ್ಲಿ 3 ಭಾರತೀಯ ಸಿನಿಮಾಗಳು…

1 min read

52ನೇ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವ : 15 ಸಿನಿಮಾಗಳು ಎಂಟ್ರಿ..! ಅದ್ರಲ್ಲಿ 3 ಭಾರತೀಯ ಸಿನಿಮಾಗಳು…

ಕೊರೊನಾ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಗೋವಾದಲ್ಲಿ 52ನೇ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ 15 ಸಿನಿಮಾಗಳು ಸ್ಪರ್ಧೆಗಿಳಿದಿವೆ.. ಈ ಪಟ್ಟಿಯಲ್ಲಿ 3 ಭಾರತೀಯ ಸಿನಿಮಾಗಳು ಸೇರಿವೆ.. ಫಿಕ್ಷನ್ ವಿಭಾಗದಲ್ಲಿ ಅಂತರಾಷ್ಟ್ರೀಯ ಸಿನಿಮಾಗಳ ಜೊತೆಗೆ 3 ಭಾರತೀಯ ಸಿನಿಮಾಗಳು ಸ್ಪರ್ಧಿಸಲಿವೆ..  ಈ ಸಿನಿಮೋತ್ಸವದಲ್ಲಿ ಆಯ್ಕೆಯಾಗುವ ಅತ್ಯುತ್ತಮ ಸಿನಿಮಾಗೆ 40 ಲಕ್ಷ ರೂಗಳ ಬಹುಮಾನ ನೀಡಲಾಗುತ್ತೆ..

ಉತ್ತಮ ಚಲನಚಿತ್ರ ಸುವರ್ಣ ಮಯೂರ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು ನಗದು ಬಹುಮಾನವನ್ನ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಸಮನಾಗಿ ಹಂಚಲಾಗುತ್ತದೆ. ನಿರ್ದೇಶಕರಿಗೆ ಸುವರ್ಣ ಮಯೂರ ನೀಡಲಾಗತ್ತದೆ. ಜೊತೆಗೆ ಪ್ರಮಾಣ ಪತ್ರವನ್ನೂ ನೀಡಲಾಗುತ್ತದೆ. ನಿರ್ಮಾಪಕರಿಗೆ ನಗದು ಪ್ರಶಸ್ತಿಯೊಂದಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ತೀರ್ಪುಗಾರರ ಆಯ್ಕೆ ವಿಶೇಷ ಬಹುಮಾನವು ರಜತಮಯೂರ ಪ್ರಮಾಣಪತ್ರ ಹಾಗೂ  15 ಲಕ್ಷ ನಗದು ಬಹುಮಾನ ಹೊಂದಿರುತ್ತದೆ. ವೈಯಕ್ತಿಕ ಸಾಧನೆಗೆ ಮೆಚ್ಚುಗೆ ವ್ಯಕ್ತವಾದರೆ ವ್ಯಕ್ತಿಗೆ ಪ್ರಶಸ್ತಿ ನೀಡಲಾಗುವುದು. ಸಿನಿಮಾ ಇಷ್ಟವಾದಲ್ಲಿ ಸಿನಿಮಾದ ನಿರ್ದೇಶಕರು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ.  ಐದು ದೇಶಗಳ ಐದು ಮಂದಿ ಸಿನಿಮಾ ತಜ್ಞರು ಸಿನಿಮಾಗಳನ್ನು ವೀಕ್ಷಿಸಿ ಪ್ರಶಸ್ತಿ ಘೋಷಿಸುತ್ತಾರೆ. ಭಾರತದ ನಿಲಾ ಮದ್‌ಹಬ್ ಪಾಂಡ ಅವರು ಜಡ್ಜ್ ಪ್ಯಾನೆಲ್‌ನಲ್ಲಿದ್ದಾರೆ. ಇವರ ಜೊತೆಗೆ ಬ್ರಿಟನ್, ಇರಾನ್, ಶ್ರೀಲಂಕಾ ಹಾಗೂ ಕೊಲಂಬಿಯಾದ ಸಿನಿಮಾ ತಜ್ಞರು ಸಹ ಇದ್ದಾರೆ.

 

ಮೊದಲನೇಯದ್ದಾಗಿ ಸ್ಪರ್ಧೆಗಿಳಿದಿರುವ ಭಾರತೀಯ ಸಿನಿಮಾಗಳ ಪಟ್ಟಿ ಹೀಗಿದೆ….

‘ಸೆಮ್ಖೋರ್‌’ : ಡಿಮಸಾ ಭಾಷೆಯ ಈ ಸಿನಿಮಾವನ್ನ ಆಮೀ ಬುರಾ ನಿರ್ದೇಶನ ಮಾಡಿದ್ದಾರೆ.

‘ಗೋದಾವರಿ’ : ಮರಾಠಿ ಭಾಷೆಯ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವವರು  ನಿಖಿಲ್‌ ಮಹಾಜನ್‌.

‘ಮಿ ವಸಂತರಾವ್‌’  : ಇದನ್ನ ನಿಪುಮ್‌ ಅವಿನಾಶ್‌ ಧರ್ಮಾಧಿಕಾರಿ ನಿರ್ದೇಶಿಸಿದ್ದಾರೆ.

 

ವಿದೇಶಿ ಸಿನಿಮಾಗಳ ಪಟ್ಟಿ….

ಎನಿ ಡೇ ನೌ – ಫಿನ್‌ಲ್ಯಾಂಡ್‌

ಚಾರ್ಲೆಟ್‌ – ಪರುಗ್ವೆ

ಇಂಟ್ರೆಗೇಡ್‌ – ರೋಮಾನಿಯಾ

ಲ್ಯಾಂಡ್‌ ಆಫ್‌ ಡ್ರೀಮ್ಸ್‌ – ಅಮೆರಿಕಾ

ಲೀಡರ್‌ – ಪೋಲೆಂಡ್‌

ಮಾಸ್ಕೊ ಡಸ್‌ ನಾಟ್‌ ಹ್ಯಾಪ್ಪನ್‌ – ರಷ್ಯಾ

ನೋ ಗ್ರೌಂಡ್‌ ಬೆನೆತ್‌ ದ ಫೀಟ್‌ – ಬಾಂಗ್ಲಾದೇಶ

ಒನ್ಸ್‌ ವಿ ವೇರ್‌ ಗುಡ್‌ ಫಾರ್‌ ಯು

ರಿಂಗ್‌ ವಾಂಡರಿಂಗ್‌ –    ಜಪಾನ್‌

ಸೇವಿಂಗ್‌ ಒನ್‌ ಹು ವಾಸ್‌ ಡೆಡ್‌  –  ಸಿಜೆಕ್‌ ರಿಪಬ್ಲಿಕ್‌

ದ ಡಾರ್ಮ್‌ – ರಷ್ಯಾ.

ದಿ ಫಸ್ಟ್‌ ಫಾಲನ್‌ –   ಬ್ರಝಿಲ್‌

52ನೇ ಗೋವಾ ಅಂತಾರಾಷ್ಟ್ರೀಯ ಸಿನಿಮಾ ಉತ್ಸವವು ನವೆಂಬರ್ 20 ರಂದು ಆರಂಭಗೊಳ್ಳಲಿದ್ದು 28 ಕ್ಕೆ ಅಂತ್ಯವಾಗಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd