ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಟ್ರೇಲರ್ ರಿಲೀಸ್ – ಎಮೋಷನಲ್ ಕಥೆಗೆ ಅಭಿಮಾನಿಗಳು ಫಿದಾ
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಿದ್ದಾರೆ, ಅದು ದೊಡ್ಡದಾಗಿ ಸೌಂಡ್ ಮಾಡುವುದಂತೂ ಗ್ಯಾರಂಟಿ, ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ನೋಡುಗರ ಮನಸ್ಸನ್ನ ಆವರಿಸಿಬಿಟ್ಟಿದೆ.
ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನ ಒಳಗೊಂಡಿರು ಈ ಚಿತ್ರಕ್ಕೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಸಖತ್ ಎಮೋಷನಲ್ ಆಗಿದೆ ಎನ್ನವುದನ್ನ ಟ್ರೇಲರ್ ನೋಡಿದ ಕೂಡಲೆ ತಿಳಿದುಬರಲಿದೆ. ರಕ್ಷಿತ್ ಶೆಟ್ಟಿ ಜೊತೆ ಸಂಗೀತ ಶೃಂಗೇರಿ, ರಾಜ್ ಬಿ ಶೆಟ್ಟಿ , ದಾನೀಶ್ ಸೇಠ್ ಮೊದಲಾದವರು ನಟಿಸಿದ್ದಾರೆ.
777 ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾ, ಕನ್ನಡ ಹಿಂದಿ ತೆಲುಗು ತಮಿಳು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲಾಗುತ್ತಿದೆ ಹಾಗಾಗಿ ಪರಭಾಷೆಯ ಹಲವು ಹೀರೋ ಹಿರೋಹಿನ್ ಗಳು ಈ ಚಿತ್ರದ ಟ್ರೇಲರ್ ನ್ನ ಶೇರ್ ಮಾಡಿ ಸಪೋರ್ಟ್ ಮಾಡಿದ್ದಾರೆ.
ತಮಿಳಿನ ಖ್ಯಾತ ನಟ ಧನುಷ್, ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸೇರಿ ಹಲವು ಭಾಷೆಯ ಘಟಾನುಘಟಿಗಳು ಈ ಚಿತ್ರದ ಟ್ರೆಲರ್ ಹಂಚಿಕೊಂಡು ಶುಭ ಕೋರಿದ್ದಾರೆ. ಸಿನಿಮಾ ಜೂನ್ 10 ರಂದು ಪ್ರಪಂಚದಾದ್ಯಂತ ತೆರೆಕಾಣಲಿದೆ.