ಪಾಪಿಯೊಬ್ಬ ತನ್ನ ಅಪ್ಪ-ಅಮ್ಮನೊಂದಿಗೆ ಸೇರಿಕೊಂಡು ಪತ್ನಿಯ ಗುಪ್ತಾಂಗಕ್ಕೆ ಮೆಣಸಿನ ಪುಡಿ, ರಾಡ್ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ.
ಈ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ರಾಜ್ ಗಢದಲ್ಲಿನ ತಮ್ಮ ಮನೆಯಲ್ಲಿ ಆಕೆಯನ್ನು ಮತ್ತೊಬ್ಬರೊಂದಿಗೆ ನೋಡಿದ್ದಾಗಿ ಹೇಳಿ, ಚಿತ್ರ ಹಿಂಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತೆ-ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ, ಅತ್ತಿಗೆ, ಅತ್ತೆ ಮತ್ತು ಮಾವ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆಕೆಯನ್ನು ಬೆತ್ತಲು ಮಾಡಿ ಆಕೆಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ್ದರು. ಖಾಸಗಿ ಭಾಗಗಳು, ತೊಡೆಗಳು ಮತ್ತು ದೇಹದ ಇನ್ನಿತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್ ನಿಂದ ಸುಟ್ಟು ಹಾಕಿದ್ದಾರೆ. ಮಾವ ಮೆಣಸಿನ ಪುಡಿ ಹಾಕಿದ್ದಾರೆಂದು ಮಹಿಳೆ ಆರೋಪಿಸಿದ್ದು, ಪತಿ ಮತ್ತು ಮಾವ ಸಂತ್ರಸ್ತೆಯನ್ನು ಬೈಕ್ನಲ್ಲಿ ಕರೆದೊಯ್ದು ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈಗ ಮಹಿಳೆಯು ತನ್ನ ಪೋಷಕರ ಮನೆಗೆ ಹೋಗಿದ್ದು, ದೂರು ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








