ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟ : ಒಂದೇ ದಿನ 6,034 ಕೇಸ್ ದೃಢ NEW CORONA
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟಗೊಂಡಿದೆ. ಇದೇ ಮೊದಲ ಬಾರಿಗೆ ನಗರದಲ್ಲಿ ಒಂದೇ ದಿನದಲ್ಲಿ ಆರು ಸಾವಿರ ಕೊರೊನಾ ಪ್ರಕರಣಗಳು ದೃಢವಾಗಿವೆ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ನಗರದಲ್ಲಿ 6,034 ಪ್ರಕರಣಗಳು ದೃಢಪಟ್ಟಿವೆ.
ಈ ಪೈಕಿ ನಗರದ ಹೊರವಲಯದಲ್ಲಿ 700, ಪೂರ್ವ ವಲಯದಲ್ಲಿ 853, ಮಹದೇವಪುರ 688, ಬೊಮ್ಮನಹಳ್ಳಿ 563, ದಾಸರಹಳ್ಳಿ 185, ಆರ್ ಆರ್ ನಗರ 485,
ದಕ್ಷಿಣದಲ್ಲಿ 916, ಪಶ್ಚಿಮದಲ್ಲಿ 856, ಯಲಹಂಕ 383, ಪೂರ್ವ ತಾಲೂಕು 48, ದಕ್ಷಿಣ ತಾಲೂಕು 110, ಉತ್ತರ ತಾಲೂಕಿನಲ್ಲಿ 92 ಪ್ರಕರಣ ಪತ್ತೆಯಾಗಿದೆ.
ಇನ್ನು ನಗರದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆ ಸರ್ಕಾರ ನೈಟ್ ಕಫ್ರ್ಯೂ ಜಾರಿ ಮಾಡಿದೆ.+