ಆಪರೇಷನ್ ಹಸ್ತ ಭಯದಲ್ಲಿ ರಾಜಸ್ತಾನದ ಬಿ ಜೆ ಪಿ ಶಾಸಕರು.
ಪೊರ್ಬಂದರ್: ರಾಜಸ್ತಾನದಲ್ಲಿ ಆಗಸ್ಟ್ 14 ರಿಂದ ನಡೆಯಲಿರುವ ಅಸೆಂಬ್ಲಿ ಅಧಿವೇಶನಕ್ಕೆ ಮುಂಚಿತವಾಗಿ ಗುಜರಾತ್ಗೆ ಆಗಮಿಸಿದ್ದ ಆರು ಬಿಜೆಪಿ ಶಾಸಕರು ಭಾನುವಾರ ಮುಂಜಾನೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕಾಂಗ್ರೆಸ್ ನ ಒಳಜಗಳದಿಂದಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಪಕ್ಷದ ವಿರುದ್ಧ ಬಂಡಾಯವೆದ್ದ ಕಾರಣ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.
ಆರು ಬಿಜೆಪಿ ಶಾಸಕರು ಶನಿವಾರ ಸಂಜೆ ಪೊರ್ಬಂದರ್ ನಿಂದ ಸೋಮನಾಥ್ ತಲುಪಿದ್ದರು, ಅವರಲ್ಲಿ ಒಬ್ಬರು ಸುದ್ದಿಗಾರರೊಂದಿಗೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ಶಾಸಕರಿಗೆ “ಕಿರುಕುಳ” ನೀಡುತ್ತಿದ್ದಾರೆ ಮತ್ತು ಮಾನಸಿಕ ಶಾಂತಿ, ನೆಮ್ಮದಿ ಪಡೆಯಲು ಸೋಮನಾಥಕ್ಕೆ ತೀರ್ಥಯಾತ್ರೆಗೆ ಬಂದಿದ್ದೇವೆ ಎಂದು ಹೇಳಿದರು.
ಈ ಕುರಿತು ಮಾತನಾಡಿದ ಗಿರ್ ಸೋಮನಾಥ್ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾನ್ಸಿಂಗ್ ಪರ್ಮಾರ್ “ಶಾಸಕರು ಬೆಳಿಗ್ಗೆ ಹೊತ್ತಿಗೆ ಅತಿಥಿ ಗೃಹದಿಂದ ಹೊರಟುಹೋದರು. ಅವರು ಎಲ್ಲಿಗೆ ಹೋದರು ಎಂಬುದರ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ. ಶನಿವಾರ ಪೊರ್ಬಂದರ್ ನಿಂದ ಸೋಮನಾಥ್ ತಲುಪಿದಾಗ ಅವರನ್ನು ಸ್ವೀಕರಿಸಿ ಅವರನ್ನು ಅತಿಥಿ ಗೃಹಕ್ಕೆ ಕರೆದೊಯ್ಯುವುದು ನನ್ನ ಜವಾಬ್ದಾರಿಯಾಗಿದೆ. ನಾನು ರಾತ್ರಿ ಊಟ ಮಾಡಿ ನಂತರ ಹೊರಟೆ. ಎರಡು ದಿನಗಳ ಕಾಲ ಇಲ್ಲಿಯೇ ಇರಬೇಕಿತ್ತು. ”
ಆದರೆ ಆರು ಶಾಸಕರಾದ ನಿರ್ಮಲ್ ಕುಮಾವತ್, ಗೋಪಿಚಂದ್ ಮೀನಾ, ಜಬ್ಬರ್ ಸಿಂಗ್ ಸಂಖ್ಲಾ, ಧರ್ಮವೀರ್ ಮೋಚಿ, ಗೋಪಾಲ್ ಲಾಲ್ ಶರ್ಮಾ ಮತ್ತು ಗುರುದೀಪ್ ಸಿಂಗ್ ಶಾಹಪಿನಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಅತಿಥಿ ಗೃಹ ಮೂಲಗಳು ತಿಳಿಸಿವೆ.
ಅಸೆಂಬ್ಲಿಯಲ್ಲಿ ಗೆಹ್ಲೋಟ್ ಸರ್ಕಾರಕ್ಕೆ ಬಹುಮತದ ಕೊರತೆ ಇದ್ದು ತನ್ನ ಅಧಿಕಾರ ವ್ಯಾಪ್ತಿಯಲ್ಲಿ “ಎಸ್ಒಜಿ (ವಿಶೇಷ ಕಾರ್ಯಾಚರಣೆ ಗುಂಪು) ಮತ್ತು ಇಲಾಖಾ ದಾಳಿಗಳನ್ನು ದುರ್ಬಳಕೆ ಮಾಡಿಕೊಂಡು ಬಿಜೆಪಿ ಶಾಸಕರಿಗೆ ಅವರು ಕಿರುಕುಳ ನೀಡುತ್ತಿದ್ದಾರೆ ಮತ್ತು ಮಾನಸಿಕ ಒತ್ತಡ ಹೇರುತ್ತಿದ್ದಾರೆ” ಎಂದು ಕುಮಾವತ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದರು.








