ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರತಿದಿನವೂ ಲಕ್ಷಾಂತರ ಭಕ್ತರು ಬರುತ್ತಾರೆ, ದೇಶದ ನಾನಾ ಮೂಲೆಗಳಿಂದ ಪ್ರಪಂಚದ ಬೇರೆ ಬೇರೆ ದೇಶಗಳಿಂದ ಜನ ಬರುತ್ತಾರೆ. ಇನ್ನು ವೈಕುಂಠ ಏಕಾದಶಿಯಂದು ಭಕ್ತರ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ.
ಈ ಹಿನ್ನೆಲೆಯಲ್ಲಿ ಟಿಟಿಡಿ ಡಿಸೆಂಬರ್ 23ರಿಂದ ವೈಕುಂಠ ದ್ವಾರ ದರ್ಶನಕ್ಕೆ ಆನ್‌ಲೈನ್ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಿದೆ.
ವೈಕುಂಠ ಏಕಾದಶಿ 2025
2025ರ ಜನವರಿ 10ರಿಂದ 19ರವರೆಗೆ ನಡೆಯಲಿರುವ ಈ ವರ್ಷದ ವೈಕುಂಠ ಏಕಾದಶಿ ಇನ್ನಷ್ಟು ವಿಜೃಂಭಣೆಯಿಂದ ಜರುಗಲಿದೆ. ತಿರುಪತಿಯ ತಿಮ್ಮಪ್ಪ ದೇವಸ್ಥಾನದ ಗರ್ಭಗುಡಿಯನ್ನು ಸುತ್ತುವರೆದಿರುವ ಒಳಗಿನ ಮಾರ್ಗವನ್ನು ವೈಕುಂಠ ದ್ವಾರ ಎಂದು ಕರೆಯಲಾಗುತ್ತದೆ.
ವೈಕುಂಠ ದ್ವಾರ ಜನವರಿ 10ರಿಂದ 19ರವರೆಗೆ ತೆರೆದಿರುತ್ತದೆ. ವೈಕುಂಠ ದ್ವಾರ ದರ್ಶನ ಪಡೆಯುವುದು ಅತ್ಯಂತ ಪುಣ್ಯದ ಕೆಲಸ ಎನ್ನುವುದು ಭಕ್ತರ ನಂಬಿಕೆಯಾಗಿದೆ. ವಿವಿಐಪಿಗಳಿಗೆ ಜನವರಿ 10ರಂದು ಬೆಳಿಗ್ಗೆ 4.45ಕ್ಕೆ ದರ್ಶನ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ 9 ರಿಂದ 11ರವರೆಗೆ ಚಿನ್ನದ ರಥದಲ್ಲಿ ತಿಮ್ಮಪ್ಪನ ಮೆರವಣಿಗೆ ಆಗಲಿದೆ. ದ್ವಾದಶಿಯ ದಿನ ಅಂದರೆ ಜನವರಿ 11ರಂದು ಬೆಳಿಗ್ಗೆ 5.30 ರಿಂದ 6.30ರವರೆಗೆ ದೇವಸ್ಥಾನದ ಹೊಂಡದಲ್ಲಿ ಚಕ್ರಸ್ನಾನ ಇರುತ್ತದೆ.
ಆನ್‌ಲೈನ್ ಟಿಕೆಟ್ ಬುಕಿಂಗ್
ಡಿಸೆಂಬರ್ 23ರಂದು ಬೆಳಿಗ್ಗೆ 11ಗಂಟೆಗೆ ಆನ್‌ಲೈನ್ ಟಿಕೆಟ್ ಬುಕಿಂಗ್ ಆರಂಭವಾಗುತ್ತದೆ.
300 ರೂಪಾಯಿ ಟಿಕೆಟ್ ಗೆ ವೈಕುಂಠ ದ್ವಾರ ದರ್ಶನಕ್ಕೆ ವಿಶೇಷ ಪ್ರವೇಶ ಇರುತ್ತದೆ.
ಸ್ಲಾಟೆಡ್ ಸರ್ವ ದರ್ಶನ ಟೋಕನ್‌ಗಳು
ತಿರುಮಲದಲ್ಲಿರುವ ಕೌಸ್ತುಭಮ್ ಗೆಸ್ಟ್ ಹೌಸ್ ನಲ್ಲಿ ಹಾಗು ತಿರುಪತಿಯಲ್ಲಿ ನಿರ್ಮಿಸಿರುವ 8 ಕೌಂಟರ್ ಗಳಲ್ಲಿ ಸಿಗುತ್ತವೆ.
ಅನ್ನದಾನ: ಭಕ್ತರ ಅನುಕೂಲಕ್ಕಾಗಿ ವೈಕುಂಠ ದರ್ಶನದ ವೇಳೆ ಪ್ರತಿದಿನವೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಅನ್ನದಾನ ಇರುತ್ತದೆ.
ಪ್ರಸಾದ: ಪ್ರಸಾದ ಕೊಳ್ಳುವವರಿಗಾಗಿ ಈ ಸಲ ಹೆಚ್ಚುವರಿಯಾಗಿ 3.5 ಲಕ್ಷ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ.








