ಗಾಂಧೀನಗರ: ಗುಜರಾತ್ ನ (Gujarat) ಸೋಮನಾಥ ದೇವಾಲಯದ ಸುತ್ತ ಅತಿಕ್ರಮವಾಗಿ ನಿರ್ಮಾಣಗೊಂಡಿದ್ದ 9 ಮಸೀದಿ ಹಾಗೂ ದರ್ಗಾ ಸೇರಿದಂತೆ 45 ವಸತಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ಸೋಮನಾಥ ದೇವಾಲಯದ ಹತ್ತಿರ ಸರ್ಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣವಾಗಿತ್ತು. ಈ ಭೂಮಿಯಲ್ಲಿ ಐವತ್ತಕ್ಕೂ ಅಧಿಕ ಕಟ್ಟಡಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಅಲ್ಲಿಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸೋಮನಾಥ ದೇವಾಲಯದ ಹತ್ತಿರ 103 ಎಕರೆ ಸರ್ಕಾರಿ ಭೂಮಿ ಆಕ್ರಮಿಸಿಕೊಂಡಿರುವುದು ಪೊಲೀಸ್ ಮತ್ತು ಆಡಳಿತಾತ್ಮಕ ಕಾರ್ಯಾಚರಣೆಗೆ ಕಾರಣವಾಗಿದೆ. ಈ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಭಾಗವಾಗಿ 45 ವಸತಿ ಕಟ್ಟಡಗಳ ಜೊತೆಗೆ 9 ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸಲಾಯಿತು. ಅಂದರೆ ಸುಮಾರು 320 ಕೋಟಿ ರೂ. ಮೌಲ್ಯದ ಅಂದಾಜು 102 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.