ಕೇವಲ 48 ಗಂಟೆಗಳಲ್ಲಿ 6 ಮಕ್ಕಳು ನಾಪತ್ತೆಯಾಗಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ನವಿ ಮುಂಬಯಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, 48 ಗಂಟೆಗಳಲ್ಲಿ ಹಲವು ಮಕ್ಕಳು ನಾಪತ್ತೆಯಾಗಿದ್ದಾರೆ. ಕಾಣೆಯಾದವರು 12 ರಿಂದ 15 ವರ್ಷದೊಳಗಿನವರು ಎನ್ನಲಾಗಿದೆ. ಮಕ್ಕಳು ನಾಪತ್ತೆಯಾಗಿದ್ದಕ್ಕೆ ಪೋಷಕರು ಆತಂಕೊಂಡಿದ್ದಾರೆ.
ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವಿ ಮುಂಬೈನ ಪನ್ವೇಲ್, ಕಾಮೋಥೆ, ಕೋಪರ್ ಖೈರ್ನೆ, ರಬಲೆ, ಕಲಂಬೋಲಿ ಮೊದಲಾದ ಪ್ರದೇಶಗಳವರಾಗಿದ್ದು, ಈ ಪ್ರದೇಶಗಳಿಂದ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿದ್ದ ಕೆಲ ಮಕ್ಕಳು ಶಾಲೆಗೆ ಹೋದ ನಂತರ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.