ಬೆಂಗಳೂರಲ್ಲಿ ತಗ್ಗಿದ ಕೊರೊನಾ : 8,696 ಜನರಿಗೆ ಸೋಂಕು
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ.
ಇಂದು ನಗರದಲ್ಲಿ 8,696 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೊಮ್ಮನಹಳ್ಳಿ- 935, ಬೆಂಗಳೂರು ಪೂರ್ವ- 1,131, ಮಹಾದೇವಪುರ- 1,298,
ಬೆಂಗಳೂರು ದಕ್ಷಿಣ- 858, ಬೆಂಗಳೂರು ಪಶ್ಚಿಮ- 724, ಆರ್ಆರ್ ನಗರ- 534 ,
ದಾಸರಹಳ್ಳಿ- 376 , ಯಲಹಂಕ- 658 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಈ ಪೈಕಿ 1,388 ಮಂದಿ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ನಗರದಲ್ಲಿ ಸದ್ಯ 3,64,382 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.










