KRS ಡ್ಯಾಂನಿಂದ 62 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಮಂಡ್ಯ : KRS ಅಣೆಕಟ್ಟೆ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಡ್ಯಾಂನಿಂದ 62 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ನಿನ್ನೆ 33 ಸಾವಿರ ಕ್ಯೂಸೆಕ್ ಹೊರ ಹರಿವಿತ್ತು. ಇಂದು ಬೆಳಿಗ್ಗೆ 62 ಸಾವಿರ ಕ್ಯೂಸೆಕ್ ಏರಿಕೆ ಮಾಡಲಾಗಿದೆ.
ನದಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಸದ್ಯ ಡ್ಯಾಂಗೆ 62,635 ಕ್ಯೂಸೆಕ್ ನೀರು ಹರಿದು ಬರ್ತಿದೆ. 62,043 ಕ್ಯೂಸೆಕ್ ನೀರನ್ನ ನದಿಗೆ ಹೊರ ಹರಿಸಲಾಗುತ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತಷ್ಟು ಮಳೆ ಹೆಚ್ಚಾದ್ರೆ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಳಿದೆ.
ಕೆಆರ್ ಎಸ್ ಡ್ಯಾಂ ಸಂಪೂರ್ಣ ಭರ್ತಿಗೆ ಕ್ಷಣಗಣನೆ ಶುರುವಾಗಿದ್ದು, ಇನ್ನು 1 ಟಿಎಂಸಿ ನೀರು ತುಂಬಿದ್ರೆ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಲಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಪರಿಣಾಮ ಕೆಆರ್ ಎಸ್ ಡ್ಯಾಂ ಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಕೆಆರ್ಎಸ್ ಡ್ಯಾಂನಲ್ಲಿ 124.80 ಅಡಿ ಸಂಗ್ರಹ ಸಾಮರ್ಥ್ಯವಿದ್ದು, ಈಗಾಗಲೇ ಡ್ಯಾಂ 124.00 ಅಡಿ ಭರ್ತಿಯಾಗಿದೆ.
ಡ್ಯಾಂಗೆ 65,635 ಕ್ಯೂಸೆಕ್ ಒಳಹರಿವು ಮತ್ತು 46,518 ಕ್ಯೂಸೆಕ್ ನೀರು ಹೊರಹರಿವು ಇದೆ.
ಡ್ಯಾಂನಲ್ಲಿ 49.452 ಟಿಎಂಸಿ ಸಾಂದ್ರತೆ ಇದೆ. ಸದ್ಯ 48.336 ಟಿಎಂಸಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.