ಮುಂಬಯಿ: ಮಹಾರಾಷ್ಟ್ರದಲ್ಲಿ ಶಾಸಕರು ಮಹಡಿಯಿಂದ ಹಾರಿರುವ ಘಟನೆ ನಡೆದಿದೆ.
ಉಪಸಭಾಪತಿ (Maharashtra Deputy Speaker) ಜೊತೆ 7 ಜನ ಶಾಸಕರು ಸಚಿವಾಲಯ (Secretariat)ದ ಮೂರನೇ ಮಹಡಿಯಿಂದ ಹಾರಿದ್ದಾರೆ.
ಧನಗರ್ ಸಮುದಾಯಕ್ಕೆ (Dhangar Community) ಎಸ್ಟಿ ಮೀಸಲಾತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿ ವಿರೋಧಿಸಿ ಆಡಳಿತ ಮತ್ತು ಪ್ರತಿಪಕ್ಷದ ಸುಮಾರು ಏಳೆಂಟು ಜನ ಶಾಸಕರು ಮೂರನೇ ಮಹಡಿಯಿಂದ ಜಿಗಿದು ಪ್ರತಿಭಟಿಸಿದ್ದಾರೆ. ಈ ನಾಯಕರು ನೇರವಾಗಿ ಅಳವಡಿಸಲಾಗಿದ್ದ ಬಲೆಗೆ ಬಿದ್ದ ಕಾರಣ ಪಾರಾಗಿದ್ದಾರೆ.
ಮಂತ್ರಾಲಯದಿಂದ ಕೆಳಗಡೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ 2018ರಲ್ಲಿ ಇಲ್ಲಿ ದೊಡ್ಡ ನೆಟ್ ಅಳವಡಿಸಲಾಗಿತ್ತು. ಹೀಗಾಗಿ ಮೇಲಿನಿಂದ ಬಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಆನಂತರ ಪೊಲೀಸರು ರಕ್ಷಿಸಿದ್ದಾರೆ.
ಮೇಲಿನಿಂದ ಜಿಗಿದ ಡೆಪ್ಯೂಟಿ ಸ್ಪೀಕರ್ ಜಿರ್ವಾಲ್ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಅಜಿತ್ ಪವಾರ್ ಬಣದ ಸದಸ್ಯರು. ಅವರು ಸಿಎಂ ಹಾಗೂ ಡಿಸಿಎಂ ಭೇಟಿ ಮಾಡಲು ಗುರುವಾರದಿಂದ ಯತ್ನಿಸುತ್ತಿದ್ದರು.