ವಿದ್ಯುತ್ ಶಾಕ್ ನಿಂದಾಗಿ 9 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ದೆಹಲಿಯ ಕಲ್ಕಾಜಿ ದೇವಸ್ಥಾನದಲ್ಲಿ ವಿದ್ಯುತ್ ಶಾಕ್ ನಿಂದಾಗಿ 9ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಈ ವೇಳೆ ಉಂಟಾದ ಕಾಲ್ತುಳಿತದ ಸಂದರ್ಭದಲ್ಲಿ ಇನ್ನೂ 6 ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ದೇವಸ್ಥಾನದಲ್ಲಿ ಸಾಲಿನಲ್ಲಿ ನಿಂತಿದ್ದ ಬಾಲಕ ರೈಲಿಂಗ್ ಗೆ ತಾಗಿ ಸಾವನ್ನಪ್ಪಿದ್ದಾನೆ. ಹ್ಯಾಲೊಜೆನ್ ದೀಪಗಳಿಗೆ ಬಳಸಲಾದ ವಿದ್ಯುತ್ ತಂತಿಯು ತುಂಡಾಗಿ ಕಬ್ಬಿಣದ ರೇಲಿಂಗ್ ಗೆ ಸ್ಪರ್ಶಿಸಿದಾಗ ಶಾಕ್ ಹೊಡೆದಿದೆ ಎನ್ನಲಾಗಿದೆ.