koppal | ಒಂದೇ ಬೈಕ್ನಲ್ಲಿ 9 ಜನ್ರು ಸವಾರಿ
ಕೊಪ್ಪಳ : ಸಾಮಾನ್ಯವಾಗಿ ಒಂದು ಬೈಕ್ ನಲ್ಲಿ ಅಬ್ಬಬ್ಬಾ ಅಂದ್ರೆ ಮೂರು ಜನ ಹೋಗಬಹುದು.
ಕೆಲ ಸಂದರ್ಭಗಳಲ್ಲಿ ನಾಲ್ಕೂ ಜನರು ಹೋಗ್ತಾರೆ. ಆದ್ರೆ ಕೊಪ್ಪಳದಲ್ಲಿ ಒಂದೇ ಬೈಕ್ನಲ್ಲಿ ಸುಮಾರು 9 ಜನ ಸವಾರಿ ಮಾಡಿದ್ದಾರೆ.
ಕೊಪ್ಪಳದ ಗಿಣಿಗೇರಾ ಬಳಿ ಒಂದೇ ಬೈಕ್ನಲ್ಲಿ 9 ಜನ ಸವಾರಿ ಮಾಡಿದ್ದಾರೆ.
ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಬೈಕ್ ನಲ್ಲಿ ನಾಲ್ಕು ಜನರು ಹಿರಿಯರು, ಐದು ಜನ ಮಕ್ಕಳು ಸವಾರಿ ಮಾಡಿದ್ದಾರೆ.
ಈ ಕುಟುಂಬ ಗಿಣಗೇರಾದಿಂದ ಗಂಗಾವತಿ ಕಡೆ ಹೊರಟಿತ್ತು ಎಂದು ತಿಳಿದು ಬಂದಿದೆ.
ಇನ್ನು ಒಂದೇ ಬೈಕ್ನಲ್ಲಿ 9 ಮಂದಿ ಸವಾರಿ ಮಾಡಿರೋದನ್ನ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹೀರೋ ಹೊಂಡಾ ಸ್ಪೆಂಡರ್ ಬೈಕ್ನಲ್ಲಿ 9 ಜನ ಸವಾರಿ ಮಾಡಿರೋದು ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ.
9 people riding on the same bike in koppal