ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ – 1 ಕಪ್
ಪನೀರ್ – 100 ಗ್ರಾಂ
ಈರುಳ್ಳಿ – 2 ( ಹೆಚ್ಚಿದ್ದು)
ಶುಂಠಿ – 1 ಟೀಸ್ಪೂನ್ (ಹೆಚ್ಚಿದ್ದು)
ಬೆಳ್ಳುಳ್ಳಿ – 6-8
ಹಸಿಮೆಣಸಿನಕಾಯಿ – 1 (ಸೀಳಿದ್ದು)
ಟೊಮ್ಯಾಟೋ – 1 (ಹೆಚ್ಚಿದ್ದು)
ಗೋಡಂಬಿ – 1 ಟೀಸ್ಪೂನ್
ಧನಿಯಾ ಪೌಡರ್ – 1 ಟೀಸ್ಪೂನ್
ಚಿಲ್ಲಿ ಪೌಡರ್ – 1/2 ಟೀಸ್ಪೂನ್
ಅರಿಶಿನ – 1/4 ಟೀಸ್ಪೂನ್
ಕಸೂರಿ ಮೇಥಿ – 1 ಟೀಸ್ಪೂನ್
ಕ್ರೀಮ್ – 2 ಟೇಬಲ್ ಸ್ಪೂನ್
ಪುದೀನ ಎಲೆಗಳು (ಬೇಕಿದ್ದರೆ)
ಏಲಕ್ಕಿ (ಬೇಕಿದ್ದರೆ)
ಎಣ್ಣೆ – 2 ಟೇಬಲ್ ಸ್ಪೂನ್
ಬೆಣ್ಣೆ – 1 ಟೇಬಲ್ ಸ್ಪೂನ್
ಉಪ್ಪು – ಸ್ವಲ್ಪ
ನೀರು – ಅಗತ್ಯವಿದ್ದಷ್ಟು
ಒಗ್ಗರಣೆಗೆ
ಜೀರಿಗೆ – 1 ಟೀ ಚಮಚ
ಚಕ್ಕೆ – 1 ಇಂಚು
ಲವಂಗ – 4
ಚಕ್ರ ಮೊಗ್ಗು – 1
ಪಲಾವ್ ಎಲೆ – 1
ಮಾಡುವ ವಿಧಾನ:
1. ಅಕ್ಕಿಯನ್ನು ನೆನಸಿಡಿ:
ಮೊದಲಿಗೆ ಬಾಸುಮತಿ ಅಕ್ಕಿಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿಡಿ.
2. ಪನೀರ್ ಹುರಿದುಕೊಳ್ಳಿ:
ಒಂದು ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ಅದರೊಳಗೆ ಪನೀರ್ ಹುರಿದುಕೊಳ್ಳಿ.
3. ಅದೇ ಪ್ಯಾನ್ ಗೆ, ಒಂದೆರಡು ಚಮಚದಷ್ಟು ಈರುಳ್ಳಿ ಹಾಕಿ, ಹುರಿದು ತೆಗೆದಿಟ್ಟುಕೊಳ್ಳಿ.
4. ನಂತರ, ಉಳಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಕಿ, ಹಸಿವಾಸನೆ ಹೋಗುವವರೆಗೆ ಹುರಿದು, ನಂತರ ಟೊಮ್ಯಾಟೋ ಹಾಕಿ ಚೆನ್ನಾಗಿ ಬಾಡಿಸಿ. ಕೊನೆಯಲ್ಲಿ ಗೋಡಂಬಿ ಹಾಕಿ, ಸ್ವಲ್ಪ ಹೊತ್ತು ಹುರಿದುಕೊಳ್ಳಿ.
5. ಈ ಮಿಶ್ರಣವು ತಣ್ಣಗಾದ ಮೇಲೆ, ನೀರನ್ನು ಹಾಕದೆ, ರುಬ್ಬಿಕೊಳ್ಳಿ.
6. ಒಂದು ದಪ್ಪ ತಳದ ಬಾಣಲೆಗೆ ಬೆಣ್ಣೆ ಹಾಕಿ, ಮೇಲೆ ಒಗ್ಗರಣೆಗೆ ಹೇಳಿದ ಸಾಮಗ್ರಿಗಳನ್ನು ಹಾಕಿ, ಅದನ್ನು ಹುರಿದುಕೊಳ್ಳಿ
7. ನಂತರ, ರುಬ್ಬಿದ ಮಿಶ್ರಣವನ್ನು ಹಾಕಿ, ಧನಿಯಾ ಪೌಡರ್, ಚಿಲ್ಲಿ ಪೌಡರ್, ಅರಿಶಿನ ಹಾಕಿ 3 ನಿಮಿಷ ಹುರಿಯಿರಿ.
8. ನಂತರ, ಹುರಿದ ಪನೀರ್, ಈರುಳ್ಳಿ, ಕ್ರೀಮ್, ಕಸೂರಿ ಮೇಥಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
9. ನೆನೆಸಿಟ್ಟ ಅಕ್ಕಿಯನ್ನು ಹಾಕಿ, ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ, 15-20 ನಿಮಿಷ ಬೇಯಿಸಿಕೊಳ್ಳಿ.
ಈಗ ರುಚಿಯಾದ ಪನೀರ್ ಬಟರ್ ಮಸಾಲ ರೈಸ್ ಸವಿಯಲು ರೆಡಿ.
ಉಪಯುಕ್ತ ಟಿಪ್ಪಣಿಗಳು:
ನೀವು ಈರುಳ್ಳಿ ಪೇಸ್ಟ್, ಟೊಮ್ಯಾಟೋ ಪ್ಯೂರಿ, ಗೋಡಂಬಿ ಪೇಸ್ಟ್, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಪ್ರತ್ಯೇಕವಾಗಿ ತಯಾರಿಸಿ ಹಾಕಬಹುದು.
ಬೇಕಿದ್ದಲ್ಲಿ ಪುದೀನ ಎಲೆಗಳು ಮತ್ತು ಏಲಕ್ಕಿ ಸೇರಿಸಬಹುದು.








