12ನೇ ತರಗತಿ ಪರೀಕ್ಷೆಗೆ ನೊಂದಾಯಿಸಿಕೊಂಡ 77ರ ವೃದ್ಧ…

1 min read

12ನೇ ತರಗತಿ ಪರೀಕ್ಷೆಗೆ ನೊಂದಾಯಿಸಿಕೊಂಡ 77ರ ವೃದ್ಧ.

ಕಲಿಯುವ ಉತ್ಸಾಹವಿದ್ದರೆ, ಹಠವಿದ್ದರೆ   ವಯಸ್ಸು ಅಡ್ಡಿಯಾಗದು ಎನ್ನುವುದನ್ನ ಈ ಸ್ಟೋರಿ ಹೇಳಿಕೊಡಲಿದೆ.  77 ವರ್ಷದ ವೃದ್ದರೊಬ್ಬರು  ಬರೋಬ್ಬರಿ 56 ಪ್ರಯುತ್ನಗಳ ನಂತರ 10ನೇ ತರಗತಿ ಪಾಸ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಇದೀಗ 12 ನೇ ತರಗತಿ ಪರೀಕ್ಷೆಗಾಗಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ರಾಜಸ್ಥಾನದ ಹುಕುಮ್​ದಾಸ್​ ವೈಷ್ಣವ್​ ಎನ್ನುವ ಮಾಜಿ ಸರ್ಕಾರಿ ನೌಕರ ಇಂಥಹ ಸಾಹಸಕ್ಕೆ ಕೈ ಹಾಕಿ ಎಲ್ಲರನ್ನೂ ಹುಬ್ಬೇರಿಸುಂತೆ ಮಾಡಿದ್ದಾರೆ.  1945ರಲ್ಲಿ ಸರ್ದಾರ್ ಗಡ್ ಗ್ರಾಮದಲ್ಲಿ ಜನಿಸಿದ್ದ  ಹುಕುಮ್ ದಾಸ್ 1962 ರಲ್ಲಿ ಮೊದಲ ಭಾರಿಗೆ 10ನೇ ತರಗಿ ಪರೀಕ್ಷೆಗೆ ಹಾಜರಾಗಿದ್ದರು.  ಆದರೆ ಉತ್ತೀರ್ಣರಾಗಿರಲಿಲ್ಲ, ಎರಡನೇ ಭಾರಿಯು ಪರೀಕ್ಷೆ ಬರೆದಾಗ ನಪಾಸಾಗಿದ್ದರು. ಈ ಕಾರಣ ಸ್ನೇಹಿತರು ನಿನ್ನಿಂದ  10ನೇ ತರಗತಿ ಪಾಸ್ ಮಾಡಲು ಸಾಧ್ಯವಿಲ್ಲ  ಎಂದು ಸ್ನೇಹಿತರು ರೇಗಿಸಿದ್ದರು ಇದನ್ನ ಸವಲಾಗಿ ತೆಗೆದುಕೊಂಡು 55 ನೇ ಭಾರಿಯ ನಂತರ 56 ನೇ ಭಾರಿ 10 ನೇ ತರಗತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದ್ದಾರೆ.  ಹುಕುಮ್​ದಾಸ್ ಸರ್ಕಾರಿ ನೌಕರರೂ ಹೌದು  ನೀರಿನ ಇಲಾಖೆಯಲ್ಲಿ 4 ಹಂತದ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಷ್ಟಕ್ಕೆ ತಮ್ಮ ಸಾಹಸ ನಿಲ್ಲದೆ ಈಗ 2021 – 2022 ನೆ ಸಾಲಿನ 12 ನೇ ತರಗತಿ ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.  ತಮ್ಮೂರಿನ ಶಾಲೆಯಲ್ಲಿ ಪಿಯುಸಿ ಕಟ್ಟಿದ್ದಾರೆ. ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಹುಕುಮ್ ದಾಸ್ ಅವರ ಮೊಮ್ಮಗ ಸಹ ಇದೇ ಶಾಲೆಯಲ್ಲಿ ಪಿಯುಸಿ ಪರೀಕ್ಷೆ ತೆಗೆದುಕೊಂಡಿದ್ದಾನೆ.

ಅದೇನೆ ಇರಲಿ ಓದುವುದಕ್ಕೆ ವಯಸ್ಸು ಅಡ್ಡಿ ಬಾರದು ಎನ್ನುವುದನ್ನ ತೋರಿಸಿ ಕೊಟ್ಟಿರುವ ಇವರಿಗೆ ಎಲ್ಲರೂ ಒಮ್ಮೆ ಉಘೇ ಎನ್ನಲೇ ಬೇಕು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd