6 ಟೆಸ್ಟ್ ಪಂದ್ಯ.. 6 ಮಂದಿ ನಾಯಕರು.. ಟೀಂ ಇಂಡಿಯಾದಲ್ಲಿ ಮಾತ್ರ johannesburg saakshah tv
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ಜೋಹಾನ್ಸ್ ಬರ್ಗ್ ನಲ್ಲಿ ಟೀಂ ಇಂಡಿಯಾಗೆ ವಿಶೇಷ ಸ್ಥಾನ ದೊರಕಿದೆ.
ಈ ಪಂದ್ಯದಲ್ಲಿ ನಿಯಮಿತ ನಾಯಕ ವಿರಾಟ್ ಕೊಹ್ಲಿ ಇಲ್ಲದೆ ಕಣಕ್ಕೆ ಇಳಿದ ಭಾರತ ತಂಡಕ್ಕೆ ಅಪರೂಪದ ಮನ್ನಣೆ ಸಿಕ್ಕಿದೆ.
ಈ ಮೈದಾನದಲ್ಲಿ ಆರು ಬಾರಿ ಟೆಸ್ಟ್ ಪಂದ್ಯವಾಡಿರುವ ಟೀಂ ಇಂಡಿಯಾವನ್ನು ಆರು ಬೇರೆ ಬೇರೆ ಮಂದಿ ನಾಯಕರು ಮುನ್ನಡೆಸಿದ್ದಾರೆ.
1992ರಲ್ಲಿ ಮೊಹಮ್ಮದ್ ಅಜರುದ್ದೀನ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಜೋಹಾನ್ಸ್ ಬರ್ಗ್ ನಲ್ಲಿ ಸೆಣಸಾಡಿತ್ತು.
ಇದಾದ ಬಳಿಕ 1997 ರಲ್ಲಿ ಸಚಿನ್ ತೆಂಡೂಲ್ಕರ್, 2006 ರಲ್ಲಿ ರಾಹುಲ್ ದ್ರಾವಿಡ್, 2013 ರಲ್ಲಿ ಧೋನಿ ಮತ್ತು 2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ್ದರು.
ಸದ್ಯ ನಡೆಯುತ್ತಿರುವ ಇಂಡೋ-ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಇಂಚೂರಿಯಾಗಿರುವುದರಿಂದ ರಾಹುಲ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ.
ಏತನ್ಮಧ್ಯೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ.
ಮಯಾಂಕ್ ಮತ್ತು ರಾಹುಲ್ ಜೋಡಿ ಮೊದಲ ವಿಕೆಟ್ಗೆ 36 ರನ್ ಸೇರಿಸಿತು. ಈ ವೇಳೆ ದಾಳಿಗಿಳಿದ ಜನ್ಸೆನ್, 26 ರನ್ಗಳಿಸಿದ ಅಗರ್ವಾಲ್ ವಿಕೆಟ್ ಪಡೆದರು.
ಒಲಿವಿಯರ್ ಪೂಜಾರಾ (3), ಅಜಿಂಕ್ಯಾ ರಹಾನೆ (0) ವಿಕೆಟ್ ಅನ್ನು ಬೆನ್ನು ಬೆನ್ನಿಗೆ ಪಡೆದರು. ಹನುಮ ವಿಹಾರಿ ಆಟವೂ 20 ರನ್ಗೆ ಅಂತ್ಯ ಕಂಡಿತ್ತು.
ಈ ನಡುವೆ ನಾಯಕ ರಾಹುಲ್ ಅರ್ಧಶತಕದ ಗಡಿ ದಾಟಿದ್ದರು. ಆದರೆ ಜನ್ಸೆನ್ 50 ರನ್ಗಳಿಸಿದ್ದ ರಾಹುಲ್ ವಿಕೆಟ್ ಪಡೆದರು. ರಿಷಬ್ ಪಂತ್ (17), ಶಾರ್ದೂಲ್ ಥಾಕೂರ್ (0) ಮತ್ತು ಮೊಹಮ್ಮದ್ ಶಮಿ (9) ರನ್ಗಳಿಸಿ ಔಟಾದರು.
ಇದೆಲ್ಲದರ ಮಧ್ಯೆ ಅಶ್ವಿನ್ 50 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 46 ರನ್ಗಳಿಸಿ ಮಿಂಚಿದರು. ಟೀಮ್ ಇಂಡಿಯಾ 202 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಜನ್ಸೆನ್ 4 ವಿಕೆಟ್ ಪಡೆದರೆ, ರಬಾಡಾ ಮತ್ತು ಒಲಿವಿಯರ್ ತಲಾ 3 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ಮಾರ್ಕ್ ರಾಂ ವಿಕೆಟ್ ಕಳೆದುಕೊಂಡು 35 ರನ್ಗಳಿಸಿದೆ. 11 ರನ್ಗಳಿಸಿದ ಡೀನ್ ಎಲ್ಗರ್ ಮತ್ತು 14 ರನ್ಗಳಿಸಿರು ಕಿಗಾನ್ ಪೀಟರ್ಸನ್ 2ನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.










