ಮೋದಿಗೆ 80% ಭಾರತೀಯರ ಬೆಂಬಲ: ಅಮೆರಿಕ ಸಮೀಕ್ಷೆ
80% Indians support Modi: US survey
ನಮಸ್ಕಾರ ಗೆಳೆಯರೆ,
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರ್ಯವೈಖರಿ, ವ್ಯಕ್ತಿತ್ವ ಮತ್ತು ಮಾತುಗಳಿಂದ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ. ಪ್ರಧಾನಿ ಮೋದಿಯವರಿಗೆ ಜಗತ್ತಿನಾದ್ಯಂತ ಫಾಲವರ್ಸ್ ಇದ್ದು ವಿಶ್ವ ನಾಯಕ ಎಂದು ಅವರ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.
ಈ ನಡುವೆಯೇ ನರೇಂದ್ರ ಮೋದಿ ಅವರು ಮತ್ತೊಮ್ಮೆ ಜನಪ್ರಿಯ ನಾಯಕ ಎನ್ನುವುದು ಸಾಬೀತಾಗಿದೆ. 2024ರ ಲೋಕಸಭಾ ಚುನಾವಣೆಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಯುತ್ತಿರುವಾಗಲೇ ಈ ಅಂಶ ಬಹಿರಂಗವಾಗಿದೆ. ಅಮೆರಿಕದ ಪಕ್ಷಾತೀಯ ಸರ್ವೆ ಸಂಸ್ಥೆಯಾದ ಫ್ಯೂ ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 80ರಷ್ಟು ಭಾರತೀಯರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದು ಸರ್ವೆ ಹೇಳಿದೆ.
2014ರಿಂದ ಅಧಿಕಾರದಲ್ಲಿರುವ ಮೋದಿ, 2 ಬಾರಿ ಪ್ರಧಾನಿಯಾಗಿದ್ದಾರೆ. ಇದೀಗ ಮೂರನೇ ಬಾರಿಯೂ ಮೋದಿಯವರೇ ಪ್ರಧಾನಿಯಾಗಬೇಕು ಅಂತ ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಈ ವೇಳೆ ಫ್ಯೂ ಸಂಸ್ಥೆ ನಡೆಸಿದ ಸರ್ವೆ ರಿಪೋರ್ಟ್ ಬಿಜೆಪಿಗೆ ಬೂಸ್ಟ್ ಸಿಕ್ಕಂತಾಗಿದೆ. ಭಾರತೀಯರು ತಮ್ಮ ಪ್ರಧಾನಿಯನ್ನು ಹೇಗೆ ನೋಡುತ್ತಾರೆ ಎಂಬುದನ್ನೂ ಸಮೀಕ್ಷೆ ವಿಶ್ಲೇಷಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಎಂಬ ನಾಲ್ಕು ನಾಯಕರನ್ನು ಸಮೀಕ್ಷೆಯು ಗಣನೆಗೆ ತೆಗೆದುಕೊಂಡಿದೆ.
ಇವರಿಗೆ 10 ಭಾರತೀಯರಲ್ಲಿ 8 ಮಂದಿ ಮೋದಿಯವರ ನಾಯಕತ್ವಕ್ಕೆ ಬಹುಪರಾಕ್ ಎಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ ಪ್ರಭಾವವು ಬಲವಾಗಿ ಬೆಳೆಯುತ್ತಿದೆ ಎಂದು ಹತ್ತರಲ್ಲಿ ಏಳು ಭಾರತೀಯರು ಹೇಳಿದ್ದಾರೆ. ಆದರೆ ಐದನೇ ಒಂದು ಭಾಗದಷ್ಟು ಕಡಿಮೆ ಜನ ಭಾರತದ ಪ್ರಭಾವ ದುರ್ಬಲವಾಗುತ್ತಿದೆ ಎಂದು ಭಾವಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು 16 ಪ್ರತಿಶತ ಜನರು ಯಾವುದೇ ಅಭಿಪ್ರಾಯವನ್ನು ಹಂಚಿಕೊಳ್ಳಲಿಲ್ಲ.
ಮಾರ್ಚ್ 25 ಮತ್ತು ಮೇ 11 ರ ನಡುವೆ 2,611 ಭಾರತೀಯರೊಂದಿಗೆ ವಿಶ್ವದ 24 ದೇಶಗಳ 30816 ಜನರನ್ನು ಸಂದರ್ಶಿಸಿ ಅಮೆರಿಕ ಸಂಸ್ಥೆ ಸಮೀಕ್ಷಾ ವರದಿ ತಯಾರಿ ಮಾಡಿದೆ.
ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಕೊರಿಯಾ, ಕೀನ್ಯಾ ಮತ್ತು ನೈಜೀರಿಯಾದಂತಹ ದೇಶಗಳು ಭಾರತವನ್ನು ಹೆಚ್ಚು ಧನಾತ್ಮಕವಾಗಿ ನೋಡುತ್ತವೆ, ಆದರೆ ಇಸ್ರೇಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
“ಭಾರತದ ದೃಷ್ಟಿಕೋನಗಳು ಇಸ್ರೇಲ್‌ನಲ್ಲಿ ಹೆಚ್ಚು ಸಕಾರಾತ್ಮಕವಾಗಿವೆ, ಅಲ್ಲಿನ ಶೇ 71 ರಷ್ಟು ಜನರು ಭಾರತದ ಬಗ್ಗೆ ಅನುಕೂಲಕರ ದೃಷ್ಟಿಕೋನವನ್ನು ಹೊಂದಿದ್ದಾರೆ. ಶೇ
51% ಅಮೆರಿಕನ್ನರು, 55 ರಷ್ಟು ಜಪಾನಿಯರು ಮತ್ತು 52 ರಷ್ಟು ಆಸ್ಟ್ರೇಲಿಯನ್ನರು ಭಾರತವನ್ನು ಧನಾತ್ಮಕವಾಗಿ ಪರಿಗಣಿಸುತ್ತಾರೆ. ಇವರು ಭಾರತದ ಜೊತೆಗೆ QUAD ನ ಸದಸ್ಯರಾಗಿದ್ದಾರೆ. ಆಫ್ರಿಕಾ ಹಾಗೂ ಕೀನ್ಯಾದಲ್ಲಿ 64% ಮತ್ತು ನೈಜೀರಿಯಾದಲ್ಲಿ 60% ರಷ್ಟು ಜನರು ಭಾರತವನ್ನು ಧನಾತ್ಮಕವಾಗಿ ಪರಗಣಿಸುತ್ತಾರೆ.
ಭಾರತದಲ್ಲಿ, 2019 ರಲ್ಲಿ ದೇಶವನ್ನು ಕೊನೆಯದಾಗಿ ಸಮೀಕ್ಷೆ ಮಾಡಿದಾಗಿನಿಂದ ಚೀನಾದ ನಕಾರಾತ್ಮಕ ದೃಷ್ಟಿಕೋನಗಳು ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ಪ್ಯೂ ವರದಿ ಹೇಳಿದೆ. ಮೂರನೇ ಎರಡರಷ್ಟು ಭಾರತೀಯರು ಚೀನಾದ ಬಗ್ಗೆ ವಿರೋಧ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.