ಶೇ 95 ರಷ್ಟು ಜನರಿಗೆ ಬಿಜೆಪಿ ಬೇಕಿಲ್ಲ – ಅಖಿಲೇಶ್ ಯಾದವ್
ದೇಶದಲ್ಲಿ ದಿನೇ ದಿನೇ ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗ್ತಲೇ ಇದ್ದು, ಜನ ಸಾಮಾನ್ಯರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಕೆಲ ಜನಪ್ರತಿನಿಧಿಗಳು ಉಡಾಫೆಯ ಉತ್ತರ ನೀಡ್ತಿರೋದು ಜನರ ಕೆಂಗಣ್ಣಿಗೂ ಗುರಿಯಾಗ್ತಿದೆ. ಇತ್ತೀಚೆಗೆ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ ದೇಶದ ಶೇ 95ರಷ್ಟು ಜನರಿಗೆ ಪೆಟ್ರೋಲ್ ಡೀಸೆಲ್ ಅಗತ್ಯವಿಲ್ಲ ಎಂದಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ದೇಶದ ಶೇ 95ರಷ್ಟು ಜನರಿಗೆ ಬಿಜೆಪಿ ಅಗತ್ಯವಿಲ್ಲ ಎಂದು ಟಾಂಟ್ ಕೊಟ್ಟಿದ್ದಾರೆ.
ಯೋಗಿ ಆದಿತ್ಯನಾಥ್ ಕಾರ್ಯಕ್ರಮಕ್ಕೆ ರಿವಲ್ವಾರ್ ಸಮೇತ ನುಗ್ಗಿದ ವ್ಯಕ್ತಿ – ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು
ಹವದು ತಲಾವಾರು ಆದಾಯಕ್ಕೆ ಹೋಲಿಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಅಷ್ಟೇನೂ ಏರಿಕೆಯಾಗಿಲ್ಲ. ಶೇ 95ರಷ್ಟು ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವೇ ಇಲ್ಲ ಎಂದು ಸಚಿವ ಉಪೇಂದ್ರ ತಿವಾರಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್ ಜನರಿಗೆ ಪೆಟ್ರೋಲ್ ಡೀಸೆಲ್ ದರ ಏರಿಕೆ ಪರಿಣಾಮ ಬೀರದು. ಸಚಿವರಿಗೂ ಅದು ಬೇಕಿಲ್ಲ. ಏಕೆಂದರೆ ಜನ ಅವರನ್ನು ಅಧಿಕಾರದಿಂದ ಇಳಿಸುತ್ತಾರೆ.
ಶೇ 95ರಷ್ಟು ಜನರಿಗೆ ಬಿಜೆಪಿಯೂ ಬೇಕಿಲ್ಲ ಎಂದಿದ್ದಾರೆ. ಅಲ್ಲದೇ ಜೀಪ್ ಗೆ ಡೀಸೆಲ್ ಅಗತ್ಯವಿದೆಯೇ ಎಂದು ವ್ಯಂಗ್ಯಾತ್ಮಕವಾಗಿ ಪ್ರಶ್ನೆ ಮಾಡಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ಲಖೀಂಪುರದಲ್ಲಿ ರೈತರ ಮೇಲೆ ಬಿಜೆಪಿ ಕಾರ್ಯಕರ್ತರು ಜೀಪ್ ಹಾರಿಸಿದ ಪ್ರಕರಣವನ್ನೇ ಗಮನದಲ್ಲಿಟ್ಟುಕೊಂಡು ಜೀಪ್ ಹೇಳಿಕೆ ನೀಡಿದ್ದಾರೆ.