5 ತಿಂಗಳ ಮಗುವಿನ ಜೀವ ರಕ್ಷಣೆಗೆ ಮೋದಿ ಸರ್ಕಾರದಿಂದ 6 ಕೋಟಿ ರೂ. ತೆರಿಗೆ ವಿನಾಯಿತಿ..!
ಮುಂಬೈ: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ 5 ತಿಂಗಳ ಮುದ್ದು ಮಗುವಿನ ಜೀವ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಔಷಧಿ ಆಮದಿನ ಮೇಲಿನ ತೆರಿಗೆಯನ್ನು ಮನ್ನಾ ಮಾಡಿದೆ. ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿರುವ ಮಗು ತೀರಾ ಕಾಮತ್ ಗೆ 16 ಕೋಟಿ ರೂ. ಮೌಲ್ಯದ ಔಷಧಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರ ಮೇಲಿನ 6 ಕೋಟಿ ರೂ.ಗಳ ಜಿಎಸ್ಟಿ ಮೊತ್ತವನ್ನು ನರೇಂದ್ರ ಮೋದಿ ಅವರು ಮನ್ನಾ ಮಾಡಿದ್ದಾರೆ.
ಫಾಸ್ಟ್ಯಾಗ್ ವ್ಯಾಲೆಟ್ ನಲ್ಲಿ ಮಿನಿಮಮ್ ಬಾಲೆನ್ಸ್ ಅಗತ್ಯವಿಲ್ಲ
ಇನ್ನು ಈ ಔಷಧಿಯನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಮಗುವಿನ ಜೀನ್ ಬದಲಿ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಔಷಧಿಯನ್ನು ಕ್ರೌಡ್-ಫಂಡಿಂಗ್ ಮೂಲಕ 16 ಕೋಟಿ ರೂಪಾಯಿಯನ್ನು ಪೋಷಕರು ಸಂಗ್ರಹಿಸಿದ್ದರು. ಇದಕ್ಕಾಗಿ ಆಮದು ಸುಂಕವನ್ನು ಪಾವತಿ ಮಾಡಬೇಕಾಗಿತ್ತು. ಇದಕ್ಕಾಗಿ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮಗುವಿನ ಪೋಷಕರು ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಇದೇ ವಿಷಯವಾಗಿ 6 ಕೋಟಿ ರೂ. ಆಮದು ಸುಂಕವನ್ನು ಕಡಿತ ಮಾಡಬೇಕು ಎಂದು ಫಡ್ನವೀಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ ಅವರು ಆಮದು ಸುಂಕ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ 5 ತಿಂಗಳ ಮಗುವಿನ ಜೀವ ರಕ್ಷಣೆಗೆ ಸಹಕಾರಿಯಾಗಿದ್ದಾರೆ.
ಉತ್ತರಕಾಂಡ್ ನಲ್ಲಿ ಹಿಮಕುಸಿತ : ಸುರಂಗದಲ್ಲಿ ಕೊರೆಯುವ ಕಾರ್ಯಾಚರಣೆ..!
`ಪ್ರೇಮಿಗಳ ದಿನಕ್ಕೆ ಐದು ದಿನ ರಜೆ’ ಕೇಳಿದ ವಿದ್ಯಾರ್ಥಿ
ಉತ್ತರಕಾಂಡ್ ನಲ್ಲಿ ಹಿಮಕುಸಿತ : ಹೆಡ್ ಕಾನ್ಸ್ ಟೇಬಲ್ ಮೃತದೇಹ ಪತ್ತೆ
ಈಗ ಕೋ-ವಿನ್ ವ್ಯಾಕ್ಸಿನ್ ವಿವರಗಳು ಆರೋಗ್ಯ ಸೇತು ಆ್ಯಪ್ ನಲ್ಲಿ ಲಭ್ಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel