ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ 19 ವೈರಸ್ ಸೋಂಕಿಗೆ ಸ್ಪೇನ್ ತತ್ತರಿಸಿ ಹೋಗಿದೆ. ಸ್ಪೇನ್ ದೇಶದಾದ್ಯಂತ ಮೂರು ವಾರಗಳಿಂದ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ, ಕೊರೊನಾ ಸೋಂಕಿನಿಂದ ಮೃತರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 838 ಜನರು ಸಾವನ್ನಪ್ಪಿದ್ದು, ಇದರೊಂದಿಗೆ ಸ್ಪೇನ್ ನಲ್ಲಿ ಸಾವಿನ ಸಂಖ್ಯೆ 6,528ಕ್ಕೆ ಏರಿದೆ. ಅಲ್ಲದೆ 24 ಗಂಟೆಯಲ್ಲಿ ಸೋಂಕು ಪೀಡಿತರ ಸಂಖ್ಯೆ 72,248 ರಿಂದ 78,797ಕ್ಕೆ ಏರಿಕೆಯಾಗಿದೆ.
ಸ್ಪೇನ್ ದೇಶದ ಜನರನ್ನು ಉದ್ದೇಶಿಸಿ ಶನಿವಾರ ಪ್ರಧಾನಿ ಪೆಡ್ರೋ ಸ್ಯಾನ್ ಚೆಝ್ ಮಾತನಾಡಿದ್ದು, ತುರ್ತು ಅಗತ್ಯವಿಲ್ಲದ ಎಲ್ಲಾ ಉದ್ಯೋಗಿಗಳು ಇನ್ನೂ ಎರಡು ವಾರಗಳ ಕಾಲ ಮನೆಯಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.
ಸ್ಪೇನ್ ಸರ್ಕಾರ ಕೈಗೊಂಡ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿರುವ ಯೂನಿಯನ್ಸ್ ಹಾಗೂ ಉದ್ಯಮಿಗಳ ಸಂಘ, ಇದರಿಂದಾಗಿ ಸ್ಪೇನ್ ಆರ್ಥಿಕತೆ ಹಾಗೂ ಕೈಗಾರಿಕಾ ವಲಯಕ್ಕೆ ಅನುಕೂಲವಾಗಲಿದೆ ಎಂದು ಹೇಳಿದೆ.