ಹಾಸನ : ಹಾಸನಾಂಬೆಯ ಜಾತ್ರೆ ಈ ಬಾರಿ ಭರ್ಜರಿಯಾಗಿ ನಡೆಯಿತು. ಅಲ್ಲಲ್ಲಿ, ಅಹಿತಕರ ಘಟನೆಗಳು ಕೇಳಿ ಬಂದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಯ ಆಶೀರ್ವಾದ ಪಡೆದಿದ್ದಾರೆ.
ನ.3 ರಿಂದ ಸಾರ್ವಜನಿಕ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನ. 15ರ ವರೆಗೂ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಗಿತ್ತು. ದೇಶದ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿದ್ದರು. 12 ದಿನಗಳಲ್ಲಿ 13 ಲಕ್ಷ ಜನರು ಹಾಸನಾಂಬೆ ದರ್ಶನ ಪಡೆದಿದ್ದು, 6,13,17,160 ರೂ. ಹಣ ಸಂಗ್ರಹವಾಗಿದೆ ಎನ್ನಲಾಗಿದೆ.
ಇದು ಇತಿಹಾಸದಲ್ಲಿ ಹೆಚ್ಚು ಹಣ ಸಂಗ್ರಹವಾದ ವರ್ಷ ಎನ್ನಲಾಗಿದೆ. ವಿಶೇಷ ದರ್ಶನದ 1 ಸಾವಿರ ರೂ. ಟಿಕೆಟ್‌ನಿಂದ 3 ಕೋಟಿ 09 ಲಕ್ಷದ 89 ಸಾವಿರ ರೂ., ವಿಶೇಷ ದರ್ಶನದ 300 ರೂ ಟಿಕೆಟ್‌ನಿಂದ 2 ಕೋಟಿ 35 ಲಕ್ಷದ 04 ಸಾವಿರದ 400 ರೂ., ಲಾಡು ಮಾರಾಟದಿಂದ 68,23,760 ರೂ. ಸೇರಿದಂತೆ ಒಟ್ಟು 6 ಕೋಟಿ 13 ಲಕ್ಷದ 17 ಸಾವಿರದ 160 ರೂ. ದಾಖಲೆ ಮೊತ್ತ ಸಂಗ್ರಹವಾಗಿದೆ.