ಅಮೆರಿಕದ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಆರ್ಯನ್ ರೆಡ್ಡಿ, ಹುಟ್ಟುಹಬ್ಬದ ಪಾರ್ಟಿಯ ಸಮಯದಲ್ಲಿ ನಡೆದ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ತೆಲಂಗಾಣದ ಉಪ್ಪಲ್ ಮೂಲದ ಈ ಯುವಕ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾಗ, ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದ್ದು, ಅದು ಆತನಿಗೆ ತಗುಲಿದ ಪರಿಣಾಮ ತಕ್ಷಣವೇ ಸಾವಿಗೀಡಾಗಿದ್ದಾನೆ.
ನವೆಂಬರ್ 13ರಂದು ನಡೆದ ಈ ಘಟನೆ ಪಾರ್ಟಿ ವೇಳೆ ಘೋರ ದುರಂತವೊಂದು ನಡೆದಿದೆ. ಪಾರ್ಟಿಯಲ್ಲಿ ತೆಲಂಗಾಣದ ಸೈರಾಮ್ ನಗರ ಮೂಲದ ಆರ್ಯನ್, ಅಮೆರಿಕಾದಲ್ಲಿ ಕೆಲವು ದಿನಗಳ ಹಿಂದೆ ಖರೀದಿಸಿದ ಬಂದೂಕನ್ನು ತೋರಿಸುವ ಸಮಯದಲ್ಲಿ ಆಕಸ್ಮಿಕವಾಗಿ ಗುಂಡು ಹಾರಿದೆ. ಆ ಗುಂಡು ಆರ್ಯನ್ ರೆಡ್ಡಿಗೆ ತಗುಲಿದ್ದು, ಆತನ ಜೀವ ಉಳಿಸಲು ಸಾಧ್ಯವಾಗಿಲ್ಲ.
ಅಮೆರಿಕಾದ ಅಧಿಕಾರಿಗಳಿಂದ ಪ್ರಕರಣದ ತನಿಖೆ ಮುಂದುವರಿದಿದ್ದು, ಮೃತದೇಹವನ್ನು ಇಂದು ರಾತ್ರಿ ತೆಲಂಗಾಣದ ಉಪ್ಪಲ್ ಪ್ರದೇಶದಲ್ಲಿರುವ ಆತನ ಕುಟುಂಬದವರಿಗೆ ತಲುಪಿಸುವ ಕಾರ್ಯ ನಡೆಯುತ್ತಿದೆ. ಈ ದುರಂತದಿಂದ ಕುಟುಂಬ ಮತ್ತು ಆತನ ಸ್ನೇಹಿತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಆರ್ಯನ್ ರೆಡ್ಡಿಯ ಹಠಾತ್ ಸಾವಿನಿಂದ ತೆಲಂಗಾಣದಲ್ಲಿ ಆತನ ಕುಟುಂಬ ಮತ್ತು ಸ್ನೇಹಿತರು ಆಘಾತಗೊಂಡಿದ್ದಾರೆ.