ಪಟಾಕಿ ಹಚ್ಚುವ ವೇಳ ಅವಘಡ | 9 ಮಕ್ಕಳ ಕಣ್ಣಿಗೆ ಹಾನಿ

1 min read
crackers saaksha tv

ಪಟಾಕಿ ಹಚ್ಚುವ ವೇಳ ಅವಘಡ | 9 ಮಕ್ಕಳ ಕಣ್ಣಿಗೆ ಹಾನಿ

ಬೆಂಗಳೂರು : ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸೋದು ವಿಶೇಷ.

ಆದ್ರೆ ಪ್ರತಿ ಬಾರಿ ಹೀಗೆ ಪಟಾಕಿ ಸಿಡಿಸುವ ವೇಳೆ ಸಾಕಷ್ಟು ಮಂದಿಯ ಕಣ್ಣುಗಳಿಗೆ ಹಾನಿ ಆಗುತ್ತದೆ.

ಅದರಂತೆ ಈ ಬಾರಿಯೂ ಕೂಡ ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವ ವೇಳೆ ಅವಘಡ ಸಂಭವಿಸಿವೆ.

crackers saaksha tv

ಪ್ರತ್ಯೇಕ ಪ್ರರಕಣಗಳಲ್ಲಿ ನಗರದಲ್ಲಿ ಈವರೆಗೂ 9 ಮಕ್ಕಳ ಕಣ್ಣಿಗೆ ಹಾನಿಯಾಗಿದೆಯಂತೆ.

ನಗರ ವಿವಿಧ ಆಸ್ಪತ್ರೆಗಳಲ್ಲಿ, ಈ ಮಕ್ಕಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ಮಿಂಟೋ ಆಸ್ಪತ್ರೆಯತ್ತ ಬರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿದುಬಂದಿದೆ.

ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡ ಮಕ್ಕಳನ್ನು ಕರೆದುಕೊಂಡು ಪೋಷಕರು ಮಿಂಟೋ ಆಸ್ಪತ್ರೆಯತ್ತ ಬರುತ್ತಿದ್ದಾರಂತೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd