60-Day Special Leave | ಹೆರಿಗೆ ವೇಳೆ ಮಗು ಸಾವನ್ನಪ್ಪಿದ್ರೆ 60 ದಿನ ವಿಶೇಷ ರಜೆ
ಸರ್ಕಾರಿ ಮಹಿಳಾ ನೌಕರರಿಗೆ ವಿಶೇಷ ರಜೆ
ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ
ಭಾವನಾತ್ಮಕ ಆಘಾತ ಗಮನದಲ್ಲಿಟ್ಟುಕೊಂಡು ನಿರ್ಧಾರ
ನವದೆಹಲಿ : ಹೆರಿಗೆ ಸಮಯದಲ್ಲಿ ಮಗು ಮರಣ ಹೊಂದಿದ್ರೆ ಕೇಂದ್ರ ಸರ್ಕಾರದ ಮಹಿಳಾ ನೌಕರರಿಗೆ 60 ದಿನಗಳ ಕಾಲ ವಿಶೇಷ ಹೆರಿಗೆ ರಜೆ ನೀಡಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
ಇಲಾಖೆಗೆ ಮಾತೃತ್ವ ರಜೆ ಕುರಿತು ಹಲವು ಪ್ರಶ್ನೆಗಳು ಬಂದಿದ್ದವು. ಇವುಗಳನ್ನು ಪರಿಶೀಲಿಸಿದ ಇಲಾಖೆ ಮಹಿಳಾ ನೌಕರಿಗೆ ಅನ್ವಯವಾಗುವಂತೆ ಮಗುವಿನ ಮರಣದಿಂದಾಗುವ ಸಂಭಾವ್ಯ ಭಾವನಾತ್ಮಕ ಆಘಾತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
ವಿಶೇಷ ಹೆರಿಗೆ ರಜೆಯ ಪ್ರಯೋಜನವು ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಮಹಿಳಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ದೊರಕುತ್ತದೆ.
ಇದಲ್ಲದೆ ಅಧಿಕೃತ ಆಸ್ಪತ್ರೆಯಲ್ಲಿ ಮಗುವಿನ ಹೆರಿಗೆಗೆ ಮಾತ್ರ ರಜೆ ಸ್ವೀಕಾರಾರ್ಹವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ.