ಬೆಂಗಳೂರು: ಶರಣಾಗತರಾದ 6 ಜನ ನಕ್ಸಲರಿಗೆ (Naxals) ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ಕೋರ್ಟ್ (NIA Court) ಆದೇಶ ಹೊರಡಿಸಿದೆ.
ಮಂಗಳವಾರವಷ್ಟೇ ನಕ್ಸಲರು ಸಿಎಂ ಮುಂದೆ ನಕ್ಸಲರ ಶರಣಾಗಿದ್ದರು. ಮಹಿಳಾ ಸಾಂತ್ವನ ಕೇಂದ್ರದಿಂದ ಶರಣಾದ ನಕ್ಸಲರನ್ನು ಮಡಿವಾಳ ಎಫ್‌ಎಸ್‌ಎಲ್‌ಗೆ ಗುರುವಾರ ಪೊಲೀಸರು ಕರೆತಂದರು. ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಾಲ್ವರು ಮಹಿಳೆಯರು ಮತ್ತು ಮತ್ತಿಬ್ಬರು ಪುರುಷರನ್ನು ಮಡಿವಾಳದ ಎಫ್‌ಎಸ್‌ಎಲ್ ಸ್ಪೆಷಲ್ ಸೆಲ್‌ನಲ್ಲಿ ಇರಿಸಲಾಗಿತ್ತು. ಎಲ್ಲರನ್ನೂ ಅಲ್ಲಿಂದ ಮೆಡಿಕಲ್ ಪರೀಕ್ಷೆಗೆ ಕರೆದೊಯ್ಯಲಾಗಿತ್ತು.
ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ ಟಿ.ಎನ್, ಜಿಶಾ ಎಲ್ಲರನ್ನೂ ಎನ್‌ಐಎ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು.
ಕೊನೆಗೆ ನಕ್ಸಲರನ್ನು ಕೋರ್ಟ್‌ಗೆ ಚಿಕ್ಕಮಗಳೂರು ಪೊಲೀಸರು ಹಾಜರುಪಡಿಸಿದರು. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ಕೋರ್ಟ್‌ನ ನ್ಯಾಯಾಧೀಶ ಗಂಗಾಧರ್ ಎದುರು ಎಲ್ಲರನ್ನೂ ಹಾಜರುಪಡಿಸಲಾಯಿತು. ಆನಂತರ ಕೋರ್ಟ್ ಎಲ್ಲರಿಗೂ ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತು.
“ಮುಸಲ್ಮಾನರಿಗೆ ಏನಾದರೂ ಆಗಿದ್ದರೆ ಸಿದ್ದರಾಮಯ್ಯನವರು ಪಂಚೆ ಎತ್ತಿಕೊಂಡು ಬರುತ್ತಿದ್ದರು” ಆರ್.ಅಶೋಕ್ ಟೀಕೆ
ಹಸುವಿನ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರದ ತುಷ್ಟೀಕರಣವೇ ಕಾರಣ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ವಿಜಯೇಂದ್ರ ಅವರು ಖಂಡನೆ...