ದೆಹಲಿ: ದೇಶದಲ್ಲಿ ಲೋಕಸಭೆಗೆ ಇಂದು 6ನೇ ಹಂತದಲ್ಲಿ ಮತದಾನ ನಡೆದಿದೆ. ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ (UT) 58 ಸ್ಥಾನಗಳಿಗೆ ಮತದಾನ ನಡೆದಿದೆ.
ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಏಕಕಾಲದಲ್ಲಿ ನಡೆಯುತ್ತಿವೆ. ಸಂಜೆ 7.45ರವರೆಗೆ ಶೇ.59.06ರಷ್ಟು ಮತದಾನವಾಗಿದೆ. 6ನೇ ಹಂತದ ಮತದಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಶೇ 52 ಕ್ಕಿಂತ ಹೆಚ್ಚು ಮತದಾನವಾಗಿದೆ. ದೆಹಲಿಯಲ್ಲಿ ಶೇ 34.4 ಅಂದರೆ ಕಡಿಮೆ ಮತದಾನವಾಗಿದೆ. 6ನೇ ಹಂತದ ಮುಕ್ತಾಯದ ವೇಳೆ ದೇಶದ 543 ಲೋಕಸಭಾ ಸ್ಥಾನಗಳ ಪೈಕಿ 486 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಂತಾಗಿದೆ.
6ನೇ ಹಂತದಲ್ಲಿ ಬಿಹಾರ ಮತ್ತು ಬಂಗಾಳದಲ್ಲಿ ತಲಾ ಎಂಟು ಸ್ಥಾನಗಳು, ದೆಹಲಿಯಲ್ಲಿ ಏಳು, ಹರಿಯಾಣದಲ್ಲಿ 10, ಜಾರ್ಖಂಡ್‌ನಲ್ಲಿ ನಾಲ್ಕು, ಉತ್ತರ ಪ್ರದೇಶದಲ್ಲಿ 14 ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅನಂತನಾಗ್-ರಜೌರಿಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕಾಶ್ಮೀರ ಕಣಿವೆಯ ಎಲ್ಲ ಮೂರು ಲೋಕಸಭಾ ಕ್ಷೇತ್ರಗಳಿಗೆ ಉತ್ತಮ ಮತದಾನವಾಗಿದೆ. ಬಿಹಾರ ಶೇ 53.42, ಹರಿಯಾಣ ಶೇ 58.37, ಜಮ್ಮು ಮತ್ತು ಕಾಶ್ಮೀರ ಶೇ52.28, ಜಾರ್ಖಂಡ್ ಶೇ62.87, ದೆಹಲಿ ಶೇ54.52, ಒಡಿಶಾ ಶೇ 60.07, ಉತ್ತರ ಪ್ರದೇಶ:ಶೇ 54.03, ಪಶ್ಚಿಮ ಬಂಗಾಳ ಶೇ 78.19ರಷ್ಟು ಮತದಾನ ನಡೆದಿದೆ.