ನವದೆಹಲಿ: ಸದ್ಯ ದೇಶದಲ್ಲಿ ಕೊರೊನಾಸುರನ ರೌದ್ರನರ್ತನ ಜೋರಾಗಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2000 ರ ಗಡಿ ದಾಟಿದ್ದು ಒಟ್ಟು 50ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಮಹಾಮಾರಿಯ ಹೊಡೆತಕ್ಕೆ ಭಾರತ ತತ್ತರಿಸಿ ಹೋಗುತ್ತಿದ್ದು, ಭಾರತದ ನೆರವಿಗೆ ವಿಶ್ವಬ್ಯಾಂಕ್ ಮುಂದಾಗಿದೆ. ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಒಟ್ಟು ಒಂದು ಬಿಲಿಯನ್ ಡಾಲರ್ ಅಂದ್ರೆ 7634 ಕೋಟಿ ರೂಪಾಯಿ ನೀಡಲು ವಿಶ್ವಬ್ಯಾಂಕ್ ಮುಂದಾಗಿದೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ವೈದ್ಯಕೀಯ ಸಲಕರಣೆ, ಸ್ಕ್ರೀನಿಂಗ್, ಸೋಂಕಿತರ ಪತ್ತೆ ಹಾಗೂ ಪ್ರಯೋಗಾಲಯಗಳ ನಿರ್ಮಾಣ ಸೇರಿದಂತೆ ಹಲವು ಮೂಲ ಸೌಕರ್ಯಗಳಿಗಾಗಿ ವಿಶ್ವಬ್ಯಾಂಕ್ ಸಹಾಯಕ್ಕೆ ಮುಂದಾಗಿದೆ.
ಮುಖಾಮುಖಿಯಾದರೂ ಪ್ರಧಾನಿ ಮೋದಿ ನೇರವಾಗಿ ನೋಡದೆ ಕಣ್ಣಿನ ಸಂಪರ್ಕ ತಪ್ಪಿಸಿ ಬೇರೆಡೆ ನೋಡಲು ಯತ್ನಿಸುತ್ತಿದ್ದರು: ಮೋದಿ ಮೂರನೇ ಬಾರಿ ಪ್ರಧಾನಿಯಾದರೂ ನಮ್ಮ ನಡುವೆ ನೈಜ ಒಡನಾಟ ಬೆಳೆದಿಲ್ಲ ಎಂದ ಸೋನಿಯಾ-ಬಿಲಾಂಗಿಂಗ್ ಕೃತಿಯಲ್ಲಿ ಸ್ವಾರಸ್ಯಕರ ಸಂಗತಿ ಬಿಚ್ಚಿಟ್ಟ ಕೈ ನಾಯಕಿ!
ನವದೆಹಲಿ: ಭಾರತೀಯ ರಾಜಕಾರಣದ ಇಬ್ಬರು ಅತ್ಯಂತ ಪ್ರಭಾವಿ ವ್ಯಕ್ತಿಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಡುವಿನ ವೈಯಕ್ತಿಕ...








