ಬೆಂಗಳೂರು: ಸಚಿವ ಮಧು ಬಂಗಾರಪ್ಪ(Madhu Bangarappa) ಗೆ ಚೆಕ್ ಬೌನ್ಸ್ (Check Bounce) ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 6.96 ಕೋಟಿ ರೂ. ದಂಡ (Fine) ವಿಧಿಸಿದೆ. ತಪ್ಪಿದರೆ 6 ತಿಂಗಳ ಸೆರೆವಾಸಕ್ಕೆ ಆದೇಶ ನೀಡಿದೆ.
2011 ರಲ್ಲಿ ಆಕಾಶ್ ಆಡಿಯೋ ಪರ ರಾಜೇಶ್ ಎಕ್ಸ್‌ಪೋರ್ಟ್ (Rajesh Exports) ಕಂಪನಿಯಿಂದ ಮಧು ಬಂಗಾರಪ್ಪ ಅವರು 6.60 ಕೋಟಿ ರೂ. ಸಾಲ ಪಡೆದಿದ್ದರು. ಆದರೆ, ಆ ಹಣ ಪಾವತಿಸಿರಲಿಲ್ಲ. ಸಾಲ ಪಡೆಯುವ ಸಂದರ್ಭದಲ್ಲಿ ಚೆಕ್ ನೀಡಿದ್ದರು. ಮಧು ಬಂಗಾರಪ್ಪ ಅವರು 6.60 ಕೋಟಿ ರೂ. ಮೊತ್ತದಲ್ಲಿ ಕೇವಲ 50 ಲಕ್ಷ ರೂ. ಮಾತ್ರ ಮರುಪಾವತಿಸಿ ಉಳಿದ ಮೊತ್ತ ಕೊಟ್ಟಿರಲಿಲ್ಲ.
ಸುದೀರ್ಘ ವಿಚಾರಣೆ ನಂತರ ಆದೇಶ ನೀಡಿದ ನ್ಯಾಯಾಲಯ ಮಧು ಬಂಗಾರಪ್ಪಗೆ 6,96,70,000 ರೂ. ದಂಡ ಪಾವತಿಸಬೇಕು. ಇಲ್ಲದಿದ್ದರೆ 6 ತಿಂಗಳು ಸೆರೆವಾಸ ಅನುಭವಿಸಲು ಆದೇಶ ನೀಡಿದೆ. ದಂಡದ ಹಣದಲ್ಲಿ 6,96,60,000 ರೂ.ದೂರುದಾರರಿಗೆ ಪರಿಹಾರವಾಗಿ ಹೂಗೂ 10 ಸಾವಿರ ಸರ್ಕಾರಕ್ಕೆ ದಂಡ ನೀಡುವಂತೆ ಆದೇಶಿಸಲಾಗಿದೆ.